AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕಾರುಗಳು ಮತ್ತು ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆ? ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದೇನು?

ಬೃಹತ್ ಪ್ರಮಾಣದ ಜೈವಿಕ ಇಂಧನ ಬಳಕೆ ಇಂಜಿನ್ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಎಂದು ವಾಹನ ತಯಾರಕರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಜೈವಿಕ ಇಂಧನಗಳನ್ನು ಪ್ರಪಂಚದಾದ್ಯಂತ ಫ್ಲೆಕ್ಸಿ-ಇಂಧನ ಎಂಜಿನ್‌ನಲ್ಲಿ ಬಳಸಲಾಗುತ್ತದೆ. ಆದ್ದರಿಂದ ಯಾವುದೇ ವೇಗವರ್ಧನೆಯ ಸಮಸ್ಯೆಯನ್ನು ಹೊಂದಿರದ ಫ್ಲೆಕ್ಸಿ-ಇಂಧನ ಎಂಜಿನ್‌ನ ಜಪಾನಿನ ತಯಾರಕರು ಅದನ್ನು ಬ್ರೆಜಿಲ್‌ನಲ್ಲಿ ಮಾರಾಟ ಮಾಡುವುದಾದರೆ ಅದನ್ನು ಭಾರತದಲ್ಲಿಯೂ ಮಾರಾಟ ಮಾಡಬಹುದು ಎಂದು ಪುರಿ ಹೇಳಿದ್ದಾರೆ.

ಭಾರತದ ಕಾರುಗಳು ಮತ್ತು ವಿಮಾನಗಳಲ್ಲಿ ಜೈವಿಕ ಇಂಧನ ಬಳಕೆ? ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದೇನು?
ಹರ್ದೀಪ್ ಸಿಂಗ್ ಪುರಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 11, 2023 | 8:26 PM

ದೆಹಲಿ ಸೆಪ್ಟೆಂಬರ್11: ಜೈವಿಕ ಇಂಧನ (Bio-fuel) ಮಿಶ್ರಣಗಳು ಪ್ರಪಂಚದಾದ್ಯಂತ ಕಂಡುಬರುತ್ತಿದ್ದು, ಬ್ರೆಜಿಲ್‌ನಲ್ಲಿ ಓಡುತ್ತಿರುವ ಜಪಾನ್ ಅಥವಾ ಜರ್ಮನ್ ಕಾರುಗಳು ಭಾರತದಲ್ಲಿ ಓಡುವುದಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ (Hardeep Puri) ಇಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಾರಾಂತ್ಯದ ಜಿ20 ಶೃಂಗಸಭೆಯ (G20 Summit) ಹಿನ್ನೆಲೆಯಲ್ಲಿ ಭಾರತವು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸಹಿ ಹಾಕಿದೆ.

“20 ಪರ್ಸೆಂಟ್ ಫಿಗರ್ (ವಾಹನ ತಯಾರಕರು ಹೇಳಿದಂತೆ) ಒಂದು ಮನಸ್ಥಿತಿ ಸಮಸ್ಯೆಯಾಗಿದೆ. ನೀವು ಜೈವಿಕ ಇಂಧನ ಶೇಕಡಾವಾರು ಪ್ರಮಾಣವನ್ನು 20 ಕ್ಕಿಂತ ಕಡಿಮೆ ಇರಿಸಿದರೆ, ಕಾರಿನ ಭಾಗಗಳನ್ನು ಬದಲಾಯಿಸಬೇಕಾಗಿಲ್ಲ ಎಂದು ಆಟೋ ತಯಾರಕರು ಹೇಳಿದ್ದಾರೆ. ಆದರೆ ಇದು  ಸೆಲ್ಫ್ ಸರ್ವೀಸ್ ಸಲಹೆಯಾಗಿದೆ ಎಂದು ಪುರಿ ಹೇಳಿದ್ದಾರೆ.

ಬೃಹತ್ ಪ್ರಮಾಣದ ಜೈವಿಕ ಇಂಧನ ಬಳಕೆ ಇಂಜಿನ್ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಎಂದು ವಾಹನ ತಯಾರಕರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಜೈವಿಕ ಇಂಧನಗಳನ್ನು ಪ್ರಪಂಚದಾದ್ಯಂತ ಫ್ಲೆಕ್ಸಿ-ಇಂಧನ ಎಂಜಿನ್‌ನಲ್ಲಿ ಬಳಸಲಾಗುತ್ತದೆ. ಆದ್ದರಿಂದ ಯಾವುದೇ ವೇಗವರ್ಧನೆಯ ಸಮಸ್ಯೆಯನ್ನು ಹೊಂದಿರದ ಫ್ಲೆಕ್ಸಿ-ಇಂಧನ ಎಂಜಿನ್‌ನ ಜಪಾನಿನ ತಯಾರಕರು ಅದನ್ನು ಬ್ರೆಜಿಲ್‌ನಲ್ಲಿ ಮಾರಾಟ ಮಾಡುವುದಾದರೆ ಅದನ್ನು ಭಾರತದಲ್ಲಿಯೂ ಮಾರಾಟ ಮಾಡಬಹುದು ಎಂದು ಪುರಿ ಹೇಳಿದ್ದಾರೆ.

ಜೈವಿಕ ಇಂಧನಗಳ ಪರಿವರ್ತನೆಯು ಕೃಷಿಗೆ ಉತ್ತಮವಾಗಿದೆ. 2040 ರ ವೇಳೆಗೆ ನೀವು ಪಳೆಯುಳಿಕೆ ಇಂಧನಗಳು ಮರೆಯಾಗುವುದನ್ನು ಮತ್ತು ಹಸಿರು ಹೈಡ್ರೋಜನ್ ಅದರ ಸ್ಥಾನವನ್ನು ಪಡೆದುಕೊಳ್ಳುವುದನ್ನು ನೀವು ನೋಡುತ್ತೀರಿ. ಆ ನಿಟ್ಟಿನಲ್ಲಿ ಈಗಾಗಲೇ ವಿಮಾನಗಳಿಗೆ ಜೈವಿಕ ಇಂಧನ ಬಳಸುವ ಕೆಲಸ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿG20 ಶೃಂಗಸಭೆ: ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ ಘೋಷಿಸಿದ ಭಾರತ

ಬ್ರೆಜಿಲ್ 100 ಪ್ರತಿಶತ ಎಥೆನಾಲ್‌ನಲ್ಲಿ ವಿಮಾನವನ್ನು ಹಾರಿಸಿದ್ದರೆ, ಭಾರತದಲ್ಲಿ ಪುಣೆ-ದೆಹಲಿ ಏರ್ ಏಷ್ಯಾ ವಿಮಾನವನ್ನು ಶೇಕಡಾ ಒಂದು ಎಥೆನಾಲ್‌ನೊಂದಿಗೆ ಹಾರಾಟ ನಡೆಸಲಾಗಿತ್ತು ಎಂದಿದ್ದಾರೆ ಪುರಿ.

“ನಾವು ಒಂದು ಶೇಕಡಾ ಸುಸ್ಥಿರ ವಾಯುಯಾನ ಇಂಧನವನ್ನು ಕಡ್ಡಾಯಗೊಳಿಸಬೇಕಾದರೆ, ನಮ್ಮ 5,00,000 ರೈತರಿಗೆ ಪ್ರಯೋಜನವಾಗುವಂತಹ 4 ಕೋಟಿ ಲೀಟರ್ಗಳಷ್ಟು ನಮಗೆ ಬೇಕಾಗುತ್ತದೆ ಎಂದು ನಾವು ಲೆಕ್ಕ ಹಾಕಿದ್ದೇವೆ” ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Mon, 11 September 23