AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ಕೊಂದ ತಂದೆ!

ಸಾಕಲು ಆಗುತ್ತಿಲ್ಲವೆಂದು ತನ್ನ ಒಂದೂವರೆ ವರ್ಷದ ಗಂಡು ಮಗುವನ್ನು ತಂದೆಯೇ ಕೆರೆಗೆ ಎಸೆದು ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಠಾಣೆ ಪೊಲೀಸರು ಆರೋಪಿ ಗಣೇಶ್​ನನ್ನು ಬಂಧಿಸಿದ್ದಾರೆ.

ಮೈಸೂರು: ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ಕೊಂದ ತಂದೆ!
ತನ್ನ ಒಂದೂವರೆ ವರ್ಷದ ಮಗುವನ್ನು ಕೊಂದ ಆರೋಪಿ ಗಣೇಶ್ (ಎಡ ಚಿತ್ರ) ಮತ್ತು ಮಗುವಿನ ಸಾಂದರ್ಭಿಕ ಚಿತ್ರ
Follow us
ರಾಮ್​, ಮೈಸೂರು
| Updated By: Rakesh Nayak Manchi

Updated on: Oct 19, 2023 | 8:08 AM

ಮೈಸೂರು, ಅ.10: ಈತನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಗಂಡು ಮಗುವಿಗೆ ಜನ್ಮ ನೀಡುವ ವೇಳೆ ಸಾವನ್ನಪ್ಪಿದ್ದಾರೆ. ಆದರೆ, ಈ ಸಣ್ಣ ಮಗುವನ್ನು ಸಾಕಲು ಆಗುತ್ತಿಲ್ಲವೆಂದು ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಕೊಂಡುಹೋಗಿ ಕೆರೆಗೆ ಎಸೆದು ಕೊಲೆ (Murder) ಮಾಡಿದ್ದಾನೆ. ಈ ಘಟನೆ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ.

2014 ರಲ್ಲಿ ಗಣೇಶ್ (30) ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ನಾರಾಯಣ ಸ್ವಾಮಿ ಎಂಬುವವರ ಮಗಳು ಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದರು. ದೇವನಹಳ್ಳಿಯಲ್ಲಿಯೆ ವಾಸವಿದ್ದ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಂದು ವರ್ಷದ ಹಿಂದೆ ಮೂರನೇ ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಮಧ್ಯಪ್ರದೇಶ: ಮಗು ಅಳ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಮಹಿಳೆ

ಹೀಗಾಗಿ ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಕುಮಾರ್ ಎಂಬ ಗಂಡು ಮಗುವಿನಿಂದಿಗೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿಗೆ ವಾಪಸ್ ಆಗಿದ್ದಾನೆ. ಇಲ್ಲಿ ತನ್ನ ತಾಯಿಯೊಂದಿಗೆ ಮಗುವನ್ನು ಸಾಕುತ್ತಿದ್ದನು. ಹಲವು ಬಾರಿ ಮಗುವನ್ನು ನಮಗೆ ವಾಪಸ್ಸು ನೀಡಿ, ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು.

ಆದರೆ, ಅತ್ತೆಗೆ ಮಗುವನ್ನು ಒಪ್ಪಿಸದೆ ಅದನ್ನು ಸಾಕಲು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಗಣೇಶ್​ನನ್ನು ಬಂದಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ