AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರನೇ ದಿನ ಮೇಳೈಸಿದ ಮೈಸೂರು ದಸರಾ ಕಾರ್ಯಕ್ರಮಗಳು: ಇಲ್ಲಿದೆ ವಿವರ

Mysore Dasara 2023: ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಯಿತು. ಮಕ್ಕಳ ದಸರಾ ಅಂಗವಾಗಿ ಕಲಾಮಂದಿರದಲ್ಲಿ ಪುಟಾಣಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ಪ್ರಕೃತಿ, ದಸರಾ ಸಡಗರ, ಮಹಿಷ ಮರ್ದಿನಿ, ಪಾರಂಪರಿಕ ಸ್ಮಾರಕ, ಇತಿಹಾಸ ಪುರುಷರು, ಚಂದ್ರಯಾನ ಸೇರಿ ತರಹೇವಾರಿ ಚಿತ್ರ ಬಿಡಿಸಿ ಖುಷಿಪಟ್ಟರು.

ಮೂರನೇ ದಿನ ಮೇಳೈಸಿದ ಮೈಸೂರು ದಸರಾ ಕಾರ್ಯಕ್ರಮಗಳು: ಇಲ್ಲಿದೆ ವಿವರ
ದಸರಾ ಕವಿಗೋಷ್ಠಿ
ದಿಲೀಪ್​, ಚೌಡಹಳ್ಳಿ
| Updated By: Ganapathi Sharma|

Updated on: Oct 17, 2023 | 10:07 PM

Share

ಮೈಸೂರು, ಅಕ್ಟೋಬರ್ 17: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara) ಮೂರನೇ ದಿನವಾದ ಮಂಗಳವಾರವೂ ಹತ್ತುಹಲವು ಕಾರ್ಯಕ್ರಮಗಳು ಮೇಳೈಸಿವೆ. ದಸರಾ ಕವಿಗೋಷ್ಠಿಯಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ (Jayant Kaikini), ಕನ್ನಡದ ತವಕ- ತಲ್ಲಣಗಳನ್ನು ಪ್ರತಿಪಾದಿಸಿದರೆ ಮತ್ತೊಂದೆಡೆ, ಮಹಿಳಾ ದಸಾರದಲ್ಲಿ ಮಹಿಳೆಯರ ಡ್ಯಾನ್ಸ್, ಬಿಂದಿಗೆ ಓಟ ಹಾಗೂ ಹಗ್ಗಜಗ್ಗಾಟ ಕಾರ್ಯಕ್ರಮದಲ್ಲಿದಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಯಿತು. ಮಕ್ಕಳ ದಸರಾ ಅಂಗವಾಗಿ ಕಲಾಮಂದಿರದಲ್ಲಿ ಪುಟಾಣಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ಪ್ರಕೃತಿ, ದಸರಾ ಸಡಗರ, ಮಹಿಷ ಮರ್ದಿನಿ, ಪಾರಂಪರಿಕ ಸ್ಮಾರಕ, ಇತಿಹಾಸ ಪುರುಷರು, ಚಂದ್ರಯಾನ ಸೇರಿ ತರಹೇವಾರಿ ಚಿತ್ರ ಬಿಡಿಸಿ ಖುಷಿಪಟ್ಟರು. ಇನ್ನೂ ದಸರಾ ಕವಿಗೋಷ್ಠಿಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಚಾಲನೆ ನೀಡಿದ್ರು. ಇದೇವೇಳೆ ಮಾತನಾಡಿ, 50 ವರ್ಷಗಳ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ ಆಗ ಘಟಾನುಘಟಿ ಕವಿಗಳು ಭಾಗವಹಿಸಿದರು. ಅದರಂತೆ ಇಂದಿನ ಪಟ್ಟಿ 340 ಕವಿಗಳು ಇದ್ದಾರೆ ಇದನ್ನು ನೋಡಿದರೆ, ಕಾವ್ಯ ಈಗ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ನಮ್ಮ ತಂದೆ ಎಲ್ಲಾ ಆಯಾಮಗಳಲ್ಲಿ ಬರೆದಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕವಿತೆಗಳು ಬರುತ್ತಿವೆ. ಆದರೆ ನೇರ ನೆಟ್ ವರ್ಕ್ ಸಿಗದ ಸ್ಥಳದಲ್ಲಿ ಉತ್ತಮ ಕವಿತೆ ಉದ್ಬವವಾಗುತ್ತದೆ ಎಂದರು.

ಕಾರ್ಯಕ್ರಮಗಳು ಮೆರಗು ನೀಡಿದ್ವು, ಸಮೂಹ ನೃತ್ಯ ಸ್ಪರ್ಧೆ. ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಜಾನಪದ ಗೀತೆಗಳಿಗೆ ಭರ್ಜರಿ ಡ್ಯಾನ್ಸ್ ಮಾಡಿದರು. ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಂತೂ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಾರಿಶಕ್ತಿಯ ಬಲ ಪ್ರದರ್ಶನವಾಯ್ತು. ಅಲ್ಲದೇ ದಸರಾ ವಸ್ತು ಪ್ರದರ್ಶನದಲ್ಲಿ ಮರಳು ಶಿಲ್ಪಗಳು ಪ್ರವಾಸಿಗರ ಮನಸೆಳೆದವು. ಸರ್ಕಾರದ ಐದು ಗ್ಯಾರಂಟಿಗಳು, ಚಂದ್ರಯಾನ-3ರ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಮರಳಿನ ಶಿಲ್ಪಗಳು ವಸ್ತುಪ್ರದರ್ಶನಕ್ಕೆ ಮೆರಗು ನೀಡಿದವು.

ಇದನ್ನೂ ಓದಿ: ಕೊನೆಗೂ ದಸರಾ ಗೋಲ್ಡ್​ ಕಾರ್ಡ್​ ಬಿಡುಗಡೆಗೆ ಮುಹೂರ್ತ ಫಿಕ್ಸ್​; ಒಂದರ ಬೆಲೆ ಎಷ್ಟು ಗೊತ್ತಾ?

ಒಟ್ಟಾರೆ ಮೂರನೇ ದಿನದ ದಸರಾ ಸಂಭ್ರಮವೂ ಹತ್ತುಹಲವು ಕಾರ್ಯಕ್ರಮಗಳ ಮೂಲಕ ಪ್ರವಾಸಿಗರ ಗಮನಸೆಳೆದಿದೆ. ನಾಳೆಯಿಂದ ಯುವದಸರಾ ಸೇರಿ ಮತ್ತಷ್ಟು ಕಾರ್ಯಕ್ರಗಳು ಆರಂಭವಾಗಲಿದ್ದು ದಸರಾ ಮಹೋತ್ಸವ ರಂಗುಪಡೆದುಕೊಳ್ಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ