ಬೆಂಗಳೂರಿನ ನಾಗಸಂದ್ರ ಬಳಿ ನಡೆದ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್​​; ಕೊಲೆ ಹಿಂದೆ ಇದೆ ಪ್ರೇಮ ಕಹಾನಿ

ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್​ ಎಂಬುವರನ್ನು ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಪ್ರತಾಪ್ ಮತ್ತು ಆತನ ಸ್ನೇಹಿತ ಮಂಜುನಾಥ್ ಅಲಿಯಾಸ್​ ಮಂಜ (22) ಬೈಕಿನಲ್ಲಿ ಕಿಡ್ನಾಪ್ ಮಾಡಿದ್ದರು. ಮುಂದೆ ಏನಾಯ್ತು ಇಲ್ಲಿದೆ ಓದಿ

ಬೆಂಗಳೂರಿನ ನಾಗಸಂದ್ರ ಬಳಿ ನಡೆದ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್​​; ಕೊಲೆ ಹಿಂದೆ ಇದೆ ಪ್ರೇಮ ಕಹಾನಿ
ಕೊಲೆಯಾದ ಯುವಕ ಲೋಕೇಶ್​
Follow us
ಬಿ ಮೂರ್ತಿ, ನೆಲಮಂಗಲ
| Updated By: ವಿವೇಕ ಬಿರಾದಾರ

Updated on:Oct 17, 2023 | 12:02 PM

ನೆಲಮಂಗಲ ಅ.17: ನಗರದ ನಾಗಸಂದ್ರ ಮೆಟ್ರೋ (Metro) ನಿಲ್ದಾಣದ ಬಳಿಯ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್​​ 5 ರಂದು ಕಿಡ್ನಾಪ್ ಆದ ಯುವಕ ಲೋಕೇಶ್​​ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಆರೋಪಿಗಳು ಯುವಕನನ್ನು ಕಿಡ್ನಾಪ್​ ಮಾಡಲು ಕಾರಣವೇನು? ಕಿಡ್ನಾಪ್​ (Kidnap) ಹಿಂದಿನ ಕಾಣದ ಕೈ ಯಾವುದು ಎಂದು ಮಾದನಾಯಕನಹಳ್ಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಡಿಪ್ಲೋಮಾದಲ್ಲಿ ಇಂಜಿನಿಯರಿಂಗ್ ಮಾಡಿದ್ದ ದಾವಣಗೆರೆ ಮೂಲದ ಯುವಕ ಲೋಕೇಶ್ ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಂಪನಿಯಲ್ಲಿ ಚಿಕ್ಕಬಳ್ಳಾಪುರ ಮೂಲದ ಪ್ರತಾಪ್ (23) ಮತ್ತು 22 ವರ್ಷದ ಯುವತಿ ಕೆಲಸ ಮಾಡುತ್ತಿದ್ದರು.

ಪ್ರತಾಪ್ ಮತ್ತು ಯುವತಿ ಬಾಲ್ಯ ಸ್ನೇಹಿತರು. ಪ್ರತಾಪ್​ ಯುವತಿಯನ್ನು ಬಾಲ್ಯದಿಂದ ಪ್ರೀತಿಸುತ್ತಿದ್ದನು. ಅಲ್ಲದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಯುವತಿಗೆ ಕೆಲಸ ಕೊಡಿಸಿದ್ದನು. ಕಂಪನಿಯಲ್ಲಿ ಲೋಕೇಶ್​​ಗೆ ಈ ಯುವತಿಯ ಪರಿಚಯವಾಗುತ್ತದೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿದೆ. ಇವರಿಬ್ಬರ ಪ್ರೀತಿ ವಿಚಾರ ತಿಳಿದ ಪ್ರತಾಪ್​, ಲೋಕೇಶ್​ ಮೇಲೆ ನಿಗಿ ನಿಗಿ ಕೆಂಡಕಾರಲು ಆರಂಭಿಸಿದ್ದನು. ಇದೇ ವಿಚಾರವಾಗಿ ಪ್ರತಾಪ್​ ಮತ್ತು ಲೋಕೇಶ್​ ನಡುವೆ ಎರಡು ತಿಂಗಳ ಹಿಂದೆ ಗಲಾಟೆ ನಡೆದಿತ್ತು.

ಅಕ್ಟೋಬರ್ 5 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಲೋಕೇಶ್​ನನ್ನು ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಪ್ರತಾಪ್ ಮತ್ತು ಆತನ ಸ್ನೇಹಿತ ಮಂಜುನಾಥ್ ಅಲಿಯಾಸ್​ ಮಂಜ (22) ಬೈಕಿನಲ್ಲಿ ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್​ ದೃಶ್ಯ ಅಲ್ಲೆ ಸನಿಹದಲ್ಲಿದ್ದ ಪ್ಯಾಕ್ಟರಿವೊಂದರ ಸಿಸಿಕ್ಯಾಮಾರದಲ್ಲಿ ಸರೆಯಾಗಿದೆ.

ಅಳಿಯ ಮನೆಗೆ ಬಾರದಿದ್ದರಿಂದ ಲೋಕೇಶ್ ಮಾವ ಹಾಲೇಶ್​ ಬಾಗಲಗುಂಟೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಕಿಡ್ನಾಪ್​ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಕಿಡ್ನಾಪ್​​ ಪ್ರಕರಣ ನಡೆದು ಎರಡು ದಿನಗಳ ನಂತರ ಅಂದರೆ ಅಕ್ಟೋಬರ್ 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕುಕ್ಕನಹಳ್ಳಿ ಗ್ರಾಮದ ಯಲ್ಲಪ್ಪ ಎಂಬುವರ ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವದ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ರೀತಿ ಗಾಯದ ಗುರುತು ಇತ್ತು. ಇದನ್ನು ಕಂಡ ಮಾದನಾಯಕನಹಳ್ಳಿ ಪೊಲೀಸರು 302 ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಯುತ್ತಾರೆ.

ಇದನ್ನೂ ಓದಿ: ಮಳೆಯಲ್ಲೇ ಬಿತ್ತು ರೌಡಿಶೀಟರ್ ಹೆಣ! ಅಕ್ರಮ ಸಂಬಂಧಕ್ಕಾಗಿಯೇ ನಡೀತಾ ಹತ್ಯೆ?

ತನಿಖೆ ವೇಳೆ ಮಾದನಾಯಕನಹಳ್ಳಿ ಪೊಲೀಸರಿಗೆ ಬೆಂಗಳೂರಿನಲ್ಲಿ ಲೋಕೇಶ್ ಎಂಬ ವ್ಯಕ್ತಿ​ ಅಪರಣವಾಗಿರುವ ಬಗ್ಗೆ ತಿಳಿಯುತ್ತದೆ. ಆಗ ಪೊಲೀಸರು ಲೋಕೇಶ್​ ಪೋಟೋ ತರಿಸಿಕೊಳ್ಳುತ್ತಾರೆ. ನಂತರ ಲೋಕೇಶ್​ ಮಾವ ಆನೇಶ್​ನನ್ನು ಕರೆಸಿಕೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಶವ ಗುರುತಿಗೆ ಹೋಗುತ್ತಾರೆ. ಆಗ ಹಾಲೇಶ್ ಇದು ಲೋಕೇಶ್​​ನದ್ದೇ ಶವ ಎಂದು ಗುರುತು ಹಿಡಿಯುತ್ತಾರೆ.

ಈ ವಿಚಾರ ತಿಳಿದ ತಕ್ಷಣ ಆಕ್ಟಿವ್​ ಆದ ಮಾದನಾಯಕನಹಳ್ಳಿ ಪೊಲೀಸರು ಲೋಕೇಶ್​ ಕೆಲಸ ಮಾಡುತ್ತಿದ್ದ ಕಂಪನಿ ಸಿಸಿಟಿವಿ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಗುತ್ತದೆ. ಲೋಕೇಶ್​ ಬಗ್ಗೆ ಆತನ ಸ್ನೇಹಿತರ ಬಳಿ ಪೊಲೀಸರು ವಿಚಾರಿಸಿದಾಗ, ಆರೋಪಿ ಪ್ರತಾಪ್​ ಮತ್ತು ಲೋಕೇಶ್​ ನಡುವೆ ನಡೆದ ಗಲಾಟೆ ಬಗ್ಗೆ ಹೇಳುತ್ತಾರೆ.

ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳ ಸ್ಥಳ ಪತ್ತೆಹಚ್ಚಿದಾಗ ಶಿಡ್ಲಘಟ್ಟದಲ್ಲಿ ತಲೆಮರಸಿಕೊಂಡಿದ್ದಾರೆ ಎಂಬುವುದು ತಿಳಿಯುತ್ತದೆ. ಕೂಡಲೆ ಸ್ಥಳಕ್ಕೆ ಹೋದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕೊಲೆ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ಕಿಡ್ನಾಪ್ ಕೊಲೆ ಪ್ರಕರಣ ಭೇದಿಸಿದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮುರಳೀಧರ್, ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಹಾಗೂ ಸಿಬ್ಬಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:09 am, Tue, 17 October 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು