ದಿನ ಭವಿಷ್ಯ: ಇಂದು ಈ ರಾಶಿಯವರು ಅಂದುಕೊಂಡಿರುವ ಕೆಲಸ ಸಾಧ್ಯವಾಗದು
Horoscope Today 12 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಮಂಗಳವಾರದಂದು ಅಪಹಾಸ್ಯ, ಆಪದ್ಬಾಂಧವರಿಂದ ಸಹಾಯ, ಹಣಕ್ಕಾಗಿ ಮಾನಸಿಕ ಹಿಂಸೆ, ಆಧಾರ ರಹಿತ ಮಾತು, ಸಾಲ ಮುಕ್ತಾಯ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:07, ಯಮಗಂಡ ಕಾಲ 09:10 – 10:45, ಗುಳಿಕ ಕಾಲ 12:21 – 13:56.
ಮೇಷ ರಾಶಿ: ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳು ಇರಬಹುದು. ವೈಯಕ್ತಿಕ ಜೀವನದಿಂದ ಹೊರಬರಲು ಪ್ರಯತ್ನ ನಡೆಯಲಿದೆ. ಹಣದ ವಿಚಾರದಲ್ಲಿ ಜಾಣೆ ಅಗತ್ಯ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ.
ವೃಷಭ ರಾಶಿ: ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ಗಂಭೀರ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ. ವ್ಯವಹಾರದಲ್ಲಿ ಲಾಭಸಾಧ್ಯ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ವ್ಯಾವಹಾರಿಕ ಸಂದಿಗ್ಧತೆಯನ್ನು ಸರಿಮಾಡಲು ಆಗದು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು. ದಿನ ನಿತ್ಯದ ಚಟುವಟಿಕೆಗಳು ಬೇಸರ ತರಿಸುವುದು. ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ.
ಮಿಥುನ ರಾಶಿ: ನಿಮಗೆ ಬೇಕಾದುದನ್ನು ಮಾತ್ರ ಹೇಳಿಕೊಳ್ಳುವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಸ್ಪಷ್ಟತೆಯು ಉತ್ತಮ ಸಂವಾದಕ್ಕೆ ಕಾರಣವಾಗುತ್ತದೆ. ನಾಯಕತ್ವದ ಗುಣದಿಂದ ಹೊಣೆಗಾರಿಕೆಗಳೂ ಹೆಚ್ಚಾಗುತ್ತವೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತ.
ಕರ್ಕಾಟಕ ರಾಶಿ: ನಿಮ್ಮ ಪರವಾಗಿ ಮಾತನಾಡಲು ಯಾರಾದರೂ ಬೇಕಾಗುತ್ತಾರೆ. ಸಾಮಾಜಿಕ ಸೇವೆಗೆ ವಿರಾಮ ಹೇಳುವಿರಿ. ಹಳೆಯ ಸಂಬಂಧಗಳು ಮತ್ತೆ ಬರುವ ಸಾಧ್ಯತೆ ಇರುವ ದಿನ. ಜ್ಞಾನಾರ್ಜನೆಗೆ ಪ್ರಯಾಣ ಮಾಡುವಿರಿ. ಉದ್ಯೋಗದಲ್ಲಿ ವಿವೇಕ ಅವಶ್ಯ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ ಇರದು.
ಸಿಂಹ ರಾಶಿ: ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಪ್ರೀತಿ ಜೀವನ ಚೈತನ್ಯ ತುಂಬಿದಂತೆ ತೋರುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಹಾಗೂ ಲಾಭ ಸಿಗಲಿದೆ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು.
ಕನ್ಯಾ ರಾಶಿ: ಇಂದಿನ ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಅನಂತರ ತೊಂದರೆ ತಪ್ಪಿಸಲು, ಯಾವುದೇ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಸ್ತ್ರೀಯರು ಉದ್ಯೋಗಕ್ಕೆ ಅಲ್ಪವಿರಾಮ ಹೇಳವ ಸಾಧ್ಯತೆ ಇದೆ. ಯಾವುದೇ ಪ್ರಮುಖ ಕೆಲಸವು ನಿಮ್ಮಿಂದ ತಪ್ಪಿಸಿಕೊಳ್ಳುವುದಿಲ್ಲ. ಪ್ರೇಮ ಸಂಬಂಧಗಳು ಮಿಶ್ರವಾಗಿರುತ್ತದೆ.
ತುಲಾ ರಾಶಿ: ಇಂದು ನೀವು ಅನ್ಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಿ ಮತ್ತು ಅವರಿಗೆ ಸ್ವಲ್ಪ ಜಾಗವನ್ನು ನೀಡಿ. ಆತ್ಮವಿಶ್ವಾಸದ ಮೂಲಕ ನೀವು ಅನಾರೋಗ್ಯವನ್ನು ಎದುರಿಸಬಹುದು. ಹಣಕಾಸು ಯೋಜನೆಗಳಲ್ಲಿ ಜಾಗ್ರತೆ ಅವಶ್ಯಕ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು.
ವೃಶ್ಚಿಕ ರಾಶಿ: ನೀವು ಪ್ರೇಮ ಸಂಬಂಧದಲ್ಲಿ ಬೇಸರವನ್ನು ಅನುಭವಿಸಬಹುದು, ಆದ್ದರಿಂದ ಪ್ರೀತಿಯ ಸಂಬಂಧವನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ಸಂಗಾತಿಯ ಜೊತೆ, ಮಕ್ಕಳ ಜೊತಡ ಸಮಯ ಕಳೆಯಲು ಆಗದು. ಹಣ ಉಳಿಸುವ ಯತ್ನ ಇಂದು ಯಶಸ್ವಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು.
ಧನು ರಾಶಿ: ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಬೇರೆಕಡೆ ಇಟ್ಟ ಹಣದ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಯಂತ್ರದಿಂದ ಆದಷ್ಟು ದೂರವಿರಿ. ಬಳಕೆಯನ್ನು ಕಡಿಮೆ ಮಾಡಿದರೆ ಇನಗನೂ ಒಳ್ಳೆಯದು. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ. ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ.
ಮಕರ ರಾಶಿ: ಇಂದು ನಿಮಗೆ ಪ್ರೇಮವು ಸಂತೋಷವನ್ನು ಕೊಡದೇಹೊಇಗಬಹುದು. ನಿಮ್ಮ ಸಂಗಾತಿಗೆ ಈ ವಾರ ಸ್ಥಳಾವಕಾಶ ಬೇಕಾಗುತ್ತದೆ, ಅವರ ಅಭಿಪ್ರಾಯವನ್ನು ಗೌರವಿಸಿ. ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡುವಿರಿ.
ಕುಂಭ ರಾಶಿ: ಮನೆಯ ನವೀಕರಣದ ಬಗ್ಗೆ ಯಾರನ್ನಾದರೂ ಸಂಪರ್ಕಿಸಿ ಮುಂದುವರಿಯುವಿರಿ. ಸಂಗಾತಿಯ ವ್ಯವಹಾರಗಳಲ್ಲಿ ಕಡಿಮೆ ಹಸ್ತಕ್ಷೇಪ ಮಾಡುವುದು ಉತ್ತಮ. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಓಡಾಟದ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳಬಹುದು. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.
ಮೀನ ರಾಶಿ: ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ಅತಿಯಾದ ಸಮಯವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ನಿಮ್ಮನ್ನು ನೀವು ದುರ್ಬಲ ಮಾಡಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)




