Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?

History of Gaza Strip: ಈಚಿನ ಇತಿಹಾಸ ನೋಡಿದರೆ ಪ್ಯಾಲಸ್ಟೀನ್ ಪ್ರದೇಶದಲ್ಲಿ ಯಹೂದಿಗಳು ವಲಸಿಗರಾಗಿ ಬಂದು ಸೇರಿಕೊಂಡವರು. ಆದರೆ, ಇತಿಹಾಸದ ಆಳಕ್ಕೆ ಹೋದರೆ, ಯಹೂದಿಗಳ ಪೂರ್ವಿಕರು ಪ್ಯಾಲಸ್ಟೀನ್​ನ ನಿವಾಸಿಗಳೇ ಆಗಿದ್ದವರು. ಯಹೂದಿಗಳು ತಮ್ಮ ಮಾತೃ ನೆಲಕ್ಕೆ ಮರಳಿ ಇಸ್ರೇಲ್ ಎಂಬ ತಮ್ಮದೇ ನಾಡನ್ನು ನಿರ್ಮಿಸಿಕೊಂಡಿದ್ದಾರೆ. ತಾವಿರುವ ಜಾಗಕ್ಕೆ ಬಂದು ತಮ್ಮನ್ನೇ ಹೊರಹಾಕುತ್ತಿದ್ದಾರೆಂದು ಪ್ಯಾಲಸ್ಟೀನ್ ಅರಬ್ಬರು ಇಸ್ರೇಲ್ ಅಸ್ತಿತ್ವವನ್ನು ಪ್ರತಿರೋಧಿಸುತ್ತಾ ಬಂದಿದ್ದಾರೆ.

Israel Hamas Conflict Explained: ಇಸ್ರೇಲ್-ಹಮಾಸ್ ಯುದ್ಧದಲ್ಲಿ ರಣರಂಗವಾಗಿರುವ ಗಾಜಾ ಪಟ್ಟಿ ಯಾವುದು? ಏನಿದರ ಇತಿಹಾಸ?
ಇಸ್ರೇಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 13, 2023 | 2:42 PM

ಇಸ್ರೇಲ್ ಮತ್ತು ಪ್ಯಾಲಸ್ಟೀನ್ ಉಗ್ರರ (Israel Hamas Conflict) ಮಧ್ಯೆ ಭಯಾನಕ ಯುದ್ಧ ನಡೆಯುತ್ತಿದೆ. ಕ್ಷಿಪಣಿಗಳ ಮೆಲೆ ಕ್ಷಿಪಣಿಗಳು ಜನರನ್ನು ಬಲಿತೆಗೆದುಕೊಳ್ಳುತ್ತಿವೆ. ಇತಿಹಾಸದಲ್ಲೇ ಕಂಡು ಬಂದ ಅತ್ಯಂತ ಸುದೀರ್ಘ ಸಂಘರ್ಷಗಳಲ್ಲಿ ಇದೂ ಒಂದು. ನಾ ಬಿಡೆ, ನೀ ಕೊಡೆ ಎನ್ನುವಂತಹ ಸ್ಥಿತಿ ಇದು. ಯಹೂದಿಗಳು (Jews) ಮತ್ತು ಪ್ಯಾಲಸ್ಟೀನ್ ಅರಬ್ಬರಿಗೆ ಇದು ಅಸ್ತಿತ್ವದ ಪ್ರಶ್ನೆ. ಪರಸ್ಪರ ಅನುಸರಿಸಿಕೊಂಡು ಹೋಗುವ ಜಾಯಮಾನ ಎರಡೂ ಕಡೆ ಇಲ್ಲ. ಒಬ್ಬರು ಇದ್ದರೆ ಮತ್ತೊಬ್ಬರ ಅಸ್ತಿತ್ವಕ್ಕೆ ತೊಂದರೆ ಎಂಬ ಭಾವನೆ. ಇತ್ತೀಚಿನ ಇತಿಹಾಸ ಪರಿಗಣಿಸಿದರೆ ಯಹೂದಿಗಳು ಹೊರಗಿನಿಂದ ಬಂದ ವಲಸಿಗರು. ಹಳೆಯ ಇತಿಹಾಸ ಬಗೆದರೆ ಯಹೂದಿಗಳಿಗೆ ಪ್ಯಾಲೆಸ್ಟೀನ್ ಮೂಲನೆಲೆ. ಇದು ಬಿಟ್ಟರೆ ಯಹೂದಿಗಳಿಗೆ ಸ್ವಂತ ನೆಲ ಬೇರೆಲ್ಲೂ ಇಲ್ಲ. ಇದೇ ಈಗ ಸಮಸ್ಯೆಯಾಗಿರುವುದು.

ಇಸ್ರೇಲ್-ಪ್ಯಾಲೆಸ್ಟೀನ್ ಇತಿಹಾಸ ಏನು?

ಇಸ್ರೇಲ್ ಎಂಬ ದೇಶ ಸ್ಥಾಪನೆ ಆಗಿದ್ದು 1948ರಲ್ಲಿ. ಇದರ ಇತಿಹಾಸ ಮಾತ್ರ ಕ್ರಿಸ್ತಪೂರ್ವ ಐದಾರು ಶತಮಾನಗಳ ಹಿಂದಿನದ್ದು. ಜೆರುಸಲೆಂ (Jerusalem) ಎಂಬ ಪುರಾತನ ನಗರದಲ್ಲಿ ಯಹೂದಿಗಳ ಧರ್ಮ ಹುಟ್ಟಿದ್ದು. ಈ ನಗರ ಯಹೂದಿ, ಕ್ರೈಸ್ತ ಮತ್ತು ಇಸ್ಲಾಂ ಎಂಬ ಮೂರು ಧರ್ಮಗಳಿಗೆ ಬಹಳ ಮುಖ್ಯವಾದ ಪವಿತ್ರ ಸ್ಥಳವಾಗಿದೆ. ಈ ಮೂರೂ ಧರ್ಮಗಳು ಒಂದಕ್ಕೊಂದು ಸಂಬಂಧಿಸಿದ್ದರೂ ಎಣ್ಣೆ ಸೀಗೆಕಾಯಿಗಳಂತೆ ಭಾವಿಸುತ್ತವೆ.

ಕ್ರೈಸ್ತ ಧರ್ಮಕ್ಕೆ ತಳಹದಿ ಒಂದು ರೀತಿಯಲ್ಲಿ ಯಹೂದಿ ಧರ್ಮವೇ. ಇಸ್ಲಾಂ ಧರ್ಮಕ್ಕೆ ಕ್ರೈಸ್ತ ಧರ್ಮ ಸ್ಫೂರ್ತಿ. ಆದರೆ, ಇಸ್ಲಾಂ ಧರ್ಮದ ಉಗಮದ ಬಳಿಕ ಜೆರುಸಲೆಮ್ ಸುತ್ತಮುತ್ತಲ ಎಲ್ಲಾ ಪ್ರದೇಶಗಳು ಇಸ್ಲಾಮೀಕರಣಗೊಂಡವು. ಯಹೂದಿಗಳನ್ನು ಕಾಲ್ತೆಗೆಯುವಂತೆ ಮಾಡಲಾಯಿತು.

ಇದನ್ನೂ ಓದಿ: ಗಾಜಾದಲ್ಲಿ ಹಮಾಸ್​ನ ಅಡಗುತಾಣಗಳ ಮೇಲೆ ದಾಳಿ ನಡೆಸಿ ಒತ್ತೆಯಾಳುಗಳನ್ನು ರಕ್ಷಿಸಿದ ಇಸ್ರೇಲ್ ಸೈನಿಕರು

ಇಸ್ರೇಲ್ ಕನಸು

19ನೇ ಶತಮಾನದಿಂದೀಚೆ ಯೂರೋಪ್​ನಲ್ಲೂ ಯಹೂದಿಗಳನ್ನು ತುಳಿಯಲಾಗಿತ್ತು. ಅದರಲ್ಲೂ ಜರ್ಮನಿಯಲ್ಲಿ ಯಹೂದಿಗಳನ್ನು ಸಿಕ್ಕಸಿಕ್ಕಲ್ಲಿ ಸಂಹರಿಸಲಾಗುತ್ತಿತ್ತು. ಅವರು ಎಲ್ಲೆಡೆ ಚದುರಿ ಹೋದರು. ಇದೇ ಹೊತ್ತಲ್ಲಿ ಯಹೂದಿಗಳಿಗೆ ತಮ್ಮದೇ ಒಂದು ಸ್ವಂತ ದೇಶ ಇರಬೇಕೆಂದು ಆಲೋಚನೆ ಪ್ರಬಲಗೊಂಡಿತು.

ತಮ್ಮ ಧರ್ಮದ ಉಗಮಸ್ಥಳವಾದ ಜೆರುಸಲೆಂ ಬಳಿ ವಾಸ್ತವ್ಯ ಹೂಡಲು ಯಹೂದಿಗಳು ನಿರ್ಧರಿಸಿದರು. ಒಂದನೇ ವಿಶ್ವಮಹಾಯುದ್ಧಕ್ಕೆ ಮೊದಲು ಅದೆಲ್ಲವೂ ಪ್ಯಾಲೆಸ್ಟೀನ್ ಪ್ರದೇಶವಾಗಿತ್ತು. ಓಟ್ಟಮಾನ್ ಸಾಮ್ರಾಜ್ಯದ ಭಾಗವಾಗಿತ್ತು. ಯಹೂದಿಗಳು, ಅರಬ್ಬರು ಮತ್ತು ಕ್ರೈಸ್ತರು ಒಟ್ಟಿಗೆ ವಾಸಿಸುತ್ತಿದ್ದರು. ಇದು ಯಹೂದಿಗಳ ವಲಸೆ ಹೆಚ್ಚಲು ಕಾರಣವಾಯಿತು. ಅರಬ್ ಮುಸ್ಲಿಮರು ಪ್ರತಿರೋಧ ಒಡ್ಡತೊಡಗಿದರು.

ಇಸ್ರೇಲ್ ಉಗಮ

ಮಹಾಯುದ್ಧದ ಬಳಿಕ ಪ್ಯಾಲಸ್ಟೀನ್ ಪ್ರದೇಶ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಯಹೂದಿಗಳಿಗೆ ಪ್ರತ್ಯೇಕ ದೇಶ ನಿರ್ಮಾಣ ಮಾಡುವ ಕನಸು ಬಹಳ ಜೀವ ಪಡೆದುಕೊಂಡಿತ್ತು. ಬ್ರಿಟಿಷರೂ ಇದಕ್ಕೆ ಸಹಕಾರ ತೋರಿದರು. ಯುದ್ಧಗಳಿಂದ ಜರ್ಝರಿತವಾಗಿದ್ದ ಬ್ರಿಟಿಷರು ಪ್ಯಾಲಸ್ಟೀನ್​ನಲ್ಲಿ ರಾಜ್ಯಭಾರ ಮಾಡಲು ಸಾಧ್ಯವಾಗದೇ ವಿಶ್ವಸಂಸ್ಥೆಗೆ ಬಿಟ್ಟುಕೊಟ್ಟಿತು. ಭಾರತ ಸ್ವಾತಂತ್ರ್ಯ ಪಡೆದ 1947ರ ವರ್ಷದಲ್ಲೇ ವಿಶ್ವಸಂಸ್ಥೆ ಪ್ಯಾಲಸ್ಟೀನ್ ಪ್ರದೇಶದಲ್ಲಿ ಯಹೂದಿಗಳಿಗೆ ದೇಶ ಸ್ಥಾಪಿಸಲು ಅನುಮತಿ ಕೊಟ್ಟಿತು.

ಇದನ್ನೂ ಓದಿ: ಹಮಾಸ್ ಕೇವಲ ಉಗ್ರರಲ್ಲ, ರಾಕ್ಷಸರು: ಶತ್ರುಗಳು ಯಾರೆಂದು ಅರಿಯದ ಮುದ್ದು ಮಕ್ಕಳನ್ನು ಕೊಂದು ಸುಟ್ಟು ಹಾಕಿದ ಹಂತಕರು

1948ರಲ್ಲಿ ಇಸ್ರೇಲ್ ಸ್ಥಾಪನೆ ಆಯಿತು. ಅದಾದ ಬಳಿಕ ಇಸ್ರೇಲ್ ಸುತ್ತಮುತ್ತಲಿನ ಮುಸ್ಲಿಂ ಬಾಹುಳ್ಯದ ಅರಬ್ ದೇಶಗಳು ಯುದ್ಧ ಮಾಡಿದವು. ಪ್ಯಾಲಸ್ಟೀನ್​ನ ಭಾಗವಾಗಿದ್ದ ಗಾಜಾವನ್ನು ಈಜಿಪ್ಟ್ ಆಕ್ರಮಿಸಿತು. ವೆಸ್ಟ್ ಬ್ಯಾಂಕ್, ಜೆರುಸಲೆಂ ಮೊದಲಾದವನ್ನು ಜೋರ್ಡನ್ ಆಕ್ರಮಿಸಿತು. 1967ರಲ್ಲಿ ಯುದ್ದ ಗೆದ್ದ ಇಸ್ರೇಲ್, ಈಜಿಪ್ಟ್ ಬಳಿ ಇದ್ದ ಗಾಜಾ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿತು. ಜೋರ್ಡಾನ್ ಬಳಿ ಇದ್ದ ವೆಸ್ಟ್ ಬ್ಯಾಂಕ್ ಕೂಡ ಇಸ್ರೇಲ್ ವಶವಾಯಿತು. ಜೆರುಸಲೆಂ ಪೂರ್ವ ಭಾಗವು ಜೋರ್ಡನ್ ನಿಯಂತ್ರಣದಲ್ಲಿದೆ. ಪಶ್ಚಿಮ ಭಾಗ ಇಸ್ರೇಲ್ ನಿಯಂತ್ರಣದಲ್ಲಿದೆ.

ಇಸ್ರೇಲ್​ ಈ ಬದಿಯಲ್ಲಿ ವೆಸ್ಟ್ ಬ್ಯಾಂಕ್ ಇದ್ದರೆ, ಇನ್ನೊಂದು ಬದಿಯಲ್ಲಿ ಗಾಜಾ ಪಟ್ಟಿ ಇದೆ. ಈ ಎರಡೂ ಕಡೆ ಪ್ಯಾಲಸ್ಟೀನ್ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ತನ್ನ ಜನರನ್ನು ನೆಲೆಗೊಳಿಸಲು ಇಸ್ರೇಲ್ ಮಾಡುತ್ತಿರುವ ಯತ್ನಕ್ಕೆ ಪ್ರತಿರೋದ ವ್ಯಕ್ತವಾಗಿದೆ. ಇದರಿಂದಾಗಿಯೇ ಹುಟ್ಟಿದ್ದು ಹಮಾಸ್ ಎಂಬ ಉಗ್ರಪಡೆ.

ಗಾಜಾ ಪಟ್ಟಿ ಎಂದರೇನು?

ಗಾಜಾ ಬಹಳ ಪುಟ್ಟ ಪ್ರದೇಶ. ಇಸ್ರೇಲ್ ಮತ್ತು ಈಜಿಪ್ಟ್ ಗಡಿಭಾಗದಲ್ಲಿದೆ. ಒಂದು ಪುಟ್ಟ ನಗರದಷ್ಟು ಮಾತ್ರ ಇದು ವಿಶಾಲವಾಗಿದೆ. 20 ಲಕ್ಷ ಜನಸಂಖ್ಯೆ ಇಲ್ಲಿದೆ. ಇಲ್ಲಿ ಸುನ್ನಿ ಮುಸ್ಲಿಮರೇ ಬಹುತೇಕ ಇದ್ದಾರೆ. ಶೇ 99ರಷ್ಟು ಮುಸ್ಲಿಮರು, ಶೇ. 1ರಷ್ಟು ಕ್ರೈಸ್ತರು ಇದ್ದಾರೆ. ಯಹೂದಿಗಳನ್ನೆಲ್ಲಾ ವಾಪಸ್ ಕರೆಸಲಾಗಿದೆ. ಗಾಜಾ ಪಟ್ಟಿ ಸದ್ಯ ಹಮಾಸ್ ನಿಯಂತ್ರಣದಲ್ಲಿದೆ.

ಇದನ್ನೂ ಓದಿ: ಇಸ್ರೇಲ್ ಇಪ್ಪತ್ತು ದಿನಕ್ಕಿಂತ ಹೆಚ್ಚು ಹಮಾಸ್ ಮೇಲೆ ಯುದ್ಧ ಮಾಡಲು ಆಗಲ್ಲ; ಸೆನ್ಸೇಷನ್ ಟಾರೋ ಕಾರ್ಡ್ ರೀಡರ್ ಭವಿಷ್ಯ

ಅತ್ತ, ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಪ್ಯಾಲಸ್ಟೀನ್ ಅರಬ್ಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅದನ್ನು ಇಸ್ರೇಲ್ ಮಿಲಿಟರಿ, ಪ್ಯಾಲೆಸ್ಟೀನ್ ಲಿಬರೇಶನ್ ಫ್ರಂಟ್ ಇತ್ಯಾದಿಗಳು ಹಿಡಿತದಲ್ಲಿಟ್ಟುಕೊಂಡಿವೆ. ವೆಸ್ಟ್ ಬ್ಯಾಂಕ್ ಪ್ರದೇಶವನ್ನೇ ಪ್ಯಾಲಸ್ಟೀನ್ ದೇಶ ಎಂದು ಘೋಷಿಸಿಕೊಳ್ಳಲಾಗಿದೆ. ಪ್ಯಾಲಸ್ಟೀನ್ ಪ್ರದೇಶ ಅಧಿಕೃತವಾಗಿ ಇಸ್ರೇಲ್​ನ ಭಾಗವಾಗಿದ್ದರೂ ಅದು ಪ್ರತ್ಯೇಕ ದೇಶವಾಗಿ ಗುರುತುಗೊಂಡಿದೆ.

ಪ್ಯಾಲಸ್ಟೀನ್​ನಲ್ಲಿ ಪಿಎಲ್​ಎಫ್ ಆಡಳಿತ ನಡೆಸುತ್ತಿದ್ದು, ಇಸ್ರೇಲ್ ಜೊತೆ ತೀವ್ರ ಸಂಘರ್ಷಕ್ಕೆ ಮುಂದಾಗಿಲ್ಲ. ಆದರೆ, ಇಸ್ರೇಲ್​ಗೆ ತಲೆನೋವಾಗಿರುವುದು ಗಾಜಾಪಟ್ಟಿ. ಹಮಾಸ್ ಸಂಘಟನೆಗೆ ಗಾಜಾ ಪ್ರದೇಶವೇ ನೆಲೆ. ಇಲ್ಲಿಂದಲೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸುತ್ತಿರುವುದು.

ಗೆಲ್ಲೋದು ಯಾರು?

ಈಗ ಇಸ್ರೇಲ್ ಗಾಜಾ ಪಟ್ಟಿಯನ್ನು ನೆಲಸಮ ಮಾಡಲು ಪಣತೊಟ್ಟಿದೆ. ಇಲ್ಲಿರುವ ಜನರನ್ನೆಲ್ಲಾ ತೆರವು ಮಾಡುವಂತೆ ಎಚ್ಚರಿಕೆ ನೀಡಿದೆ. ವಿದ್ಯುತ್, ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಶೀಘ್ರದಲ್ಲೇ ಇಸ್ರೇಲ್ ಗಾಜಾ ಮೇಲೆ ವ್ಯಾಪಕವಾಗಿ ಕ್ಷಿಪಣಿ ಇತ್ಯಾದಿ ಮೂಲಕ ಆಕ್ರಮಣ ಮಾಡಲಿದೆ.

ಈ ಯುದ್ಧ ಇಸ್ರೆಲಿಗರು ಮತ್ತು ಪ್ಯಾಲಸ್ಟೀನ್ ಅರಬ್ಬರು ಮಾಡ ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಭಾವಿಸಿದ್ದಾರೆ. ಇಸ್ರೇಲ್ ಈ ಪ್ರದೇಶದಲ್ಲಿ ಇರಬಾರದು ಎನ್ನುವುದು ಹಮಾಸ್ ಉಗ್ರರ ಸಂಕಲ್ಪವಾದರೆ, ಪ್ಯಾಲಸ್ಟೀನ್ ಅರಬ್ಬರನ್ನು ಅಲ್ಲಿಂದ ಓಡಿಸುವುದು ಇಸ್ರೇಲ್​ನ ಇರಾದೆಯಾದಂತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Fri, 13 October 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್