ಬೆಂಗಳೂರಿನಲ್ಲಿ ಬಿಹಾರದ ವ್ಯಕ್ತಿಯ ಕೊಲೆ ಪ್ರಕರಣ: ಮೃತನ 2ನೇ ಪತ್ನಿ ಮತ್ತು ನಾದಿನಿ ಬಂಧನ

ಬಿಹಾರ ಮೂಲದ ಶಕೀಲ್ ಅಕ್ತಾರ್ ಎಂಬಾತನನ್ನು ಬೆಂಗಳೂರು ನಗರದಲ್ಲಿ ಕೊಲೆ ಮಾಡಲಾಗಿತ್ತು. ಆದರೆ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಎರಡನೇ ಪತ್ನಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಪೊಲೀಸರು, ದೂರು ನೀಡಿದ ಮೃತನ ಎರಡನೇ ಪತ್ನಿ ಮತ್ತು ನಾದಿನಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಹಾರದ ವ್ಯಕ್ತಿಯ ಕೊಲೆ ಪ್ರಕರಣ: ಮೃತನ 2ನೇ ಪತ್ನಿ ಮತ್ತು ನಾದಿನಿ ಬಂಧನ
ಬೆಂಗಳೂರಿನಲ್ಲಿ ಬಿಹಾರದ ವ್ಯಕ್ತಿಯ ಕೊಲೆ ಪ್ರಕರಣ ಸಂಬಂಧ ಮೃತನ 2ನೇ ಪತ್ನಿ ಮತ್ತು ನಾದಿನಿಯನ್ನು ಬಂಧಿಸಿದ ಸಂಪಿಗೆಹಳ್ಳಿ ಪೊಲೀಸರು
Follow us
Jagadisha B
| Updated By: Rakesh Nayak Manchi

Updated on:Oct 19, 2023 | 7:40 AM

ಬೆಂಗಳೂರು, ಅ.19: ನಗರದಲ್ಲಿ ನಡೆದ ಬಿಹಾರ ಮೂಲದ ಶಕೀಲ್ ಅಕ್ತಾರ್ ಎಂಬಾತನ ಕೊಲೆ (Murder) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಸಂಪಿಗೆಹಳ್ಳಿ ಠಾಣಾ ಪೊಲೀಸರು ಮೃತನ ಎರಡನೇ ಪತ್ನಿ ಮತ್ತು ನಾದಿನಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನಜೀರ್ ಖಾಟುನ್ ಮತ್ತು ಕಾಶ್ಮೀರಿ ಬಂಧಿತ ಆರೋಪಿಗಳಾಗಿದ್ದಾರೆ.

ಅಕ್ಟೋಬರ್ 9 ರಂದು ರಾತ್ರಿ ಮಂಚದ ಮೇಲೆ ಮಲಗಿದ್ದ ಶಕೀಲ್ ಎದೆ ಮೇಲೆ ಕುಳಿತ ಎರಡನೇ ಪತ್ನಿ ನಜೀರ್ ಖಾಟುನ್ ಬಲವಾಗಿ ಕತ್ತು ಹಿಸುಕಿದ್ದಾಳೆ. ಕೃತ್ಯದ ವೇಳೆ ನಾದಿನಿ ಕಾಶ್ಮೀರಿ ಶಕೀಲ್​ನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನ ನಾಗಸಂದ್ರ ಬಳಿ ನಡೆದ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್​​; ಕೊಲೆ ಹಿಂದೆ ಇದೆ ಪ್ರೇಮ ಕಹಾನಿ

ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದಾಗ ಶಕೀಲ್ ಮಂಚದಿಂದ ಕೆಳಗೆ ಬಿದ್ದರೂ ಬಿಡದ ಆರೋಪಿಗಳು, ಕತ್ತು ಹಿಸುಕು ಕೊಲೆ ಮಾಡಿದ್ದಾರೆ. ಹತ್ಯೆ ಬಳಿಕ ಬೆಡ್ ಶೀಟ್​ನಲ್ಲೇ ಶವವನ್ನು ಕಟ್ಟಿದ್ದರು. ಭಾರೀ ಮಳೆ ಹಿನ್ನೆಲೆ‌ ಯಾರ ಗಮನಕ್ಕೂ ಬಾರದ ರೀತಿ ಖತರ್ನಾಕ್ ಪ್ಲ್ಯಾನ್ ಮಾಡಿದ ಆರೋಪಿಗಳು, ಮಧ್ಯರಾತ್ರಿಯಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ಶವ ಸಾಗಿಸಿದ್ದಾರೆ.

ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಹೊಂಡಕ್ಕೆ ಹಾಕಿ ಬಂದಿದ್ದರು. ಕೃತ್ಯ ಎಸಗಿದ ಎರಡು ದಿನಗಳ ಬಳಿಕ ನಾಟಕ ಮಾಡಲು ಆರಂಭಿಸಿದ ಶಕೀಲ್ ಎರಡನೇ ಪತ್ನಿ, ಠಾಣೆಗೆ ತೆರಳಿ ಪತಿ ಕಾಣೆಯಾಗಿದ್ದಾನೆಂದು ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅಕ್ಟೋಬರ್ 15 ರಂದು ಹೊಂಡದಲ್ಲಿ ಕೆಟ್ಟ ವಾಸನ ಬರುತ್ತಿದ್ದೆ ಎಂಬ ಮಾಹಿತಿ ತಿಳಿದುಬಂದಿದೆ. ಅದರಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಶವ ಹೊರತೆಗೆದು ತನಿಖೆ ಕೈಗೊಂಡಿದ್ದ ಸಂಪಿಗೇಹಳ್ಳಿ ಪೊಲೀಸರು ನಜೀರ್ ಖಾಟುನ್ ಮತ್ತು ಕಾಶ್ಮೀರಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Thu, 19 October 23