Mysore Dasara 2023: ಇಂದು ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ: ದರ, ಖರೀದಿ ಹೇಗೆ? ಇಲ್ಲಿದೆ ಮಾಹಿತಿ
ದಸರಾ ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತ ಇಂದು (ಅ.18) ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ.
ಮೈಸೂರು ಅ.18: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara) ಮಹೋತ್ಸವ-2023ಕ್ಕೆ ಚಾಲನೆ ದೊರೆತಿದೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈಗಾಗಲೆ ವಿವಿಧ ಕಾರ್ಯಕ್ರಮಗಳು ಆರಂಭವಾಗಿದೆ. ಅಕ್ಟೋಬರ್ 24ರ ವಿಜಯದಶಮಿಯಂದು (Vijayadashami) ವಿಶ್ವವಿಖ್ಯಾತ ಜಂಬೂಸವಾರಿ (Jambusavari) ಮೆರವಣಿಗೆ ನಡೆಯಲಿದೆ. ದಸರಾ ಉತ್ಸವವನ್ನು ವೀಕ್ಷಿಸಲು ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತ ಇಂದು (ಅ.18) ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ.
ಜಿಲ್ಲಾಡಳಿತ ದಸರಾ ಗೋಲ್ಡ್ ಕಾರ್ಡ್ಗೆ 6 ಸಾವಿರ ರೂ. ನಿಗದಿ ಮಾಡಿದೆ. ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿದೆ ಆನ್‌ಲೈನ್ ಮೂಲಕ mysoredasara.gov.in ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು.
ಅದೇರಿತಿಯಾಗಿ ಅರಮನೆ ಆವರಣದೊಳಗೆ ದಸರಾ ಜಂಬೂಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 3 ಸಾವಿರ ರೂ. ಹಾಗೂ 2 ಸಾವಿರ ರೂ. ನಿಗದಿ ಮಾಡಲಾಗಿದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ 500 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ: ಹೊರ ರಾಜ್ಯದ ವಾಹನಗಳಿಗೆ ತೆರಿಗೆ ವಿನಾಯತಿ ನೀಡಿದ ಕರ್ನಾಟಕ ಸರ್ಕಾರ
ಆನ್‌ಲೈನ್ ಮೂಲಕ ಗೋಲ್ಡ್ಕಾರ್ಡ್ ಟಿಕೆಟ್ ಖರೀದಿ ಮಾಡಿದ ನಂತರ ಖರೀದಿಸಿದವರಿಗೆ ಗೋಲ್ಡ್ ಕಾರ್ಡ್ ಟಿಕೆಟ್ ಸ್ವೀಕರಿಸಲು ಸ್ಥಳ, ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಗಳು ಅವರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಮತ್ತು ಇ-ಮೇಲ್ ಐಡಿಗೆ ಮಾಹಿತಿ ಕಳಹಿಸಲಾಗುತ್ತದೆ. ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಖರೀದಿಗಾಗಿ mysoredasara.gov.in ವೆಬ್‌ಸೈಟ್‌ನಲ್ಲಿ ಸಂಪರ್ಕಿಸಬಹುದು ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದರು.
ಮೈಸೂರು ದಸರಾ ಏರ್ ಶೋ, ಉಚಿತ ಪ್ರವೇಶ
ಅ.22 ಹಾಗೂ ಅ.23ರಂದು ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಏರ್ ಶೋ ನಡೆಯಲಿದೆ. ಅ.22 ರಂದು ನಡೆಯುವ ಏರ್ ಶೋಗೆ ಪಾಸ್ ಇರುವುದಿಲ್ಲ. ಆ ದಿನ ಎಲ್ಲರಿಗೂ ಉಚಿತ ಪ್ರವೇಶ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತೆ. 3 ಗಂಟೆಯ ನಂತರ ಬಂದವರಿಗೆ ಪ್ರವೇಶವಿರುವುದಿಲ್ಲ. 23 ರಂದು ಪಂಜಿನ ಕವಾಯತು ಪಾಸ್ ಮೂಲಕ ಏರ್ ಶೋ ನೋಡಲು ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ