ಆಪರೇಷನ್ ‘ಅಜಯ್’: 2ನೇ ಹಂತದಲ್ಲಿ ಇಸ್ರೇಲ್​​ನಿಂದ ಭಾರತಕ್ಕೆ ಬಂದ 235 ಭಾರತೀಯರು

Operation Ajay: ಭಾರತ ಸರ್ಕಾರ ಇಸ್ರೇಲ್​​ನಲ್ಲಿರುವ ಭಾರತೀಯರನ್ನು ತವರು ದೇಶಕ್ಕೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದೆ. ಆಪರೇಷನ್ ಅಜಯ್​​​  (Operation Ajay) ಮೂಲಕ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಈಗಾಗಲೇ ಆಪರೇಷನ್ ಅಜಯ್ ಮೂಲಕ ಮೊದಲ ಹಂತದಲ್ಲಿ 212 ನಾಗರಿಕರು ಭಾರತಕ್ಕೆ ಬಂದಿದ್ದಾರೆ. ಇದೀಗ ಎರಡನೇ ಹಂತದ ಏರ್​​​ಲಿಫ್ಟ್​​ನಲ್ಲಿ 235 ಭಾರತೀಯರು ಭಾರತಕ್ಕೆ ತಲುಪಿದ್ದಾರೆ. ಇದರಲ್ಲಿ 9 ಕನ್ನಡಿಗರು ಸೇರಿದ್ದಾರೆ.

ಆಪರೇಷನ್ 'ಅಜಯ್': 2ನೇ ಹಂತದಲ್ಲಿ ಇಸ್ರೇಲ್​​ನಿಂದ ಭಾರತಕ್ಕೆ ಬಂದ 235 ಭಾರತೀಯರು
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 14, 2023 | 9:41 AM

ದೆಹಲಿ, ಅ.14: ಇಸ್ರೇಲ್ (Israel)​​​ ಮತ್ತು ಹಮಾಸ್ (Hamas)​​ ಭಯೋತ್ಪಾದಕ ನಡುವೆ ಭೀಕರ ಯುದ್ಧಗಳು ನಡೆಯುತ್ತಿದೆ. ಈಗಾಗಲೇ ಇಸ್ರೇಲ್​​ ಹಮಾಸ್​​ ಉಗ್ರರನ್ನು ನಾಶ ಮಾಡಲು ಗಾಜಾ ಪಟ್ಟಿಯ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರ ಮಧ್ಯೆ ಭಾರತ ಸರ್ಕಾರ ಇಸ್ರೇಲ್​​ನಲ್ಲಿರುವ ಭಾರತೀಯರನ್ನು ತವರು ದೇಶಕ್ಕೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದೆ. ಆಪರೇಷನ್ ಅಜಯ್​​​  (Operation Ajay) ಮೂಲಕ ಭಾರತೀಯ ನಾಗರಿಕರನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಈಗಾಗಲೇ ಆಪರೇಷನ್ ಅಜಯ್ ಮೂಲಕ ಮೊದಲ ಹಂತದಲ್ಲಿ 212 ನಾಗರಿಕರು ಭಾರತಕ್ಕೆ ಬಂದಿದ್ದಾರೆ. ಇದೀಗ ಎರಡನೇ ಹಂತದ ಏರ್​​​ಲಿಫ್ಟ್​​ನಲ್ಲಿ 235 ಭಾರತೀಯರು ಭಾರತಕ್ಕೆ ತಲುಪಿದ್ದಾರೆ. ಇದರಲ್ಲಿ 9 ಕನ್ನಡಿಗರು ಸೇರಿದ್ದಾರೆ.

235 ಭಾರತೀಯರು ಹೊತ್ತ AI 506 ವಿಮಾನವು ದೆಹಲಿಗೆ ತಲುಪಿದೆ. 9 ಕನ್ನಡಿಗರು ದೆಹಲಿಯಿಂದ 10 ಗಂಟೆಗೆ ಬೆಂಗಳೂರಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ. ಮೈಸೂರಿನ ಐವರು, ಬೆಂಗಳೂರಿನ ಬಸವನಗುಡಿಯ ನಾಲ್ವರು ನಿವಾಸಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್​​​. ಜೈಶಂಕರ್​​ Xನಲ್ಲಿ (ಈ ಹಿಂದಿನ ಟ್ವಿಟರ್​​) ತಿಳಿಸಿದ್ದಾರೆ. ಈಗಾಗಲೇ ಮೊದಲ ಹಂತ ಏರ್​​​ಲಿಫ್ಟ್​​ನಲ್ಲಿ 212 ಮಂದಿ ಭಾರತೀಯರನ್ನು ನಮ್ಮ ದೇಶಕ್ಕೆ ಕರೆಸಿಕೊಳ್ಳಲಾಗಿದೆ. ಗುರುವಾರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟು ಶುಕ್ರವಾರ ಬೆಳಿಗ್ಗೆ ನವದೆಹಲಿ ತಲುಪಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್​​ನಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ‘ಆಪರೇಷನ್ ಅಜಯ್’, ಹೇಗಿದೆ ಕಾರ್ಯಾಚರಣೆ?

ಇಸ್ರೇಲ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ಅಕ್ಟೋಬರ್​​ 7ರಂದು ಆಪರೇಷನ್ ಅಜಯ್ ಆರಂಭಿಸಿಲಾಗಿತ್ತು. ಇದರ ಜತೆಗೆ ಇಸ್ರೇಲ್​​ ಪರಿಸ್ಥಿತಿ ಬಗ್ಗೆ ಮತ್ತು ಅಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಮೇಲ್ವಿಚಾರಣೆ ಮಾಡಲು ದೆಹಲಿಯಲ್ಲಿ 24 ಗಂಟೆಗಳ ಕಂಟ್ರೋಲ್​​ ರೂಮ್​​ನ್ನು (ನಿಯಂತ್ರಣ ಕೊಠಡಿ) ಸ್ಥಾಪಿಸಲಾಗಿದೆ. ಯಾವುದೇ ರೀತಿಯ ತೊಂದರೆಯಾದರೂ ಅಥವಾ ಸಹಾಯಕ್ಕಾಗಿ ಈ ನಂಬರ್​​ಗಳಿಗೆ ಫೋನ್​​ ಅಥವಾ ಮೆಸೇಜ್​​ ಮಾಡಬಹುದು, 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988, ಇದರ ಜತೆಗೆ ಭಾರತೀಯ ರಾಯಭಾರಿ ಕಚೇರಿಯ 24-ಗಂಟೆಗಳ ತುರ್ತು ಸಹಾಯವಾಣಿಯನ್ನು ನೀಡಿದೆ. +972-35226748 ಮತ್ತು +972-543278392, ಮತ್ತು ಇಮೇಲ್ ಮೂಲಕವು ತಿಳಿಸಬಹುದು cons1.telaviv@mea.gov.in.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ