AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷಗಳ ಹಳೆ ವಾಹನಗಳಿಗೆ ಕೇಂದ್ರ ಬ್ರೇಕ್: ದೇವನಹಳ್ಳಿ ಬಳಿ ನಿರ್ಮಾಣವಾಯ್ತು ರಾಜ್ಯದ ಮೊದಲ ಸ್ಕ್ರಾಪ್ ಘಟಕ

ಕೇಂದ್ರ ಸರ್ಕಾರ 15 ವರ್ಷಗಳಿಗಿಂತ ಹಳೆಯದಾದ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ಈಗಾಗಲೇ ಬ್ರೇಕ್ ಹಾಕಿದ್ದು, ಅಂತಹ ವಾಹನಗಳನ್ನ ಗುಜುರಿಗೆ ಹಾಕಲು ಆದೇಶಿಸಿದೆ. ಆ ನಿಟ್ಟಿನಲ್ಲಿ ರಾಜ್ಯದ ಮೊದಲ ಸ್ಕ್ರಾಪ್ ಕೇಂದ್ರ ಸಿಲಿಕಾನ್ ಸಿಟಿ ಹೊರ ವಲಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರಾಜ್ಯದ ಮೊದಲ ಸ್ಕ್ರಾಪ್​ ಘಟಕ ತಲೆ ಎತ್ತಿದೆ.

15 ವರ್ಷಗಳ ಹಳೆ ವಾಹನಗಳಿಗೆ ಕೇಂದ್ರ ಬ್ರೇಕ್: ದೇವನಹಳ್ಳಿ ಬಳಿ ನಿರ್ಮಾಣವಾಯ್ತು ರಾಜ್ಯದ ಮೊದಲ ಸ್ಕ್ರಾಪ್ ಘಟಕ
ಸ್ಕ್ರಾಪ್ ಘಟಕ
ನವೀನ್ ಕುಮಾರ್ ಟಿ
| Edited By: |

Updated on: Oct 16, 2023 | 11:08 PM

Share

ದೇವನಹಳ್ಳಿ, ಅಕ್ಟೋಬರ್​​ 16: ಕೇಂದ್ರ ಸರ್ಕಾರ ವಾಯುಮಾಲಿನ್ಯ ಹಾಗೂ ಹಳೆ ವಾಹನಗಳಿಂದಾಗುವ ಅನಾಹುತಗಳನ್ನ ತಪ್ಪಿಸಲು 15 ವರ್ಷದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ ರಾಜ್ಯದಲ್ಲಿ ಲಕ್ಷ ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಾಗದೆ ಮೂಲೆಗುಂಪಾಗಿದ್ದು, ಇದೀಗ ಮೂಲೆ ಗುಂಪಾಗಿರುವ ವಾಹನಗಳಿಗಾಗಿಯೇ ರಾಜ್ಯದ ಮೊದಲ ಸ್ಕ್ರಾಪ್ (scrap) ಕೇಂದ್ರ ಸಿಲಿಕಾನ್ ಸಿಟಿ ಹೊರ ವಲಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರಾಜ್ಯದ ಮೊದಲ ಸ್ಕ್ರಾಪ್​ ಘಟಕ ತಲೆ ಎತ್ತಿದೆ.

ಕೇಂದ್ರ ಸರ್ಕಾರ 15 ವರ್ಷಗಳಿಗಿಂತ ಹಳೆಯದಾದ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ಈಗಾಗಲೇ ಬ್ರೇಕ್ ಹಾಕಿದ್ದು, ಅಂತಹ ವಾಹನಗಳನ್ನ ಗುಜುರಿಗೆ ಹಾಕಲು ಆದೇಶಿಸಿದೆ. ಆದರೆ ಈ ಆದೇಶ ಆಗಿ 2 ವರ್ಷ ಕಳೆದರು ನಮ್ಮ ರಾಜ್ಯದಲ್ಲಿ ಮಾತ್ರ ಗುಜುರಿ ಘಟಕ ತಲೆ ಎತ್ತಿರಲಿಲ್ಲ. ಹೀಗಾಗಿ ಇದೀಗ ರಾಜ್ಯದಲ್ಲೇ ಮೊಟ್ಟ ಮೊದಲ ವಾಹನಗಳ ಸ್ಕ್ರಾಪ್ ಘಟಕ ದೇವನಹಳ್ಳಿ ಬಳಿ ತಲೆ ಎತ್ತಿದೆ. ಜೊತೆಗೆ ಕಳೆದೊಂದು ತಿಂಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 200 ಕ್ಕೂ ಅಧಿಕ ಬೈಕ್ ಹಾಗೂ 200 ಕ್ಕೂ ಅಧಿಕ ಹಳೆಯ ಕಾರುಗಳನ್ನ ಸ್ಕ್ರಾಪ್ ಮಾಡಲಾಗಿದೆ.

ಇದನ್ನೂ ಓದಿ: ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು

ರಾಜ್ಯದಲ್ಲಿ 16 ಲಕ್ಷಕ್ಕೂ ಅಧಿಕ ವಾಹನಗಳು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿದ್ದು ಅವುಗಳೆಲ್ಲ ಸಂಚಾರ ಮಾಡಲಾಗದೆ ನಿಂತಲ್ಲೇ ನಿಂತಿವೆ. ಜೊತೆಗೆ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ 14 ಸಾವಿರಕ್ಕೂ ಅಧಿಕ ವಾಹನಗಳು ಸ್ಕ್ರಾಪ್​ಗೆ ರೆಡಿಯಾಗಿದ್ದು, ಅವುಗಳಲ್ಲಿ 9 ಸಾವಿರ ವಾಹನಗಳನ್ನ ಸ್ಕ್ರಾಪ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಅಂತಹ ವಾಹನಗಳನ್ನೆಲ್ಲ ಮಹೀಂದ್ರ ಸ್ಕ್ರಾಪ್ ಘಟಕದ ಸಿಬ್ಬಂದಿ ತೂಕದ ಆಧಾರದಲ್ಲಿ ಖರೀದಿ ಮಾಡಿ ವಿವಿಧ ಬಾಗಗಳಾಗಿ ವಿಂಗಡನೆ ಮಾಡಲಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ವಾಪಸ್​ ಬೆಂಗಳೂರಿಗೆ ಬಂದ ವಿಮಾನ: ಪ್ರಯಾಣಿಕರು ಕಂಗಾಲು

ಅಲ್ಲದೆ ಇದರಲ್ಲಿ ಮರು ನವೀಕರಣ ಹಾಗೂ ಮರು ಬಳಕೆಗೆ ಯೋಗ್ಯವಾದ ವಸ್ತುಗಳನ್ನ ಬೇರ್ಪಡಿಸಿ ಮರು ಬಳಕೆ ಮಾಡಲಿದ್ದು ಇದರಿಂದ ರಾಜ್ಯದಲ್ಲಿ ಹಳೆ ವಾಹನಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಇತರೆ ಅನಾಹುತಗಳ ತಪ್ಪಲಿದೆ ಅಂತ ದೇವನಹಳ್ಳಿಯ ಎಆರ್ಟಿಒ ಶ್ರೀನಿವಾಸಪ್ಪ ತಿಳಿಸಿದ್ದಾರೆ.

ಒಟ್ಟಾರೆ ಲಕ್ಷ ಲಕ್ಷ ವಾಹನಗಳು ಓಡಾಡಕ್ಕೆ ನಿಷೇದವಾಗಿದ್ದರು ಸ್ಕ್ರಾಪ್ ಮಾಡಲು ಸ್ಥಳವಿಲ್ಲದೆ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದ್ದು, ಇದೀಗ ಸಿಲಿಕಾನ್ ಸಿಟಿ ಹೊರ ವಲಯದಲ್ಲೇ ಸ್ಕ್ರಾಪ್ ಘಟಕ ತಲೆ ಎತ್ತಿರುವುದು ಹಳೆ ವಾಹನಗಳಿಗೆ ಮುಕ್ತಿ ನೀಡಲು ಸಹಕಾರವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್