ಇಸ್ರೇಲ್​ನಲ್ಲಿ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡುತ್ತಿದ್ದಾರೆ: ಜೋ ಬೈಡನ್

ಇಸ್ರೇಲ್​(Israel)ನಲ್ಲಿ ಹಮಾಸ್ ಉಗ್ರರು ಶಿಶುಗಳ ತಲೆಗಳನ್ನು ಕತ್ತರಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಹೇಳಿಕೆ ನೀಡಿದ್ದಾರೆ. ಇಸ್ರೇಲ್​ ಹಾಗೂ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಕ್ಟೋಬರ್ 11 ರಂದು ಯಹೂದಿಗಳನ್ನುದ್ದೇಶಿಸಿ ವೈಟ್​ಹೌಸ್​ನಲ್ಲಿ ಮಾತನಾಡಿದ್ದಾರೆ.

ಇಸ್ರೇಲ್​ನಲ್ಲಿ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡುತ್ತಿದ್ದಾರೆ: ಜೋ ಬೈಡನ್
ಜೋ ಬೈಡನ್
Follow us
|

Updated on:Oct 12, 2023 | 1:32 PM

ಇಸ್ರೇಲ್​(Israel)ನಲ್ಲಿ ಹಮಾಸ್ ಉಗ್ರರು ಶಿಶುಗಳ ತಲೆಗಳನ್ನು ಕತ್ತರಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಹೇಳಿಕೆ ನೀಡಿದ್ದಾರೆ. ಇಸ್ರೇಲ್​ ಹಾಗೂ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಕ್ಟೋಬರ್ 11 ರಂದು ಯಹೂದಿಗಳನ್ನುದ್ದೇಶಿಸಿ ವೈಟ್​ಹೌಸ್​ನಲ್ಲಿ ಮಾತನಾಡಿದ್ದಾರೆ.

ಭಯೋತ್ಪಾದಕರು ಮಕ್ಕಳ ಶಿರಚ್ಛೇದ ಮಾಡಿದ ಚಿತ್ರಗಳನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಈ ಶನಿವಾರ ಇಸ್ರೇಲ್ ನಗರಗಳ ಮೇಲೆ ನಡೆದ ಹಠಾತ್ ದಾಳಿಯಲ್ಲಿ ಕನಿಷ್ಠ 14 ಅಮೆರಿಕನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬೈಡನ್ ಖಚಿತಪಡಿಸಿದ್ದಾರೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಕೂಡ ದಾಳಿ ನಡೆಸಿದ ನೂರಾರು ಉಗ್ರರನ್ನು ಸದೆಬಡಿದಿದೆ ಹಾಗೂ ಗಾಜಾಗಡಿಯನ್ನು ವಾಪಾಸ್ ಪಡೆದಿದೆ.

ದಾಳಿಗಳು ಮತ್ತು ಪ್ರತೀಕಾರವು ಈಗಾಗಲೇ 4,000 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದೆ. ಜೋ ಬೈಡನ್ ಹೇಳಿಕೆಯ ಕುರಿತು ವೈಟ್ ಹೌಸ್ ಸ್ಪಷ್ಟೀಕರಣ ನೀಡಿದ್ದು, ಶಿಶಿಗಳ ತಲೆ ಕತ್ತರಿಸಿರುವ ಫೋಟೊವಾಗಲಿ ಅಥವಾ ವಿಡಿಯೋವಾಗಲಿ ಬೈಡನ್ ನೋಡಿಲ್ಲ ಆದರೆ ಇಸ್ರೇಲ್​ ಮಾಧ್ಯಮಗಳ ವರದಿಗಳ ಬಗ್ಗೆ ಮಾತನಾಡಿದ್ದಾರೆ ಎಂದಿದೆ.

ಮತ್ತಷ್ಟು ಓದಿ: ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್​, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು

ಹಮಾಸ್ ಉಗ್ರರು ಹಲವು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ, ಗಾಜಾ ಮೇಲೆ ಬಾಂಬ್ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಒಬ್ಬೊಬ್ಬರನ್ನಾಗಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿತ್ತು.

ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಎಚ್ಚರಿಕೆಗೆ ಪ್ರತಿಕ್ರಿಯಿಸಿದ್ದು, ನಾವು ಹಮಾಸ್ ಉಗ್ರರ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ, ಯುದ್ಧವನ್ನು ನಾವು ಆರಂಭಿಸಿಲ್ಲ ಆದರೆ ಅಂತ್ಯವು ನಮ್ಮ ಕೈಯಿಂದಲೇ ಆಗಲಿದೆ ಎಂದು ಹೇಳಿದ್ದಾರೆ.

ಇನ್ನೂ ಜೋ ಬೈಡನ್ ಅವರು ಕಷ್ಟದ ಕಾಲದಲ್ಲಿ ನಾವು ಇಸ್ರೇಲ್​ನೊಂದಿಗೆ ಇದ್ದೇವೆ ಎಂದು ಅಭಯ ನೀಡಿದ್ದಾರೆ. ಇನ್ನು ಇಸ್ರೇಲ್​ನಲ್ಲಿ ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 250ಕ್ಕೂ ಅಧಿಕ ಮಂದಿಯನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ, ಮನಬಂದಂತೆ ಗುಂಡುಗಳನ್ನು ಹಾರಿಸಿದ್ದಾರೆ, ಮಹಿಳೆಯರ ಮೇಲೆ ಅತ್ಯಾಚಾರವನ್ನು ಕೂಡ ನಡೆಸಿದ್ದಾರೆ. ಹಮಾಸ್ ಜತೆಗೆ ಇರಾನ್ ಭಾಗಿಯಾಗಿರುವ ಕುರಿತು ಅಮೆರಿಕ ಯಾವುದೇ ಪುರಾವೆಯನ್ನು ಹೊಂದಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:32 pm, Thu, 12 October 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್