AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು

ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು ಎಂದು ಇಸ್ರೇಲ್​ಯಿಂದ ಕನ್ನಡತಿಯೊಬ್ಬರು ಹೇಳಿದ್ದಾರೆ.

ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್​ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು
ಇಸ್ರೇಲ್​ನಿಂದ ಭಾರತಕ್ಕೆ ಬಂದ ಕನ್ನಡಿಗರು
ನವೀನ್ ಕುಮಾರ್ ಟಿ
| Edited By: |

Updated on: Oct 14, 2023 | 3:19 PM

Share

ಬೆಂಗಳೂರು ಗ್ರಾಮಾಂತರ, ಅ.14: ಇಸ್ರೇಲ್(Israel) ಮತ್ತು ಹಮಾಸ್(Hamas)ನಡುವೆ ಸಂಘರ್ಷ‌ ಹಿನ್ನೆಲೆ ಇದೀಗ ಇಸ್ರೇಲ್​ನಲ್ಲಿದ್ದ ಭಾರತೀಯರು(Indians), ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ. 2 ನೇ ಬ್ಯಾಚ್​ನ 12:40 ರ‌ ಏರ್ ಇಂಡಿಯಾ ವಿಮಾನದಲ್ಲಿ 6 ಜನ ಪುರುಷರು ಹಾಗೂ 3 ಮಹಿಳೆಯರ ಸೇರಿದಂತೆ ಒಟ್ಟು 9 ಜನ ಕನ್ನಡಿಗರು ಆಗಮಿಸಿದ್ದಾರೆ. ಹೌದು, ದಕ್ಷಿಣ ಮೂರ್ತಿ, ಶಾಂತಮೂರ್ತಿ, ಉತ್ತಾಶ್ ದೇವನೂರು, ಸತೀಶ್ ಚಕ್ರಪಾಣಿ, ಶಿಲ್ಪ ಶ್ರೀ, ಸುಮತಿ, ಸೂರಜ್ ಕೃಷ್ಣ, ಪುಣ್ಯಕೋಟಿ ಮತ್ತು ಅಕ್ಷರ ಅವರು ಇಸ್ರೇಲ್​ನಿಂದ ದೆಹಲಿಗೆ ಬಂದು, ಅಲ್ಲಿಂದ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದಾರೆ. ಇವರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ತವರಿಗೆ ಕಳಿಸಲಿದ್ದಾರೆ.

ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ

ಕೆಂಪೇಗೌಡ ಏರ್ಪೊರ್ಟ್​ಗೆ ಇಸ್ರೇಲ್​ನಿಂದ ಆಗಮಿಸಿದವರಲ್ಲಿ ಒಬ್ಬರಾದ ಪುಣ್ಯಕೋಟಿ ಎಂಬುವವರು ಮಾತನಾಡಿ, ‘ಇಸ್ರೇಲ್​ನ ಉತ್ತರ ಭಾಗದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ನಮ್ಮ ಸುಮಾರು‌ ಜನ ಸ್ನೇಹಿತರು ಅಲ್ಲಿನ ಘಟನೆಗಳ ಬಗ್ಗೆ ಹೇಳುತ್ತಿದ್ದರೆ, ತುಂಬಾ ಬೇಸರವಾಗುತ್ತಿತ್ತು. ಆಫೀಸ್​ನಲ್ಲಿ ಬಹಳ ಭಯದಿಂದ ಎಲ್ಲರೂ ಕೆಲಸ ಮಾಡುತ್ತಿದ್ದರು. ತುಂಬಾ ಜನ ನಮ್ಮ ಸ್ನೇಹಿತರು ಗಾಜಾದಲ್ಲಿ ತೊಂದರೆ ಸಿಲುಕಿರುವುದು ಹೇಳುತ್ತಿದ್ದರು. ಇದೆಲ್ಲ ಕೇಳಿದಾಗ ತುಂಬಾ ಬೇಜಾರಾಗುತ್ತಿತ್ತು. ಎಲ್ಲವೂ ಸರಿ ಹೋದ ನಂತರ ನಾವು ಮತ್ತೆ ವಾಪಸ್ ತೆರಳುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?

ನಿನ್ನೆ ಬೆಂಗಳೂರಿಗೆ ಬಂದಿದ್ದ ಓರ್ವ ಕನ್ನಡಿಗ

ಹೌದು, ಇಸ್ರೇಲ್​ನಲ್ಲಿ ಯುದ್ದ ಪರಿಸ್ಥಿತಿ ಇರುವುದರಿಂದ ಅಲ್ಲಿರುವ ಭಾರತೀಯರನ್ನು ಆಪರೇಷನ್ ಅಜಯ್ ಮೂಲಕ ತವರು ದೇಶಕ್ಕೆ ಕರೆದುಕೊಂಡು ಬರುವ ಕೆಲಸ ನಡೆಯುತ್ತಿದೆ. ಅದರಂತೆ ನಿನ್ನೆ(ಅ.13) ರಾತ್ರಿ ಇಸ್ರೇಲ್​​​ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಅದರಲ್ಲಿ ವಿಜಯಪುರ ಮೂಲದ ಈರಣ್ಣ ಎಂಬುವವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಆಗಮಿಸಿ, ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ