AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 19 May: ಈ ರಾಶಿಯವರು ಪ್ರೀತಿ ಕೊಟ್ಟವರಿಗೆ ಮಾತ್ರ ಪ್ರೀತಿ ಕೊಡುವರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ, ಸೋಮವಾರ ಅಪರಿಚಿತರಿಂದ ಪ್ರಶಂಸೆ, ನಿಮ್ಮದಲ್ಲದ ವಸ್ತುವಿನ ದುರಾಸೆ, ಕೈಗೊಂಡ ಕಾರ್ಯದಲ್ಲಿ ಅಡಚಣೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 19 May: ಈ ರಾಶಿಯವರು ಪ್ರೀತಿ ಕೊಟ್ಟವರಿಗೆ ಮಾತ್ರ ಪ್ರೀತಿ ಕೊಡುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:May 19, 2025 | 7:01 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ : ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮವಾರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ – 06 : 05 am, ಸೂರ್ಯಾಸ್ತ – 06 : 53 pm, ಇಂದಿನ ಶುಭಾಶುಭಕಾಲ: ರಾಹು ಕಾಲ 07:41 – 09:17 ಯಮಘಂಡ ಕಾಲ 10:53 – 12:29, ಗುಳಿಕ ಕಾಲ 14:05 – 15:41

ಮೇಷ ರಾಶಿ: ಎಲ್ಲವೂ ಅನುಕೂಲವಿದ್ದರೂ ನಿರ್ಲಕ್ಷ್ಯ ಮಾಡದೇ ಎಲ್ಲವನ್ನೂ ಸ್ಥೂಲದೃಷ್ಟಿಯಿಂದ ಗಮನಿಸಿ. ನೀವು ಅಪಾರ ಆತ್ಮವಿಶ್ವಾಸವನ್ನು ಪಡೆದಿದ್ದರೂ ಸರಿಯಾದ ಸಹಕಾರ ಸಿಗದೇ ಕಾರ್ಯವು ಅಪೂರ್ಣವಾಗುವುದು. ಮನೆಯಲ್ಲಿ ನಿಮ್ಮ ಶಕ್ತಿಯು ಸಮಸ್ಯೆಗಳನ್ನು ನಿವಾರಿಸುತ್ತದೆ. ಯಾರ ಮೇಲೋ ಅನುಮಾನಪಡುವುದಕ್ಕಿಂತ ಸರಿಯಾದ ಮಾಹಿತಿಯನ್ನು ಪಡೆದು ಮುಂದಡಿ ಇಡಿ. ಸಂಗಾತಿಯೊಂದಿಗೆ ಸುತ್ತಾಟದಲ್ಲಿ ಭಿನ್ನಾಭಿಪ್ರಾಯಗಳು ಸಾಧ್ಯ. ಇವುಗಳನ್ನು ನಿಭಾಯಿಸಲು ಶಾಂತಿ ಮತ್ತು ಬುದ್ಧಿವಂತಿಕೆ ಬಳಸಿ. ಸೋಮಾರಿತನವು ನಿಮ್ಮ ಕ್ರಿಯೆಗಳನ್ನು ತಪ್ಪಿಸಲು ಪ್ರಯತ್ನಿಸುವಂತೆ ಮಾಡುತ್ತದೆ. ವ್ಯಾಪಾರದಲ್ಲಿ ಚಟುವಟಿಕೆಗಳು ಸ್ವಲ್ಪ ನಿಧಾನವಾಗಿರುತ್ತವೆ. ಸಾಮರಸ್ಯಕ್ಕೆ ಬೇಕಾದಂತೆ ಯೋಜನೆಯನ್ನು ಹಮ್ಮಿಕೊಳ್ಳಿ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಅಲಕ್ಷ್ಯ ಮಾಡಿದರೆ ಉತ್ತಮ. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ.

ವೃಷಭ ರಾಶಿ: ನಿಮ್ಮ ಬಗ್ಗೆ ನಿಮಗೇ ಹೆಮ್ಮೆಯಾಗುವ ಸಾಧ್ಯತೆ ಇದೆ. ಮಕ್ಕಳಿಂದ ಋಣಾತ್ಮಕವಾದದ್ದನ್ನು ತಿಳಿದುಕೊಳ್ಳುವುದು ನಿರಾಶಾದಾಯಕವಾಗಿರುತ್ತದೆ. ಈ ಸಮಯದಲ್ಲಿ ಯಾರಿಂದಲೂ ಸಾಲ ಪಡೆಯುವುದು ಸೂಕ್ತವಲ್ಲ. ಯಾರಿಗೂ ಗೊತ್ತಾಗದಂತೆ ದಾನ ಮಾಡುವಿರಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಣಕಾಸಿನಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ಸಂಬಂಧಿಕರಿಗೆ ಹಣ ಕೊಡುವುದನ್ನು ತಪ್ಪಿಸಬೇಕು. ವೈವಾಹಿಕ ಜೀವನದಲ್ಲಿ ಇಂದು ವಿಭಿನ್ನ ಅನುಭವ ನಿಮಗೆ ಎದುರಾಗಬಹುದು. ನಿಮ್ಮ ಸುತ್ತಲಿರುವ ಉತ್ತಮ ಜನರೊಂದಿಗೆ ಸೇರಿದ್ದರೆ ಜೀವನ ಸುಗಮವಾಗುತ್ತದೆ. ಜ್ಞಾನವನ್ನು ಹಂಚಿಕೊಳ್ಳುವುದು ನಿಮಗೆ ಇನ್ನಷ್ಟು ಬಲವನ್ನು ನೀಡುತ್ತದೆ. ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಪ್ರೇಮವು ನಿಮಗೆ ಹಾಯೆನಿಸುವುದು. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ.

ಮಿಥುನ ರಾಶಿ: ಮನೆಯವು ನಿಮ್ಮ ಯೋಜನೆಗೆ ಅಡಚಣೆ ಉಂಟುಮಾಡಬಹುದು. ಅದಕ್ಕಾಗಿ ಕೋಪದಿಂದ ನಿಂದಿಸುವಿರಿ. ಸರಳತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಹಿರಿಯರ ಆಶೀರ್ವಾದ ಪಡೆದುಕೊಂಡು ಕಾರ್ಯಾರಂಭಿಸುವುದು ಶುಭ. ಮಕ್ಕಳೊಂದಿಗೆ ಸಮಯ ಕಳೆಯುವುದು ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ಸಂಗಾತಿಯ ಪ್ರೀತಿ ಮತ್ತು ಅಕ್ಕರೆಯ ಸ್ಪರ್ಶದಿಂದ ಮನಸ್ಸು ಹಗುರವಾಗುತ್ತದೆ. ಪ್ರಯಾಣವು ಹಿತವಾಗದೇ ಇರುವುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ನಿಮ್ಮ ಮನಸ್ಸಿನ ಮೇಲೆ ಆಕ್ರಮಣಗಳು ಆಗಬಹುದು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ.

ಕರ್ಕಾಟಕ ರಾಶಿ: ಪರಿಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನಿರೀಕ್ಷಿಸುವಿರಿ. ತಮ್ಮ ವೃತ್ತಿಜೀವನದ ಬಗ್ಗೆ ತಿಳಿದಿರಬೇಕು. ಯಾರೊಂದಿಗಾದರೂ ವಿವಾದಕ್ಕೆ ಸಿಲುಕುವುದು ನಿಮಗೆ ನೋವುಂಟು ಮಾಡುತ್ತದೆ. ನಿಮ್ಮ ಸಂಕಷ್ಟಕ್ಕೆ ಯಾರನ್ನೂ ದೂಷಿಸಲು ಇಷ್ಟವಾಗದು. ನೀವು ನಿಮ್ಮ ಕೆಲಸವನ್ನು ಮುಂದುವರಿಸಿದರೆ ಒಳ್ಳೆಯದು. ನಿಮ್ಮ ಹಳೆಯ ಬಾಕಿಗಳಿಂದ ಬರಬಹುದಾದ ದಿನ. ಸ್ನೇಹಿತರ ಜೊತೆ ಕಾಲ ಕಳೆಯುವುದು ಸಂತೋಷ ತರುತ್ತದೆ. ವ್ಯಾಪಾರ ಪ್ರಯಾಣಗಳು ಲಾಭ ತರುವ ಸಾಧ್ಯತೆ ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಸಿಗದು ವ್ಯವಹಾರವು ಪ್ರಾಮಾಣಿಕವಾಗಿ ಇರಲಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು.

ಸಿಂಹ ರಾಶಿ: ಮಾನಸಿಕ ನೆಮ್ಮದಿಯನ್ನು ಹೆಚ್ಚು ಬಯಸಲಿದ್ದು, ಅಂತಹ ಸ್ಥಳಗಳಿಗೆ ಹೋಗಲೂ ಅವಕಾಶ ಸಿಗಲಿದೆ. ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ನಿಲ್ಲುವ ಸಾಮರ್ಥ್ಯ ಇರುವುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಫಲ ನೀಡುತ್ತವೆ. ಸ್ನೇಹಿತರಿಂದ ಲಾಭದಾಯಕ ಸಲಹೆ ಸಿಗಬಹುದು. ಭಾವನಾತ್ಮಕ ಸಂಗತಿಗಳಲ್ಲಿ ಎಚ್ಚರದಿಂದಿರಿ. ಪ್ರೇಮ ಸಂಬಂಧಗಳಲ್ಲಿನ ಗೊಂದಲ ನಿವಾರಿಸಿಕೊಳ್ಳಿ. ಹಣಕಾಸು ಮತ್ತು ನವೀನ ಯೋಜನೆಗಳಲ್ಲಿ ಗಮನ ಹರಿಸಿ. ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿದರೆ ಮಾನಸಿಕ ಸಮತೋಲನ ದೊರಕುತ್ತದೆ. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಸಂತೋಷ ಇರುವುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳಲು ಮಾರ್ಗವು ಸಿಗದೇ ಹೋಗಬಹುದು.

ಕನ್ಯಾ ರಾಶಿ: ಪ್ರಖ್ಯಾತ ವ್ಯಕ್ತಿಗಳಿಂದ ಪ್ರಶಂಸೆ ಸಿಗಲಿದೆ‌. ಇಂದು ಕುಟುಂಬವನ್ನು ಆರ್ಥಿಕವಾಗಿ ಗಟ್ಟಿ ಮಾಡುವ ಬಗ್ಗೆ ಯೋಚನೆ ಇರುವುದು. ಸಮಯದಲ್ಲಿ ನೀವು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಸಾಮಾಜಿಕ ಕಳಕಳಿಯನ್ನು ಜೊತೆಗಾರರು ಅರ್ಥಮಾಡಿಕೊಳ್ಳುವರು. ಅಪಪ್ರಚಾರಗಳಿಂದ ದೂರವಿರುವುದು ಒಳಿತು. ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವು ಬಲವಾಗುತ್ತದೆ. ನಿಮ್ಮ ಗುರಿಗಳನ್ನು ಗೊಂದಲಗೊಳಿಸದೆ ಬದ್ಧತೆಯಿಂದ ಮುಂದುವರಿಯಿರಿ. ಅಂತಿಮವಾಗಿ ನಿಮ್ಮ ಆಲೋಚನೆಯ ಮೇಲೆ ನಂಬಿಕೆ ಇರಿ. ನಾನಾ ರೀತಿಯಲ್ಲಿ ಹೂಡಿಕೆಯನ್ನು ಮಾಡುವ ಮನಸ್ಸಾಗುವುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಯಾವುದೋ ಕಾರ್ಯಕ್ಕೆ ಸಹಾಯವು ಸಿಗದೇ ಕಷ್ಟವಾಗುವುದು. ಸ್ತ್ರೀಯರಿಗೆ ಸಹಾಯ ಮಾಡಿ ನಗೆಗೆ ಒಳಗಾಗುವಿರಿ.

ತುಲಾ ರಾಶಿ: ದಿನದ ಮಧ್ಯಭಾಗದಿಂದ ಹೆಚ್ಚು ವಿಶ್ರಾಂತಿ ಮಾಡುವಿರಿ. ಇಂದು ನೀವು ಹಿಂದೆ ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಪ್ರೇಮ ಜೀವನದಲ್ಲಿ ಭಾವನಾತ್ಮಕ ತೀವ್ರತೆ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಅನಾರೋಗ್ಯಕ್ಕೆ ವಿಶ್ರಾಂತಿಗಿಂತ ಮನಸ್ಸಿನಲ್ಲಿ ಉತ್ಸಾಹ ಹೆಚ್ಚಿರಲಿ. ಹೊಸ ಯೋಜನೆಗಳ ಬಗ್ಗೆ ಆಲೋಚನೆ ಶುರುವಾಗಬಹುದು. ಸಂಗಾತಿಯ ಮತ್ತು ಕುಟುಂಬದ ಸದಸ್ಯರ ಸಹಕಾರವು ಇರಲಿದೆ. ಹೊಸತನ್ನು ಕಲಿಯುವ ಉತ್ಸಾಹವಿರಲಿದೆ. ನಿಮಗೆ ಧನಾತ್ಮಕ ಶಕ್ತಿಯನ್ನು ಪಡೆಯುವ ತಂತ್ರವು ತಿಳಿದಿರುತ್ತದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ಯಾರ ತಪ್ಪನ್ನೂ ನೇರವಾಗಿ ಹೇಳದೇ ಅರ್ಥ ಮಾಡಿಸಿ, ತಿದ್ದಿ. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಹೋದ್ಯೋಗಿಗಳ ಜೊತೆ ಎಲ್ಲಿಗಾದರೂ ಪ್ರಯಾಣ ಮಾಡುವಿರಿ.

ವೃಶ್ಚಿಕ ರಾಶಿ: ಹೋದಲ್ಲೆಲ್ಲ ಮಂಗಳಮಯವಾದ ಸೂಚನೆ ಸಿಗಲಿದ್ದು, ದಿವ್ಯತೆಯ ಅನುಭೂತಿಯಾಗಲಿದೆ. ಇಂದು ಭೇಟಿಯಾಗುವ ವ್ಯಕ್ತಿಗಳು ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬಿಸುವರು. ಕೆಲವು ವೈಫಲ್ಯಗಳು ನಿಮಗೆ ಪಾಠವಾಗಿ‌ ಕಲಿಯಬೇಕು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಇತರರಿಗೆ ಸಹಾಯಮಾಡುವ ನಿಮ್ಮ ಗುಣವು ಫಲ ನೀಡುತ್ತದೆ. ಪುಣ್ಯಾತ್ಮರ ದರ್ಶನವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಸಿಹಿಯ ಅನುಭವ ಸಾಧ್ಯ. ಮನೆಯ ಶಾಂತ ವಾತಾವರಣ ನಿಮಗೆ ನೆಮ್ಮದಿಯನ್ನು ತರುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಆಪ್ತತೆಯನ್ನು ಹೆಚ್ಚಿಸುತ್ತದೆ. ಉದ್ಯಮದಲ್ಲಿ ಚಿಂತಿತ ಲಾಭ ಕಾಣದೇ ಚಿಂತೆಯಾಗುವುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ‌ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಬೇಕು.

ಧನು ರಾಶಿ: ಹೊರಟ ಕೆಲಸಕ್ಕೆ ತೊಂದರೆ ಸಣ್ಣದಾಗಿದ್ದರೂ ದೊಡ್ಡದಂತೆ‌ ಕಾಣಿಸುತ್ತದೆ. ನಿಮ್ಮ ಭಯಕ್ಕೆ ಅದೇ ಮೂಲಕ ನೆಪವಾಗಬಹುದು. ನೀವು ಕುಟುಂಬದ ಸಮಸ್ಯೆಗಳನ್ನು ಕುಳಿತು ಮಾತನಾಡಬಹುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಯಾತ್ರೆಗಳಲ್ಲಿ ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಮಾನವೀಯತೆಯ ದೃಷ್ಟಿಯಿಂದ ಸಹಕಾರ ಮಾಡುವಿರಿ. ಮನೆಯ ಶುದ್ಧಿಯ ಕಡೆ ಗಮನ ಹರಿಸುವುದು ಸಂತೋಷದ ವಿಚಾರ. ಪ್ರೇಮ ಸಂಬಂಧಗಳು ಗಂಭೀರ ಗತಿಯತ್ತ ಸಾಗಬಹುದು. ಧೈರ್ಯದಿಂದ ಕೆಲಸ ಮಾಡಿದರೆ ಫಲಗಳು ಉತ್ತಮವಾಗಿರುತ್ತವೆ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಒಂಟಿಯಾಗಿ ಇರಬೇಕು ಎನಿಸಬಹುದು. ಸಹೋದರಿಯರ ನಡುವೆ ಮನಸ್ತಾಪವು ಬರುತ್ತದೆ. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ. ಪ್ರಶಂಸೆಯಿಂದ ಅಹಂಕಾರವು ಬರುವುದು. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ.

ಮಕರ ರಾಶಿ: ನಿಮ್ಮವರನ್ನು ಪ್ರೀತಿಸಿದರೆ ಅವರಿಂದ ನಿಮಗೂ ಪ್ರೀತಿ ಸಿಗಲಿದೆ. ಇಂದು ನಿಮ್ಮ ಸಂಬಂಧವನ್ನು ಹೆಚ್ಚು ಆನಂದದಿಂದ ಇಟ್ಟುಕೊಳ್ಲಕುವಿರಿ. ಪರರ ಪ್ರೀತಿಯ ನಡುವೆ ಪ್ರವೇಶ ಮಾಡಲು ಯೋಚಿಸುವಿರಿ. ಅಪಾಯಕಾರಿಯಾಗಿರುವ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಮನೆಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಯಶಸ್ವಿಯಾಗಿದೆ. ಪ್ರೀತಿಯ ವ್ಯಕ್ತಿಯಿಂದ ಅಚ್ಚರಿಯ ಉಡುಗೊರೆ ನಿರೀಕ್ಷಿಸಬಹುದು. ದಿನದ ಹೆಚ್ಚಿನ ಭಾಗವನ್ನು ಮನರಂಜನೆಗೆ ಮೀಸಲಿಡುವಿರಿ. ಅಹಂಕಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ.

ಕುಂಭ ರಾಶಿ: ನಿಮ್ಮದಲ್ಲ ವಸ್ತುಗಳನ್ನು ಬಯಸಿ ನಿಮಗೆ ಕಷ್ಟ. ಅತಿಯಾಸೆಯಿಂದ ಕೊನೆಗೆ ಉಳಿಯುವುದು ದುಃಖ. ಇರುವುದರಲ್ಲಿ ನೆಮ್ಮದಿಯಿಂದ ಇರಲು ಪ್ರಯತ್ನಿಸಿ. ಇಂದು ನೀವು ಮಾತನಾಡುವ ರೀತಿ ಜನರನ್ನು ಆಕರ್ಷಿಸಬಹುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಿ, ಕಳ್ಳತನ ಸಾಧ್ಯತೆ ಇದೆ. ಸಂಬಂಧಗಳ ಪುನ‌ರ್ ಸ್ಥಾಪನೆಯ ಸಮಯ ಇದು. ಪ್ರೇಮ ಸಂಬಂಧಗಳಲ್ಲಿ ನೈಜತೆ ಇಟ್ಟುಕೊಳ್ಳಿ. ಕುಟುಂಬದಿಂದ ಶುಭ ಸುದ್ದಿ ಬರುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಶಾಂತಿದಾಯಕ ಸಮಯ ಕಳೆಯಬಹುದು. ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಇಂದು ಆದ ನಿದ್ರಾಭಂಗದಿಂದ‌ ದಿನವು ಸರಿಯಾಗದೇ ಹೋಗಬಹುದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ.

ಮೀನ ರಾಶಿ: ನಿಮಗೆ ಇಂದಿನ ಕಾರ್ಯಗಳು ವಿಳಂಬವಾಗಲಿದೆ. ಕೆಲಸ ಮಾಡಿಕೊಡುವವರು ಹಲವು ಒತ್ತಡಗಳಿಂದ ಕೂಡಿರುತ್ತಾರೆ ಎನ್ನುವುದು ಗೊತ್ತಿರಲಿ. ನಿಮ್ಮನ್ನು ನೀವು ಆಶಾವಾದಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುವಿರಿ. ಯಶಸ್ಸಿನ ದಾರಿಯನ್ನು ತೋರಿಸುತ್ತದೆ. ಕುಟುಂಬದ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಕಳೆವ ಕ್ಷಣ ಸ್ಮರಣೀಯವಾಗಿರುತ್ತದೆ. ಹಣದ ವ್ಯವಹಾರಗಳಲ್ಲಿ ಸಮತೋಲನ ಇರಲಿ. ಸ್ನೇಹಿತರಿಂದ ಉತ್ತಮ ಸಲಹೆ ಪಡೆಯುವ ಸಾಧ್ಯತೆ ಇದೆ. ನಿರ್ಧಾರಗಳ ಬಗ್ಗೆ ಆತುರವಿಲ್ಲದೆ ಆಲೋಚಿಸಿ. ಓದು ಮತ್ತು ಆತ್ಮವಿಶ್ವಾಸದ ಮೂಲಕ ಮನಸ್ಸು ಸದೃಢವಾಗುತ್ತದೆ. ಶಾಂತಿಯುತ ಮನಸ್ಸು ಇಂದು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಪ್ರೇಮಾಕರ್ಷಣೆಯು ನಿಮ್ಮ ಗುರಿಯಿಂದ ನಿಮ್ಮನ್ನು ದೂರವಿಡಬಹುದು. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಬೇಜವಾಬ್ದಾರಿತನದಿಂದ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಗುವುದು.

-ಲೋಹಿತ ಹೆಬ್ಬಾರ್-8762924271 (what’s app only)

Published On - 7:01 am, Mon, 19 May 25

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ