AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 20 May: ಈ ರಾಶಿಯವರು ಯಾರದೋ‌ ಮಾತು ನಂಬಿ ಮೋಸ ಹೋಗುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ, ಮಂಗಳವಾರ ಆಪ್ತರಿಂದ ಮೋಸ, ಇನ್ನೊಬ್ಬರ ಸಹಾನುಭೂತಿಯ ಅಪೇಕ್ಷೆ, ಹೊಸ ಕಾರ್ಯದಲ್ಲಿ ಕುತೂಹಲವಿರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 20 May: ಈ ರಾಶಿಯವರು ಯಾರದೋ‌ ಮಾತು ನಂಬಿ ಮೋಸ ಹೋಗುವರು
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 20, 2025 | 12:02 AM

ಬೆಂಗಳೂರು, ಮೇ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಮಂಗಳವಾರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ ಕರಣ : ಬಾಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 53 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:17, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:29 – 14:05.

ಮೇಷ ರಾಶಿ: ಶುಭ ಕಾರ್ಯವನ್ನು ಮಾಡಲು ಸಂಗಾತಿಯು ಪ್ರೇರಿಸಬಹುದು. ನಿಮ್ಮ ನೂತನ ಯೋಜನೆಗಳನ್ನು ಆರಂಭಿಸಲು ಮನಸ್ಸು ಮಾಡುವಿರಿ. ಬಂಧುಗಳ ಸಹಾಯದಿಂದ ಈ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಪ್ರೇಮ ಸಂಬಂಧ ಕಟ್ಟುವ ಉತ್ತಮ ಸಮಯ. ಪ್ರೀತಿಯ ಶಕ್ತಿ ನಿಮ್ಮನ್ನು ಭಾವುಕಗೊಳಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಸಹಕಾರ ಸಿಗಲಿದೆ. ಕುಟುಂಬದ ನಿರ್ಲಕ್ಷ್ಯ ಮನಸ್ಸಿಗೆ ಬೇಸರ ತರಬಹುದು. ಮನಸ್ಸಿನಲ್ಲಿ ಒತ್ತಡ ಇರುವುದರಿಂದ ಹೆಚ್ಚು ವಿಶ್ರಾಂತಿ ಬೇಕು. ದಾಂಪತ್ಯವು ಸುಂದರವಾಗಲು ಉಡುಗೊರೆ ಆಶ್ಚರ್ಯದ ಉಡುಗೊರೆ ಕೊಡುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು.

ವೃಷಭ ರಾಶಿ: ದೇವರ ಭಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗುವುದು. ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ಖರೀದಿಯಲ್ಲಿ ಹಣದ ಜಾಗರೂಕತೆ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆದರೆ ಆತ್ಮತೃಪ್ತಿ ಲಭಿಸುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಸಮಯಕೊಡಲಾರರು. ಕೆಲಸದ ನಿಟ್ಟಿನಲ್ಲಿ ಹೊಸ ಯೋಜನೆಗಳು ಆರಂಭವಾಗುತ್ತವೆ. ಬುದ್ಧಿಮತ್ತೆಯಿಂದ ಹೊಸ ಕಲಿಕೆ ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಸಂಗಾತಿಯ ಪ್ರೀತಿಯ ಇಂಗಿತಗಳು ಸಂತೋಷ ನೀಡುತ್ತವೆ. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.

ಮಿಥುನ ರಾಶಿ: ನಿಮ್ಮ ಬಗ್ಗೆ ಕೀರ್ತಿಯನ್ನು ಕೊಂಡಾಡುವರು. ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಯೋಜನೆಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ. ಸುಳ್ಳನ್ನು ಸತ್ಯದಂತೆ ಹೇಳುವಿರಿ. ಏಕಪಕ್ಷದ ಪ್ರೇಮದಿಂದ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಕ್ಕೆ ಉತ್ತಮ ದಿನ. ಕೆಲಸದಲ್ಲಿ ಹೆಚ್ಚು ಸಡಿಲತೆ ಇಟ್ಟುಕೊಳ್ಳಿ. ಕುಟುಂಬದೊಂದಿಗೆ ಹೊರಗಿನ ಪ್ರವಾಸ ಯೋಜನೆ ರೂಪಿಸುವಿರಿ. ಸಂಗಾತಿಯ ತೀವ್ರ ವರ್ತನೆ ಇಂದು ನಿಮ್ಮ ಮನಸ್ಸನ್ನು ಘಾಸಿಗೊಳಿಸುತ್ತದೆ. ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು.

ಕರ್ಕಾಟಕ ರಾಶಿ: ನೀವು ಮಾಡುವ ಕಾಳಜಿಯು ಇಷ್ಟವಾಗಲಿದೆ. ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯ, ತಾಳ್ಮೆ, ಆತ್ಮವಿಶ್ವಾಸವನ್ನು ಬಿಡದೇ ಕಾಪಾಡಿಕೊಳ್ಳಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿ ಸಂಗಾತಿ ಮಾಡುವಳು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ಹಣದ ಅವಶ್ಯಕತೆ ನಿಮಗೆ ಹಣದ ಮೌಲ್ಯ ತಿಳಿಸುತ್ತದೆ. ಮನಸ್ಸು ಹಾಗೂ ಮಾತುಗಳಲ್ಲಿ ಸ್ಥಿರತೆ ಇರಲಿ. ಪ್ರೇಮ ಸಂಬಂಧದಲ್ಲಿ ಸ್ಪಷ್ಟತೆ ಅಗತ್ಯ. ಹೊಸ ವಿಷಯಗಳಲ್ಲಿ ನಿಮ್ಮ ಬುದ್ಧಿಮತ್ತೆ ಅನುಭವವಾಗುತ್ತದೆ. ಸಂಗಾತಿಯ ಪ್ರೀತಿ ತೋರಿಕೆ ನಿಮಗೆ ಆಧ್ಯಾತ್ಮಿಕ ಶಾಂತಿ ತರಲಿದೆ. ಸಹನೆಯನ್ನು ನಿಮ್ಮ ದೈನಂದಿನ ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನೂ ಗಮನವನ್ನೂ ಕೊಡಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ.

ಸಿಂಹ ರಾಶಿ: ನೆಮ್ಮದಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲಸ ಹಾಗು ಕುಟುಂಬವನ್ನು ನೀವು ಸಮಾನವಾಗಿ ತೂಗಿಸಿಕೊಂಡು ಹೋಗುವುದು ಸಾಧ್ಯವಾಗದು. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಸಂತೋಷವನ್ನು ಹಂಚಿಕೊಳ್ಳುವಿರಿ. ಹಣದ ವ್ಯವಹಾರ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮವು ಸತ್ಯವೆಂದು ತಿಳಿದುಕೊಳ್ಳಿ. ಸ್ನೇಹಿತರಿಂದ ವೃತ್ತಿಯಲ್ಲಿ బింబల ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ವೈವಾಹಿಕ ಜೀವನದ ಸುಂದರ ಅನುಭವವಿದೆ. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ಮಕ್ಕಳಿಂದ ನೀವು ದೂರಾಗುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಯಾವುದೇ ನಿಬಂಧನೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಪಕ್ಷಪಾತ ಧೋರಣೆ ಬೇಡ.

ಕನ್ಯಾ ರಾಶಿ: ವೃತ್ತಿಯಲ್ಲಿ ನಿಮಗೆ ಮೋಸವಾಗಲಿದೆ. ಯಾರದೋ‌ ಮಾತನ್ನು ನಂಬಿ ಮೋಸಹೋಗುವ ಸಂಭವವಿದೆ. ಈ ದಿನ ಹೆಚ್ಚಿನ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಕೊಡುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಹಣದ ಲಾಭಕ್ಕಾಗಿ ಹಿರಿಯರ ಆಶೀರ್ವಾದದಿಂದ ಶುಭ ಫಲ. ಪೋಷಕರ ಆರೋಗ್ಯದತ್ತ ಗಮನ ಅಗತ್ಯ. ಪ್ರೀತಿಯಲ್ಲಿ ಸಹನಶೀಲತೆ ಅಗತ್ಯ. ಬಾಕಿಯ ವಿಷಯಗಳ ತೀರ್ಮಾನಕ್ಕೆ ಒಳ್ಳೆಯ ಸಮಯ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯ. ಸಂಗಾತಿಯೊಂದಿಗೆ ಮಾತು ಇಲ್ಲದಿರುವುದು ಭಾವನಾತ್ಮಕ ನೋವು ತಂದೀತು. ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.

ತುಲಾ ರಾಶಿ: ಕೆಲಸಗಳು ನಿಮ್ಮ ನೆನಪಿಗೆ ಬಾರದೇ ಇರಬಹುದು. ಇದರಿಂದ ಅಪಮಾನವಾಗುವ ಸಾಧ್ಯತೆ ಇದೆ. ಇಂದು ಜಾಣತನದಿಂದ ಕೆಲಸ ಮಾಡಿಕೊಂಡು ನಿಶ್ಚಿಂತರಾಗುವಿರಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ಪುತ್ರೋತ್ಸವವಿರಲಿದೆ. ಹೂಡಿಕೆಯಲ್ಲಿ ಲಾಭದ ಸೂಚನೆಗಳಿವೆ. ಸ್ನೇಹಿತರ ಮೂಲಕ ಹೊಸ ಸಂಪರ್ಕಗಳು ದೊರೆಯಲಿವೆ. ಪ್ರೇಮ ಸಂಬಂಧದ ಗೊಂದಲಗಳು ತೀರಬಹುದು. ಹೊಸ ಉದ್ಯಮದ ಪ್ರಾರಂಭಕ್ಕೆ ಇದು ಉತ್ತಮ ದಿನ. ಹಾಸ್ಯಪ್ರಜ್ಞೆಯೇ ನಿಮ್ಮ ನಿಜವಾದ ಶಕ್ತಿ. ಸಂಗಾತಿಯ ಆರೋಗ್ಯ ಅಥವಾ ಮನಃಸ್ಥಿತಿಗೆ ಗಮನ ಹರಿಸಿ. ವ್ಯಾಪಾರದಲ್ಲಿ ಲಾಭವು ಅಧಿಕವಾಗಲಿದೆ. ಅನ್ಯರ ಕಾರಣದಿಂದ ವಿದೇಶದ ವ್ಯಾಮೋಹವು ಹೆಚ್ಚಾದೀತು. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಸ್ವಪ್ನದ ಚಿಂತೆಯಲ್ಲಿಯೇ ಇರಬಹುದು.

ವೃಶ್ಚಿಕ ರಾಶಿ: ನಿಮ್ಮ ಸ್ಥೈರ್ಯವು ಹಲವರಿಗೆ ಸ್ಪೂರ್ತಿಯಾಗಲಿದೆ. ನಿಮ್ಮ ಪಿತ್ರಾರ್ಜಿತ ಆಸ್ತಿಯ ಸಮಸ್ಯೆಯು ಅನ್ಯರಿಂದ ಸರಿಯಾಗುವುದು. ಅತಿಯಾಗಿ ಭಾವನಾತ್ಮಕವಾಗುವುದು. ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಯಾವುದನ್ನೂ ಅಳುಕಿನಿಂದ ಮಾಡಲಾರಿರಿ. ಪ್ರೀತಿಯ ಮಹತ್ವವನ್ನು ನೀವು ಹೊಸದಾಗಿ ಅರಿಯುವಿರಿ. ಉತ್ತಮ ಯೋಜನೆಗಳ ಮೂಲಕ ಯಶಸ್ಸು ಗಳಿಸಬಹುದು. ಆರೋಗ್ಯದ ಬಗ್ಗೆ ಜಾಗರೂಕತೆ ಇರಲಿ. ಹೊಸ ಬದ್ಧತೆಗಳು ಆರಂಭವಾಗುವ ಸೂಚನೆ. ಇಂದು ನಿಮ್ಮ ಸಂಗಾತಿಯ ಸಾಂತ್ವನಮಯ ನಡೆ ಮನಸ್ಸಿಗೆ ಶಾಂತಿ ತರಲಿದೆ. ಕುಟುಂಬದ ಬೆಂಬಲ ನಿಮ್ಮಶಕ್ತಿ ಆಗಲಿದೆ. ವ್ಯವಹಾರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಪ್ರಯೋಗಕ್ಕೆ ತರುವಿರಿ. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಆರ್ಥಿಕ ವಿಚಾರವನ್ನು ಬಹಿರಂಗಪಡಿಸುವುದು ಬೇಡ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ಧನು ರಾಶಿ: ಯಾವ ಲಾಭವನ್ನೂ ನಗಣ್ಯ ಮಾಡುವುದು ಬೇಡ. ಬಂದಿದ್ದನ್ನು ಸ್ವೀಕರಿಸಿ, ಅನುಭವಿಸಿ. ನಿಮ್ಮ ದಿನಚರಿಯಲ್ಲಿ ವ್ಯತ್ಯಾಸವಾಗುವುದು. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಆರ್ಥಿಕತೆಯ ದುರ್ಬಲದಿಂದಾಗಿ ದುರ್ಮಾರ್ಗದವನ್ನು ಅನುಸರಿಸುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಹಣ ಮರಳಿ ಸಿಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದ ಕೆಲಸಗಳು ಮುಂದಿನ ದಿನಗಳಲ್ಲಿ ಫಲ ನೀಡಲಿವೆ. ಬಹುಕಾಲದ ನಿರೀಕ್ಷೆಯ ವಿಷಯದಲ್ಲಿ ಸಣ್ಣ ಕಂಡುಬರಬಹುದು. ಸಂಗಾತಿಯೊಂದಿಗೆ ಗುಣಮಟ್ಟದ ಕಳೆಯುವ ಅವಕಾಶ. ಮನಸ್ಸಿನಲ್ಲಿ ಶಾಂತಿ ಭಾಸವಾಗುವುದು. ತುರ್ತು ಕಾರ್ಯಗಳಿಂದ ನಿಮಗೆ ಒತ್ತಡ ಉಂಟಾಗಬಹುದು. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.

ಮಕರ ರಾಶಿ: ಯಾವುದನ್ನೂ ಕೈಲಾಗದು ಎಂದು ನೀವೇ ನಿರ್ಧರಿಸಿ ಸುಮ್ಮನಾಗಬೇಡಿ. ಕೈಲಾದ ಪ್ರಯತ್ನವಂತೂ ಇರಲಿ. ನೀವು ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಕ್ಕಳಿಂದ ಹಣಕಾಸು ಲಾಭ ಸಾಧ್ಯ. ಮನೆಯಲ್ಲಿ ಖರ್ಚು ಅಥವಾ ಇತರೆ ವಿಚಾರದಿಂದ ಗಲಾಟೆ ಉಂಟಾಗಬಹುದು. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳ ಸೂಚನೆಗಳಿವೆ. ಪರಿಚಯಗಳು ಭವಿಷ್ಯದ ಯಶಸ್ಸಿಗೆ ಕಾರಣವಾಗುತ್ತವೆ. ಸಂಗಾತಿಯೊಂದಿಗೆ ಸಂತೋಷದ ಸಂವಾದ ಸಾಧ್ಯ. ನೀವು ಸಾಲವನ್ನು ಮಾಡಿದ್ದರೆ, ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾನೂನಿನ ಪಾಠವನ್ನು ಹಿರಿಯರು ಮಾಡುವರು.

ಕುಂಭ ರಾಶಿ: ಪರರ ಬಗ್ಗೆ ಸ್ಪಂದನೆ ಇರುವುದು.‌ ಕಷ್ಟದಲ್ಲಿ ಇರುವವರಿಗೆ ನಿಮ್ಮಿಂದಾದ ಸಹಾನುಭೂತಿ ಕೊಡುವಿರಿ. ನೀವು ಇಂದು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಸಕಾರಾತ್ಮಕ ಚಿಂತನೆಯಲ್ಲಿ ತೊಡಗುವಿರಿ. ನಿಮ್ಮ ಕಾರ್ಯಗಳು ಅಪರಿಪೂರ್ವಾಗುತ್ತದೆ ಎಂಬ ಭರವಸೆಯಿದ್ದರೆ ಅದನ್ನು ಬಿಟ್ಟುಬಿಡಿ‌. ಆಕರ್ಷಕ ವ್ಯಕ್ತಿತ್ವ ಇತರರ ಗಮನ ಸೆಳೆಯುತ್ತದೆ. ಸಾಲವಿದ್ದರೆ ಅದನ್ನು ತಿರುಗಿಸಿ ಮುಕ್ತಗೊಳ್ಳುವ ಅವಕಾಶವಿದೆ. ಮನೆಯವರೊಂದಿಗೆ ಕೆಲಸಗಳಲ್ಲಿ ನಿರತರಾಗುವ ದಿನ. ಪ್ರೇಮ ಜೀವನದಲ್ಲಿ ಹೊಸ ತಿರುವು ಮೂಡಲಿದೆ. ಕೆಲಸದ ಒತ್ತಡದಿಂದ ದೂರವಿದ್ದು ಸಂಬಂಧಗಳಿಗೆ ಹೆಚ್ಚು ಸಮಯ ನೀಡಲಾಗುವುದು. ತಲೆ ಕೆಡಿಸಿಕೊಳ್ಳದೇ ಜಾಣ್ಮೆಯಿಂದ ಪರಿಹರಿಸಿ‌. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಆಪ್ತ ಬಂಧುವನ್ನು ಅಕಾಲದಲ್ಲಿ ಕಳೆದುಕೊಳ್ಳುವಿರಿ.

ಮೀನ ರಾಶಿ: ನಿಮಗೆ ಎಲ್ಲ ಕೆಲಸದಲ್ಲಿ ಕುತೂಹಲವಿರಲಿದೆ. ಹೊಸ ಊರನ್ನು ನೋಡುವ ಕನಸಿರುವುದು. ನೀವು ಇಂದು ಒಳ್ಳೆಯ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ದೀರ್ಘಕಾಲದ ಖಾಯಿಲೆಯು ಇಂದು ಸ್ವಲ್ಪ ಕಡಿಮೆಯಾಗಲಿದೆ. ಇಂದು ನಿಮ್ಮ ಮನಸ್ಸು ಶಾಂತವಾಗಿದ್ದು ಶ್ರೇಷ್ಠ ಚಿಂತನೆಗೆ ಇದು ಸೂಕ್ತ ಸಮಯವಾಗಿದೆ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿಸದ ಲಾಭ ಸಾಧ್ಯವಿದೆ. ಕುಟುಂಬದವರೊಂದಿಗೆ ಸಣ್ಣ ವಿಚಾರಗಳಿಗೆ ತೀವ್ರತೆ ಬೆಳೆಸಬೇಡಿ. ನಿಮ್ಮ ಸಂಗಾತಿಯ ಒಲವಿನ ನಡೆ ನಿಮಗೆ ಹೊಸ ಉತ್ಸಾಹ ನೀಡುತ್ತದೆ. ಗುರುಜನರ ಮಾರ್ಗದರ್ಶನದಿಂದ ಹೊಸ ಯೋಚನೆಗಳು ಬಲ ಪಡೆಯುತ್ತವೆ. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ನೀವು ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!