ರಸ್ತೆಯಲ್ಲಿ ಬಿದ್ದಿದ್ದ ಮಗುವಿನ ಕತ್ತರಿಸಿದ ತಲೆ ತಿಂದ ನಾಯಿಗಳು; ವಾಕಿಂಗ್ ಹೋದವರಿಗೆ ಶಾಕ್
ತೆಲಂಗಾಣದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಇಲ್ಲಿನ ಕೊಥಗುಡೆಮ್ನಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮಗುವಿನ ಕತ್ತರಿಸಿದ ತಲೆಯನ್ನು ನಾಯಿಗಳು ತಿನ್ನುತ್ತಿರುವುದನ್ನು ನೋಡಿ ನಿವಾಸಿಗಳು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆ ಮಗುವಿನ ಛಿದ್ರವಾದ ಶವವನ್ನು ವಶಕ್ಕೆ ಪಡೆದಿದ್ದಾರೆ. ಆ ಮಗು ಯಾರದ್ದು? ಏನಿದು ಘಟನೆ?

ಹೈದರಾಬಾದ್, ಮೇ 13: ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರು ಒಂದು ಕಡೆ ನಾಯಿಗಳ (Dogs) ಹಿಂಡು ನಿಂತಿರುವುದನ್ನು ಕಂಡು ಕುತೂಹಲದಿಂದ ಆ ಕಡೆ ಹೋದರು. ರಸ್ತೆಬದಿಯಲ್ಲಿ ಬಿದ್ದಿದ್ದ ಮಗುವಿನ ತುಂಡಾದ ತಲೆಯನ್ನು ಆ ನಾಯಿಗಳು ಕಚ್ಚಿ ಎಳೆದಾಡುತ್ತಿದ್ದವು. ಅದನ್ನು ನೋಡಿದ ಜನರು ಗಾಬರಿಯಿಂದ ಅಲ್ಲಿಂದ ಓಡಿಹೋದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರಿಗೂ ಆ ದೃಶ್ಯ ನೋಡಿ ಶಾಕ್ ಆಗಿತ್ತು. ಈ ರೀತಿ ಯಾರಾದರೂ ಪೋಷಕರು ಹಸುಗೂಸನ್ನು ಬಿಸಾಡಿ ಹೋಗಲು ಸಾಧ್ಯವೇ? ಎಮಬ ಅಚ್ಚರಿಯೂ ಮೂಡಿತ್ತು.
ಈ ಘಟನೆ ನಡೆದಿರುವುದು ತೆಲಂಗಾಣದ ಕೊಥಗುಡೆಮ್ ಜಿಲ್ಲೆಯ ಪಲೋಂಚ ಮಂಡಲದ ಬೊಲ್ಲೊರಿಗುಡೆಮ್‌ನಲ್ಲಿ. ಇಲ್ಲಿನ ಸ್ಥಳೀಯರು ಮಗುವಿನ ಕತ್ತರಿಸಿದ ತಲೆಯನ್ನು ಬೀದಿ ನಾಯಿಗಳು ಕಚ್ಚಿ ಎಳೆಯುತ್ತಿರುವುದನ್ನು ನೋಡಿದ ನಂತರ ಭಯಭೀತರಾಗಿದ್ದರು.
ಇದನ್ನೂ ಓದಿ: ವಿಷಕಾರಿ ಹಾವಿನಿಂದ 30 ಮಕ್ಕಳನ್ನು ಕಾಪಾಡಿ ಪ್ರಾಣ ಬಿಟ್ಟ ಬೀದಿ ನಾಯಿ ಕಾಳಿ!
ಮಗುವಿನ ಕೊಳೆತ ತಲೆಯನ್ನು ನಾಯಿಗಳು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮಗುವಿನ ತಲೆ ಎಲ್ಲಿಂದ ಅಲ್ಲಿಗೆ ಬಂದಿತು ಎಂಬುದು ಸ್ಪಷ್ಟವಾಗಿಲ್ಲ. ಮೃತ ಮಗುವಿನ ದೇಹ ಎಲ್ಲಿರಬಹುದು ಮತ್ತು ಮಗುವನ್ನು ಯಾರು ಎಸೆದು ಹೋಗಿರಬಹುದು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ದುರ್ವಾಸನೆಯಿಂದಾಗಿ ಮನೆ ಮಾಲೀಕರು ಮತ್ತು ಕಾಲೋನಿಯ ನಿವಾಸಿಗಳು ಭಯಭೀತರಾಗಿದ್ದಾರೆ. ಮಗುವಿನ ಶವ ಎಲ್ಲಿಂದ ಬಂತು? ಯಾರಾದರೂ ಅಪರಿಚಿತ ವ್ಯಕ್ತಿ ಅದನ್ನು ಅಲ್ಲಿ ಎಸೆದಿದ್ದಾರೆಯೇ? ಅಥವಾ ಬೇರೆ ಏನಾದರೂ ಘಟನೆ ನಡೆದಿದೆಯೇ? ಈ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




