ಮೈಸೂರು ದಸರಾ 2023ರ 4ನೇ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ನಾಲ್ಕನೇ ದಿನವಾದ ಇಂದು (ಅ.18) ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ.

ಮೈಸೂರು ದಸರಾ 2023ರ 4ನೇ ದಿನದ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ
ಮೈಸೂರು ಅರಮನೆ
Follow us
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on:Oct 18, 2023 | 9:01 AM

ಮೈಸೂರು ಅ.18: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ-2023ಕ್ಕೆ ಚಾಲನೆ ದೊರೆತಿದೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈಗಾಗಲೆ ವಿವಿಧ ಕಾರ್ಯಕ್ರಮಗಳು ಆರಂಭವಾಗಿದೆ. ಅಕ್ಟೋಬರ್ 24ರ ವಿಜಯದಶಮಿಯಂದು (Vijayadashami) ವಿಶ್ವವಿಖ್ಯಾತ ಜಂಬೂಸವಾರಿ (Jambusavari) ಮೆರವಣಿಗೆ ನಡೆಯಲಿದೆ. ದಸರಾ ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಆಗಮಿಸುತ್ತಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ನಾಲ್ಕನೇ ದಿನವಾದ ಇಂದು (ಅ.18) ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತಿದೆ.

  • ಚಿಗುರು ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 11ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಕವಿಯತ್ರಿ ಸವಿತಾ ನಾಗಭೂಷಣ್ ಕವಿಗೋಷ್ಠಿ ಉದ್ಘಾಟನೆ ಮಾಡಲಿದ್ದಾರೆ.
  • ಬೆಳಿಗ್ಗೆ 11ಕ್ಕೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: ಇಂದು ದಸರಾ ಗೋಲ್ಡ್​ ಕಾರ್ಡ್​ ಬಿಡುಗಡೆ: ದರ, ಖರೀದಿ ಹೇಗೆ? ಇಲ್ಲಿದೆ ಮಾಹಿತಿ

  • ಅರಮನೆ ಆವರಣದಲ್ಲಿ ರಾತ್ರಿ 7ಗಂಟೆಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಸಮೂಹ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಭಾಗಿಯಾಗಲಿದ್ದಾರೆ.
  • ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದಾರೆ. ನಟ ಡಾ. ಶಿವರಾಜಕುಮಾರ್ ಯುವದಸರಾ ಉದ್ಘಾಟನೆ ಮಾಡಲಿದ್ದಾರೆ. ಯುವಜನತೆಯನ್ನ ಸೆಳೆಯುವ ಕಾರ್ಯಕ್ರಮ ಯುವದಸರಾ ಇಂದಿನಿಂದ ನಾಲ್ಕು ದಿನ ನಡೆಯಲಿದೆ.

ಯುವದಸರಾ ವೇಳಾಪಟ್ಟಿ

  • ಇಂದು (ಮೊದಲ ದಿನ) ಯುವದಸರಾಗೆ ಸ್ಯಾಂಡಲ್‌ವುಡ್ ನಟ, ನಟಿಯರು ಮೆರುಗು ನೀಡಲಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲರಿಂದ ಸಂಗೀತ ಕಾರ್ಯಕ್ರಮ ಇರಲಿದೆ.
  • ಅಕ್ಟೋಬರ್ 19ರಂದು ಸಂಚಿತ್ ಹೆಗ್ಡೆ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಮತ್ತು ಶಿಲ್ಪರಾವ್ ಮತ್ತು ತಂಡದಿಂದ ಸಂಗೀತ, ನೃತ್ಯ ಸಮಾರಂಭ ಇರಲಿದೆ.
  • ಅಕ್ಟೋಬರ್ 20ರಂದು ಆಲ್ ಓಕೆ ಮತ್ತು ತಂಡ ಹಾಗೂ ಸಲೀಂ ಸುಲೈಮಾನ್ ತಂಡದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
  • ಅಕ್ಟೋಬರ್ 21ರಂದು ಮೋಹನ ಸಿಸ್ಟರ್ಸ್ ತಂಡ ಹಾಗೂ ಬೆನ್ನಿದಯಾಳ್ ಮತ್ತು ತಂಡದಿಂದ ವೈವಿಧ್ಯಮಯ ಕಲಾ ಪ್ರದರ್ಶನ ನಡೆಯಲಿದೆ.
  • ಯೋಗಾ ದಸರಾ ಸಮಿತಿಯಿಂದ ಅರಮನೆ ಆವರಣದಲ್ಲಿ ಯೋಗಾ ದಸರಾ ಹಮ್ಮಿಕೊಳ್ಳಾಗಿದೆ. ವಿದೇಶಿಗರು ಸೇರಿದಂತೆ ನೂರಾರು ಜನ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:00 am, Wed, 18 October 23