ಭಾರತದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡಿರುವ ಆರೋಪ ಹೊತ್ತಿದ್ದ ಸಿಖ್ ವ್ಯಕ್ತಿಗೆ ಕೆನಡಾ ಬುಲಾವ್
ಭಾರತದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ, ಆಹಾರ ಒದಗಿಸಿದ್ದ ಸಿಖ್ ವ್ಯಕ್ತಿಗೆ ಕೆನಡಾ(Canada) ಪ್ರವೇಶಿಸಲು ಅನುಮತಿ ದೊರೆತಿದೆ. ಆತ ಭಯ ಹಾಗೂ ಅನಿವಾರ್ಯತೆಯಿಂದ ಉಗ್ರರಿಗೆ ಆಶ್ರಯ ನೀಡಿದ್ದ ಎಂದು ಕೆನಡಾದ ವಲಸೆ ನ್ಯಾಯಮಂಡಳಿ ಹೇಳಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಶಸ್ತ್ರಸಜ್ಜಿತ ಖಲಿಸ್ತಾನಿ ಉಗ್ರಗಾಮಿಗಳಿಗೆ 'ಮನೆ ಮತ್ತು ಆಹಾರ' ನೀಡಿದ ಸಿಖ್ ವ್ಯಕ್ತಿಗೆ ಕೆನಡಾಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ವಲಸೆ ನ್ಯಾಯಮಂಡಳಿ ತೀರ್ಪು ನೀಡಿತು ಆ ವ್ಯಕ್ತಿಗೆ ಅನಿವಾರ್ಯತೆ ಇತ್ತು ಎಂದು ಹೇಳಿದೆ.
ಭಾರತದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ, ಆಹಾರ ಒದಗಿಸಿದ್ದ ಸಿಖ್ ವ್ಯಕ್ತಿಗೆ ಕೆನಡಾ(Canada) ಪ್ರವೇಶಿಸಲು ಅನುಮತಿ ದೊರೆತಿದೆ. ಆತ ಭಯ ಹಾಗೂ ಅನಿವಾರ್ಯತೆಯಿಂದ ಉಗ್ರರಿಗೆ ಆಶ್ರಯ ನೀಡಿದ್ದ ಎಂದು ಕೆನಡಾದ ವಲಸೆ ನ್ಯಾಯಮಂಡಳಿ ಹೇಳಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಶಸ್ತ್ರಸಜ್ಜಿತ ಖಲಿಸ್ತಾನಿ ಉಗ್ರಗಾಮಿಗಳಿಗೆ ‘ಮನೆ ಮತ್ತು ಆಹಾರ’ ನೀಡಿದ ಸಿಖ್ ವ್ಯಕ್ತಿಗೆ ಕೆನಡಾಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ವಲಸೆ ನ್ಯಾಯಮಂಡಳಿ ತೀರ್ಪು ನೀಡಿತು ಆ ವ್ಯಕ್ತಿಗೆ ಅನಿವಾರ್ಯತೆ ಇತ್ತು ಎಂದು ಹೇಳಿದೆ.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ‘ಸಂಭವನೀಯ’ ಭಾಗಿತ್ವದ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಈ ನಿರ್ಧಾರವು ಬಂದಿದೆ.
ನಿಜ್ಜರ್‌ನನ್ನು ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಭಾರತವು 2020 ರಲ್ಲಿ ನಿಜ್ಜರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ವಲಸೆ ಮತ್ತು ನಿರಾಶ್ರಿತರ ಮಂಡಳಿ (IRB) ನ್ಯಾಯಮಂಡಳಿಯು ಇತ್ತೀಚಿನ ತೀರ್ಪಿನಲ್ಲಿ ರಾಮ್ ಕೆನಡಾವನ್ನು ಪ್ರವೇಶಿಸುವುದನ್ನು ತಡೆಯಲು ಫೆಡರಲ್ ಸರ್ಕಾರವು ಸಮಂಜಸವಾದ ಆಧಾರಗಳನ್ನು ಹೊಂದಿಲ್ಲ ಎಂದು ಹೇಳಿದೆ ಎಂದು ತಿಳಿಸಿದೆ.
ಮತ್ತಷ್ಟು ಓದಿ: G20 summit: ಜಸ್ಟಿನ್ ಟ್ರುಡೊ ಭಾರತದ ಭೇಟಿಯನ್ನು ಟೀಕಿಸಿದ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ
1980 ರ ದಶಕವು ಉಗ್ರವಾದದಿಂದ ತುಂಬಿತ್ತು, ಅಲ್ಲಿ ಭಿಂದ್ರನ್‌ವಾಲೆ ಅನುಯಾಯಿಗಳು ಮತ್ತು ಪೊಲೀಸರು ಸೇರಿದಂತೆ ಉಗ್ರಗಾಮಿಗಳ ಗುಂಪುಗಳು ಅನೇಕ ಸ್ಥಳೀಯ ನಿವಾಸಿಗಳಲ್ಲಿ ಭಯ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸಿದವು, ಎಂದು ತೀರ್ಪು ಹೇಳಿದೆ ಎಂದು ಪೋಸ್ಟ್ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ