ಹಮಾಸ್ ಕೇವಲ ಉಗ್ರರಲ್ಲ, ರಾಕ್ಷಸರು: ಶತ್ರುಗಳು ಯಾರೆಂದು ಅರಿಯದ ಮುದ್ದು ಮಕ್ಕಳನ್ನು ಕೊಂದು ಸುಟ್ಟು ಹಾಕಿದ ಹಂತಕರು
ಹಮಾಸ್ ಕೇವಲ ಉಗ್ರರಲ್ಲ, ರಾಕ್ಷಸರು, ಶತ್ರುಗಳೇ ಯಾರೆಂದು ಅರಿಯ ಮುದ್ದು ಮಕ್ಕಳನ್ನು ಹಮಾಸ್ ಉಗ್ರರು ಕೊಂದು, ಸುಟ್ಟು ಹಾಕಿದ್ದಾರೆ, ಈ ಚಿತ್ರಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಂಚಿಕೊಂಡಿದ್ದಾರೆ. ಅವರು ಹಮಾಸ್ ಅಲ್ಲ ಐಸಿಸ್ ಎಂದು ಉದ್ಘರಿಸಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಇದೀಗ ಅಪಾಯಕಾರಿ ತಿರುವು ಪಡೆದುಕೊಳ್ಳುತ್ತಿರುವಂತಿದೆ.

ಹಮಾಸ್ ಕೇವಲ ಉಗ್ರರಲ್ಲ, ರಾಕ್ಷಸರು, ಶತ್ರುಗಳೇ ಯಾರೆಂದು ಅರಿಯ ಮುದ್ದು ಮಕ್ಕಳನ್ನು ಹಮಾಸ್ ಉಗ್ರರು ಕೊಂದು, ಸುಟ್ಟು ಹಾಕಿದ್ದಾರೆ, ಈ ಚಿತ್ರಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಂಚಿಕೊಂಡಿದ್ದಾರೆ. ಅವರು ಹಮಾಸ್ ಅಲ್ಲ ಐಸಿಸ್ ಎಂದು ಉದ್ಘರಿಸಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಭಯೋತ್ಪಾದಕ ಸಂಘಟನೆ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಇದೀಗ ಅಪಾಯಕಾರಿ ತಿರುವು ಪಡೆದುಕೊಳ್ಳುತ್ತಿರುವಂತಿದೆ.
ಎರಡೂ ಕಡೆಯಿಂದ ನಡೆಯುತ್ತಿರುವ ದಾಳಿಯಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದೆಲ್ಲದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಭಯೋತ್ಪಾದಕರ ಕ್ರೌರ್ಯದ ಸಾಕ್ಷ್ಯವನ್ನು ಜಗತ್ತಿಗೆ ತೋರಿಸಿದ್ದಾರೆ .
ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ಕಚೇರಿ ಗುರುವಾರ ಟ್ವೀಟ್ ಮಾಡಿದೆ ಮತ್ತು ಹಮಾಸ್ ಭಯೋತ್ಪಾದಕರಿಂದ ಕ್ರೂರವಾಗಿ ಕೊಲ್ಲಲ್ಪಟ್ಟ ಅಮಾಯಕರ ಮೃತ ದೇಹಗಳ ಭಯಾನಕ ಚಿತ್ರಗಳನ್ನು ಹಂಚಿಕೊಂಡಿದೆ.
ನೇತನ್ಯಾಹು ಅವರು ಈ ಚಿತ್ರಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೂ ತೋರಿಸಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ.
ನೇತನ್ಯಾಹು ಅವರ ಕಚೇರಿಯು ಈ ಛಾಯಾಚಿತ್ರಗಳು ಹಮಾಸ್ ಉಗ್ರರು ಕೊಲೆ ಮಾಡಿ, ಸುಟ್ಟಿರುವ ಮಕ್ಕಳ ಶವಗಳಿವು ಎಂದು ಹೇಳಿಕೊಂಡಿದೆ. ಅಕ್ಟೋಬರ್ 7 ರಂದು, ಇಸ್ರೇಲ್ ತನ್ನ ದಕ್ಷಿಣ ಭಾಗಗಳಲ್ಲಿ ಭಯೋತ್ಪಾದಕ ಗುಂಪು ಹಮಾಸ್‌ನಿಂದ ಬಹು-ಹಂತದ ದಾಳಿಗಳನ್ನು ಎದುರಿಸಿತು. 2007 ರಿಂದ ಗಾಜಾ ಪಟ್ಟಿಯನ್ನು ಹಮಾಸ್ ನಿಯಂತ್ರಿಸುತ್ತಿದೆ, ನಾವು ಇಸ್ರೇಲ್‌ನಲ್ಲಿನ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇವೆ.
ಮತ್ತಷ್ಟು ಓದಿ: ಇಸ್ರೇಲ್ನಲ್ಲಿ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡುತ್ತಿದ್ದಾರೆ: ಜೋ ಬೈಡನ್
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಭದ್ರತಾ ತಂಡದೊಂದಿಗೆ ಇಂದು ಬೆಳಗ್ಗೆ ಮತ್ತೆ ಮಾತನಾಡಿದೆ ಎಂದು ಜೋ ಬೈಡನ್ ಹೇಳಿದ್ದಾರೆ. ಹಮಾಸ್ ಜೊತೆ ನಡೆಯುತ್ತಿರುವ ಯುದ್ಧದ ನಡುವೆ, ಇಸ್ರೇಲ್ ಸಿರಿಯಾ ಮೇಲೆ ದಾಳಿ ಮಾಡಿದೆ.

ವರದಿಯ ಪ್ರಕಾರ, ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ದಾಳಿಯ ನಂತರ, ಅವುಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ಸ್ಥಳೀಯ ಸಿರಿಯನ್ ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಡಮಾಸ್ಕಸ್ ಮತ್ತು ಅಲೆಪ್ಪೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ದಾಳಿ ಮಾಡಿದೆ . ಇದರಿಂದಾಗಿ ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಯುದ್ಧ ಪೀಡಿತ ಸಿರಿಯಾದ ಈ ಎರಡೂ ವಿಮಾನ ನಿಲ್ದಾಣಗಳು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ. ಉಗ್ರರು ವೃದ್ಧರನ್ನು ಗುರಿಯಾಗಿಸಿಕೊಂಡಿದ್ದಷ್ಟೇ ಅಲ್ಲದೆ, ಚಿಕ್ಕ ಮಕ್ಕಳನ್ನೂ ಬಿಟ್ಟಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 am, Fri, 13 October 23




