ಮಂಗಳೂರು: ಕಾರು ಡಿಕ್ಕಿ, ಯುವತಿ ದುರ್ಮರಣ: ಐವರಿಗೆ ಗಂಭೀರ ಗಾಯ
ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಮಂಗಳೂರಿನ ಲೇಡಿಹಿಲ್-ಮಣ್ಣಗುಡ್ಡ ರಸ್ತೆಯಲ್ಲಿ ನಡೆದಿದೆ. ಅಪಘಾತದ ಬಳಿಕ ಪರಾರಿಯಾಗಿದ್ದ ಚಾಲಕ ನಂತರ ತನ್ನ ತಂದೆ ಜೊತೆ ಪಶ್ಚಿಮ ಠಾಣೆಗೆ ಆಗಮಿಸಿದ್ದಾನೆ.
ಮಂಗಳೂರು, ಅಕ್ಟೋಬರ್ 18: ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ (car collision) ಹೊಡೆದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಮಂಗಳೂರಿನ ಲೇಡಿಹಿಲ್-ಮಣ್ಣಗುಡ್ಡ ರಸ್ತೆಯಲ್ಲಿ ನಡೆದಿದೆ. ರೂಪಶ್ರೀ(23) ಮೃತ ಯುವತಿ. ಸ್ವಾತಿ, ಹಿತನ್ವಿ, ಕೃತಿಕಾ, ಯತಿಕಾ ಗಾಯಾಳುಗಳು. ಅಪಘಾತದ ನಂತರ ಚಾಲಕ ಕಮಲೇಶ್ ಬಲ್ದೇವ್ ಪರಾರಿಯಾಗಿದ್ದಾನೆ. ಬಳಿಕ ತನ್ನ ತಂದೆ ಜೊತೆ ಪಶ್ಚಿಮ ಠಾಣೆಗೆ ಚಾಲಕ ಆಗಮಿಸಿದ್ದಾನೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ರಸ್ತೆ ದಾಟುತ್ತಿದ್ದ ಬಾಲಕನಿಗೆ ಪಿಕಪ್ ವಾಹನ ಡಿಕ್ಕಿ: ಸಾವು
ರಸ್ತೆ ದಾಟುತ್ತಿದ್ದ ಬಾಲಕನಿಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವಂತಹ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷಮ್ನಲ್ಲಿ ನಡೆದಿದೆ. ಸಂಬಂಧಿಕರ ಮನೆಗೆ ಬಂದು ಅಂಗಡಿಗೆ ಹೋಗಿ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮಹಮ್ಮದ್ ರಂಝಿನ್(10) ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನೊಂದಿಗೆ ಮಹಿಳೆಯ ಹೆಸರು ಬಳಕೆ ಆರೋಪ: ಯುವಕನೋರ್ವನಿಗೆ ಹಿಗ್ಗಾಮುಗ್ಗಾ ಥಳಿತ
ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಮಹಮ್ಮದ್ ರಫೀಕ್ ಅವರ ಮಗ ರಂಝಿನ್. ರಜೆ ಇದ್ದ ಕಾರಣ ಲಾಯಿಲ ಸಂಬಂಧಿಕರ ಮನೆಗೆ ಬಾಲಕ ಬಂದಿದ್ದ. ಉಜಿರೆಯಿಂದ ಬೆಳ್ತಂಗಡಿ ಕಡೆ ಪಿಕಪ್ ವಾಹನ ಬಂದಿದೆ. ವೇಣೂರು ನಿವಾಸಿ ಜಯ ಎಂಬುವವರಿಗೆ ಪಿಕಪ್ ವಾಹನ ಸಂಬಂಧಿಸಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರ-ದಾಬಸ್ಪೇಟೆ ಹೆದ್ದಾರಿಯಲ್ಲಿ ಸರಣಿ ಅಪಘಾತ
ದೇವನಹಳ್ಳಿ: ಕಾರು, ಸರಕು ಸಾಗಣೆ ವಾಹನ ಮತ್ತು ಕ್ಯಾಂಟರ್ ನಡುವೆ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ದೊಡ್ಡಬಳ್ಳಾಪುರ-ದಾಬಸ್ಪೇಟೆ ಹೆದ್ದಾರಿಯ 11ನೇ ಮೈಲಿ ಬಳಿ ನಡೆದಿದೆ. ಅದೃಷ್ಟವಶಾತ್ ಸರಣಿ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಕು ಸಾಗಣೆ ವಾಹನದ ಚಾಲಕನ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಕಾರವಾರ: ಕತ್ತು ಸೀಳಿ ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪತಿ, ಎರಡು ಮಕ್ಕಳು ಅನಾಥ
ಸರಕು ವಾಹನದಲ್ಲಿ 5ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ್ದು, ಸಕಾಲಕ್ಕೆ ಆ್ಯಂಬುಲೆನ್ಸ್ ಬಾರದೆ ಗಾಯಾಳುಗಳು ಪರದಾಡಿದ್ದಾರೆ. ಆ್ಯಂಬುಲೆನ್ಸ್ ಬಾರದಿದ್ದರಿಂದ ಕಾರಿನಲ್ಲೇ ಗಾಯಾಳುಗಳನ್ನು ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬೈಕ್ ಕಳ್ಳರ ಬಂಧನ: 10 ಬೈಕ್ಗಳು ಜಪ್ತಿ
ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಠಾಣೆಯ ಪೊಲೀಸರಿಂದ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ 10 ಬೈಕ್ ಜಪ್ತಿ ಮಾಡಲಾಗಿದೆ. ಮೌಲಾಲಿ ಜಮಾದಾರ್(24), ಯಾಸಿನ್ ಅಪ್ತಾಗಿರಿ(19) ಬಂಧಿತರು. ಸೆ.5ರಂದು ಇರ್ಫಾನ್ ಕೋಲೂರ ಎಂಬುವರು ಠಾಣೆಗೆ ದೂರು ನೀಡಿದ್ದರು. ತೇರದಾಳ, ಜಮಖಂಡಿ, ಗೋಕಾಕ್, ಅಥಣಿ, ಯಾದವಾಡ ಸೇರಿ ಹಲವೆಡೆ ಕಳ್ಳತನ ಮಾಡಿದ್ದ ಆರೋಪಗಳಿವೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.