Horoscope: ಈ ರಾಶಿಯವರಿಗೆ ಮುನ್ನುಗ್ಗಲು ಧೈರ್ಯ ಸಾಲದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ, ಮಂಗಳವಾರ ಆಪ್ತರಿಂದ ಮೋಸ, ಇನ್ನೊಬ್ಬರ ಸಹಾನುಭೂತಿಯ ಅಪೇಕ್ಷೆ, ಹೊಸ ಕಾರ್ಯದಲ್ಲಿ ಕುತೂಹಲವಿರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಬೆಂಗಳೂರು, ಮೇ 20, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಮಂಗಳವಾರ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ ಕರಣ : ಬಾಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 53 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:17, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:29 – 14:05.
ಮೇಷ ರಾಶಿ: ಶುಭ ಕಾರ್ಯವನ್ನು ಮಾಡಲು ಸಂಗಾತಿಯು ಪ್ರೇರಿಸಬಹುದು. ನಿಮ್ಮ ನೂತನ ಯೋಜನೆಗಳನ್ನು ಆರಂಭಿಸಲು ಮನಸ್ಸು ಮಾಡುವಿರಿ. ಬಂಧುಗಳ ಸಹಾಯದಿಂದ ಈ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಪ್ರೇಮ ಸಂಬಂಧ ಕಟ್ಟುವ ಉತ್ತಮ ಸಮಯ. ಪ್ರೀತಿಯ ಶಕ್ತಿ ನಿಮ್ಮನ್ನು ಭಾವುಕಗೊಳಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಸಹಕಾರ ಸಿಗಲಿದೆ. ಕುಟುಂಬದ ನಿರ್ಲಕ್ಷ್ಯ ಮನಸ್ಸಿಗೆ ಬೇಸರ ತರಬಹುದು. ಮನಸ್ಸಿನಲ್ಲಿ ಒತ್ತಡ ಇರುವುದರಿಂದ ಹೆಚ್ಚು ವಿಶ್ರಾಂತಿ ಬೇಕು. ದಾಂಪತ್ಯವು ಸುಂದರವಾಗಲು ಉಡುಗೊರೆ ಆಶ್ಚರ್ಯದ ಉಡುಗೊರೆ ಕೊಡುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು.
ವೃಷಭ ರಾಶಿ: ದೇವರ ಭಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಾಗುವುದು. ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ಖರೀದಿಯಲ್ಲಿ ಹಣದ ಜಾಗರೂಕತೆ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆದರೆ ಆತ್ಮತೃಪ್ತಿ ಲಭಿಸುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಸಮಯಕೊಡಲಾರರು. ಕೆಲಸದ ನಿಟ್ಟಿನಲ್ಲಿ ಹೊಸ ಯೋಜನೆಗಳು ಆರಂಭವಾಗುತ್ತವೆ. ಬುದ್ಧಿಮತ್ತೆಯಿಂದ ಹೊಸ ಕಲಿಕೆ ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ. ಸಂಗಾತಿಯ ಪ್ರೀತಿಯ ಇಂಗಿತಗಳು ಸಂತೋಷ ನೀಡುತ್ತವೆ. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.
ಮಿಥುನ ರಾಶಿ: ನಿಮ್ಮ ಬಗ್ಗೆ ಕೀರ್ತಿಯನ್ನು ಕೊಂಡಾಡುವರು. ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಯೋಜನೆಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ. ಸುಳ್ಳನ್ನು ಸತ್ಯದಂತೆ ಹೇಳುವಿರಿ. ಏಕಪಕ್ಷದ ಪ್ರೇಮದಿಂದ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಕ್ಕೆ ಉತ್ತಮ ದಿನ. ಕೆಲಸದಲ್ಲಿ ಹೆಚ್ಚು ಸಡಿಲತೆ ಇಟ್ಟುಕೊಳ್ಳಿ. ಕುಟುಂಬದೊಂದಿಗೆ ಹೊರಗಿನ ಪ್ರವಾಸ ಯೋಜನೆ ರೂಪಿಸುವಿರಿ. ಸಂಗಾತಿಯ ತೀವ್ರ ವರ್ತನೆ ಇಂದು ನಿಮ್ಮ ಮನಸ್ಸನ್ನು ಘಾಸಿಗೊಳಿಸುತ್ತದೆ. ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು.
ಕರ್ಕಾಟಕ ರಾಶಿ: ನೀವು ಮಾಡುವ ಕಾಳಜಿಯು ಇಷ್ಟವಾಗಲಿದೆ. ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯ, ತಾಳ್ಮೆ, ಆತ್ಮವಿಶ್ವಾಸವನ್ನು ಬಿಡದೇ ಕಾಪಾಡಿಕೊಳ್ಳಬಹುದು. ನಿಮ್ಮನ್ನು ಆರೋಗ್ಯವಂತರನ್ನಾಗಿ ಸಂಗಾತಿ ಮಾಡುವಳು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ಹಣದ ಅವಶ್ಯಕತೆ ನಿಮಗೆ ಹಣದ ಮೌಲ್ಯ ತಿಳಿಸುತ್ತದೆ. ಮನಸ್ಸು ಹಾಗೂ ಮಾತುಗಳಲ್ಲಿ ಸ್ಥಿರತೆ ಇರಲಿ. ಪ್ರೇಮ ಸಂಬಂಧದಲ್ಲಿ ಸ್ಪಷ್ಟತೆ ಅಗತ್ಯ. ಹೊಸ ವಿಷಯಗಳಲ್ಲಿ ನಿಮ್ಮ ಬುದ್ಧಿಮತ್ತೆ ಅನುಭವವಾಗುತ್ತದೆ. ಸಂಗಾತಿಯ ಪ್ರೀತಿ ತೋರಿಕೆ ನಿಮಗೆ ಆಧ್ಯಾತ್ಮಿಕ ಶಾಂತಿ ತರಲಿದೆ. ಸಹನೆಯನ್ನು ನಿಮ್ಮ ದೈನಂದಿನ ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನೂ ಗಮನವನ್ನೂ ಕೊಡಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ.
ಸಿಂಹ ರಾಶಿ: ನೆಮ್ಮದಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲಸ ಹಾಗು ಕುಟುಂಬವನ್ನು ನೀವು ಸಮಾನವಾಗಿ ತೂಗಿಸಿಕೊಂಡು ಹೋಗುವುದು ಸಾಧ್ಯವಾಗದು. ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಸಂತೋಷವನ್ನು ಹಂಚಿಕೊಳ್ಳುವಿರಿ. ಹಣದ ವ್ಯವಹಾರ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮವು ಸತ್ಯವೆಂದು ತಿಳಿದುಕೊಳ್ಳಿ. ಸ್ನೇಹಿತರಿಂದ ವೃತ್ತಿಯಲ್ಲಿ బింబల ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ವೈವಾಹಿಕ ಜೀವನದ ಸುಂದರ ಅನುಭವವಿದೆ. ಇಂದು ನಿಮಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಮಾಡುವುದು ಬೇಡ. ಮಕ್ಕಳಿಂದ ನೀವು ದೂರಾಗುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಯಾವುದೇ ನಿಬಂಧನೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಪಕ್ಷಪಾತ ಧೋರಣೆ ಬೇಡ.
ಕನ್ಯಾ ರಾಶಿ: ವೃತ್ತಿಯಲ್ಲಿ ನಿಮಗೆ ಮೋಸವಾಗಲಿದೆ. ಯಾರದೋ ಮಾತನ್ನು ನಂಬಿ ಮೋಸಹೋಗುವ ಸಂಭವವಿದೆ. ಈ ದಿನ ಹೆಚ್ಚಿನ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಕೊಡುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಹಣದ ಲಾಭಕ್ಕಾಗಿ ಹಿರಿಯರ ಆಶೀರ್ವಾದದಿಂದ ಶುಭ ಫಲ. ಪೋಷಕರ ಆರೋಗ್ಯದತ್ತ ಗಮನ ಅಗತ್ಯ. ಪ್ರೀತಿಯಲ್ಲಿ ಸಹನಶೀಲತೆ ಅಗತ್ಯ. ಬಾಕಿಯ ವಿಷಯಗಳ ತೀರ್ಮಾನಕ್ಕೆ ಒಳ್ಳೆಯ ಸಮಯ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯ. ಸಂಗಾತಿಯೊಂದಿಗೆ ಮಾತು ಇಲ್ಲದಿರುವುದು ಭಾವನಾತ್ಮಕ ನೋವು ತಂದೀತು. ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಿ. ಆಹಾರದ ವ್ಯತ್ಯಾಸದಿಂದ ತೊಂದರೆಗಳು ಬಂದಾವು. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.