G20 summit: ಜಸ್ಟಿನ್ ಟ್ರುಡೊ ಭಾರತದ ಭೇಟಿಯನ್ನು ಟೀಕಿಸಿದ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ
ಕೆನಡಾದ ಪ್ರಧಾನಿಯೊಬ್ಬರು ಪದೇ ಪದೇ ಅವಮಾನಕ್ಕೊಳಗಾಗುವುದನ್ನು ಮತ್ತು ತುಳಿತಕ್ಕೊಳಗಾಗುವುದನ್ನು ಯಾರು ಇಷ್ಟ ಪಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ X ನಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ (G20 summit) ಹಲವು ದೇಶದ ನಾಯಕರು ಭಾಗವಹಿಸಿದ್ದರು. ಮತ್ತು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆದವು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಇದೀಗಾ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಜಸ್ಟಿನ್ ಟ್ರುಡೊ ಅವರ ಭಾರತದ ಭೇಟಿಯನ್ನು ಟೀಕಿಸಿದ್ದಾರೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ G 20 ಶೃಂಗಸಭೆಯಲ್ಲಿ ಜಸ್ಟಿನ್ ಟ್ರೂಡೊ ಅವರ ಭೇಟಿಯ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಕೆನಡಾದ ಯಾವೊಬ್ಬ ವ್ಯಕ್ತಿಯು ತಮ್ಮ ದೇಶದ ಪ್ರಧಾನ ಮಂತ್ರಿಯ ಇಂತಹ ನಡವಳಿಕೆಗಳನ್ನು ನೋಡಲು ಇಷ್ಟಪಡುವುದಿಲ್ಲ ಎಂದು ಪಿಯರೆ ಪೊಯ್ಲಿವ್ರೆ ಟೀಕಿಸಿದ್ದಾರೆ. ಪಕ್ಷಪಾತವನ್ನು ಬದಿಗಿಟ್ಟು, ಕೆನಡಾದ ಪ್ರಧಾನಿಯೊಬ್ಬರು ಪದೇ ಪದೇ ಅವಮಾನಕ್ಕೊಳಗಾಗುವುದನ್ನು ಮತ್ತು ತುಳಿದುಕೊಳ್ಳುವುದನ್ನು ನೋಡಲು ಯಾರು ಇಷ್ಟಪಡುವುದಿಲ್ಲಎಂದು ಪೋಯ್ಲಿವ್ರೆ (ಟ್ವಿಟರ್) X ನಲ್ಲಿ ಬರೆದುಕೊಂಡಿದ್ದಾರೆ.
X ನಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದ ಪ್ರಧಾನಿ ಟ್ರೂಡೊ ಕೈ ಕುಲುಕುವ ದೃಶ್ಯವನ್ನು ಕಾಣಬಹುದು. ಮತ್ತು ಟ್ರೂಡೊ ಕ್ಯಾಮೆರಾವನ್ನು ನೋಡುತ್ತಿದ್ದರೆ, ಪ್ರಧಾನಿ ಮೋದಿ ಇತ್ತ ಕಡೆ ಕೈ ಬೀಸಿ ನಿಂತಿರುವುದನ್ನು X ಹಂಚಿಕೊಂಡಿರುವ ಫೋಟೋದಲ್ಲಿ ಕಾಣಬಹುದು.
Sunday’s front pagehttps://t.co/bLUZbyxPSR#cdnpoli #onpoli #g20 #trudeau #toronto #torontosun pic.twitter.com/Yd3yR0DLtT
— Toronto Sun (@TheTorontoSun) September 10, 2023
ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್ ಅಧ್ಯಕ್ಷ ಪ್ರೀಮಿಯರ್ ಪ್ಯೂಮಿಯೊ ಕಿಶಿಡಾ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯಸ್ಥರು ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದಾಗ, ಕೆನಡಾಕ್ಕೆ ಕೇವಲ ʼಪುಲ್ ಅಸೈಡ್ʼ ಸಭೆಯನ್ನು ನೀಡಲಾಯಿತು. ಆ ಸಭೆ ನಡೆದಾಗ ಕೆನಡಾದಲ್ಲಿ ಖಲಿಸ್ತಾನಿ ಉಗ್ರಗಾಮಿತ್ವ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧ ಖಲಿಸ್ತಾನಿ ಉಗ್ರಗಾಮಿಗಳ ಹಿಂಸಾಚಾರದ ಬೆದರಿಕೆಯ ಬಗ್ಗೆ ಟ್ರೂಟೊ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಇದೀಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ನಡೆಯನ್ನು ಅಲ್ಲಿಯ ವಿರೋಧ ಪಕ್ಷಗಳು ಅಸಮಾಧನ ವ್ಯಕ್ತಪಡಿಸಿದೆ.
ನಮ್ಮ ಅಧ್ಯಕ್ಷರು ಯಾವುದೇ ಔತಣ ಕೂಟದಲ್ಲೂ ಭಾಗವಹಿಸಿಲ್ಲ, ಜಾಗತಿಕ ಜೈವಿಕ ಇಂಧನ ಒಕ್ಕೂಟದಲ್ಲೂ ನಮ್ಮ ಪ್ರಧಾನಿ ಭಾಗವಹಿಸಿಲ್ಲ ಎಂದು ಟೀಕೆಗಳು ಕೆನಾಡದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಮೋದಿ ಅವರು ಅಷ್ಟು ಆತ್ಮೀಯತೆಯಿಂದ ಸ್ವಾಗತಿಸಿದರು ಕೂಡ ನಮ್ಮ ಪ್ರಧಾನಿ ಯಾವುದಕ್ಕೂ ಸರಿಯಾಗಿ ಪ್ರಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ