AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕದ್ದ ವಾಹನಗಳಲ್ಲೇ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳು: 6 ಆರೋಪಿಗಳ ಬಂಧನ

ನಗರದಲ್ಲಿ ಸುಲಿಗೆ ಮಾಡುತ್ತಿದ್ದ 6 ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು​ ಬಂಧಿಸಿದ್ದಾರೆ. ಬಂಧಿತರಿಂದ 17.5 ಲಕ್ಷ ಮೌಲ್ಯದ 1 ಕಾರು, 15 ಬೈಕ್, 11,750 ನಗದು ಜಪ್ತಿ ಮಾಡಲಾಗಿದೆ. ಕದ್ದ ವಾಹನಗಳಲ್ಲೇ ದುಷ್ಕರ್ಮಿಗಳು ಸುಲಿಗೆ ಮಾಡಲು ಹೋಗುತ್ತಿದ್ದರು. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಬೆಂಗಳೂರು: ಕದ್ದ ವಾಹನಗಳಲ್ಲೇ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳು: 6 ಆರೋಪಿಗಳ ಬಂಧನ
ಬಂಧಿತರಿಂದ ಜಪ್ತಿ ಮಾಡಿದ ಬೈಕ್​ಗಳು
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 19, 2023 | 5:13 PM

Share

ಬೆಂಗಳೂರು, ಅಕ್ಟೋಬರ್​​​​​ 19: ನಗರದಲ್ಲಿ ಸುಲಿಗೆ ಮಾಡುತ್ತಿದ್ದ 6 ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು​ ಬಂಧಿಸಿದ್ದಾರೆ (arrested) . ಬಂಧಿತರಿಂದ 17.5 ಲಕ್ಷ ಮೌಲ್ಯದ 1 ಕಾರು, 15 ಬೈಕ್, 11,750 ನಗದು ಜಪ್ತಿ ಮಾಡಲಾಗಿದೆ. ಅಮೃತಹಳ್ಳಿ, ಬಾಣಸವಾಡಿ, ಕೊತ್ತನೂರು, ಮಹದೇವಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಸುಲಿಗೆ ಮಾಡುತ್ತಿದ್ದರು. ಕದ್ದ ವಾಹನಗಳಲ್ಲೇ ದುಷ್ಕರ್ಮಿಗಳು ಸುಲಿಗೆ ಮಾಡಲು ಹೋಗುತ್ತಿದ್ದರು. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಾಹನ ಬಿಟ್ಟು 4 ಜನ ದನಗಳ್ಳರು ಪರಾರಿ

ನೆಲಮಂಗಲ: ಹಸುಗಳನ್ನ ಟಿಟಿ ವಾಹನದಲ್ಲಿ ಕದ್ದು ಪರಾರಿಯಾಗುತ್ತಿದ್ದವರನ್ನ ಹಿಡಿಯಲು ಗ್ರಾಮಸ್ಥರು ಯತ್ನಿಸಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೊಟ್ಟೆಪ್ಪನಪಾಳ್ಯದಲ್ಲಿ ನಡೆದಿದೆ. ಗ್ರಾಮಸ್ಥರು ಬೆನ್ನಟ್ಟುವ ವೇಳೆ ಸ್ಥಳದಲ್ಲೇ ವಾಹನ ಬಿಟ್ಟು 4 ಜನ ದನಗಳ್ಳರು ಪರಾರಿಯಾಗಿದ್ದಾರೆ. ಗ್ರಾಮಸ್ಥರ ಕೈಗೆ ಸಿಕ್ಕ ಟಿಟಿ ವಾಹನ ಗ್ಲಾಸ್​ಗಳನ್ನ ಪುಡಿಗಟ್ಟಿ ಜಖಂ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು: ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ಕೊಂದ ತಂದೆ!

ಗ್ರಾಮದ ರೈತ ಜಗದೀಶ್ ಅವರಿಗೆ 2 ಹಸುಗಳ ರಕ್ಷಣೆ ಮಾಡಲಾಗಿದೆ. ನಕಲಿ ನಂಬರ್‌ ಪ್ಲೇಟ್ ಬಳಸಿ ಕೃತ್ಯವೆಸಗಿದ್ದಾರೆ. ಸದ್ಯ ಬೈಕ್, ಟಿಟಿ ವಾಹನ ಜಪ್ತಿ ಮಾಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೊಬೈಲ್​​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ತಕ್ತಿ

ರಾಯಚೂರು: ಮಾನ್ವಿ ಪಟ್ಟಣದಲ್ಲಿ‌ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಒಬ್ಬ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಅಮ್ಜದ್​​ ಖಾನ್​​ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅಮ್ಜದ್​ಖಾನ್ ಸಹೋದರ ಶೋಯಲ್​ ನಡುವೆ ಗಲಾಟೆ‌ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವ್ಯಕ್ತಿಯನ್ನ ಮನವೊಲಿಸಿದ ಮಾನ್ವಿ ಪೊಲೀಸರು ಟವರ್​​ನಿಂದ ಇಳಿಸಿದ್ದಾರೆ.

ದೊಣ್ಣೆಯಿಂದ ಹೊಡೆದು ಮಗನಿಂದಲೇ ತಂದೆಯ ಹತ್ಯೆ

ಕೊಡಗು: ದೊಣ್ಣೆಯಿಂದ ಹೊಡೆದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ. ಚೇಂದ್ರಿಮಾಡರಾಜ (68) ಕೊಲೆಯಾದ ವ್ಯಕ್ತಿ. ಪುತ್ರ ದರ್ಶನ್ ಕೊಲೆ ಮಾಡಿದ ಆರೋಪಿ. ​ನಿನ್ನೆ (ಅ.18) ರಂದು ಪುತ್ರ ದರ್ಶನ್, ತಂದೆ ಚೇಂದ್ರಿಮಾಡರಾಜ ಅವರಿಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು.

ಇದನ್ನೂ ಓದಿ: ಮಂಗಳೂರು: ಕಾರು ಡಿಕ್ಕಿ, ಯುವತಿ ದುರ್ಮರಣ: ಐವರಿಗೆ ಗಂಭೀರ ಗಾಯ

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇಂದ್ರಿಮಾಡರಾಜನನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ದರ್ಶನ್​ನನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!