ಗರ್ಭಿಣಿಯ ಹೊಟ್ಟೆ ಸೀಳಿತ್ತು, ಭ್ರೂಣಕ್ಕೆ ಚೂರಿಯಿಂದ ಇರಿಯಲಾಗಿತ್ತು, ಇದು ಇಸ್ರೇಲ್​ನ ಈಗಿನ ಭಯಾನಕ ಸ್ಥಿತಿ

ಹಮಾಸ್ ಉಗ್ರರು ನಿಜಕ್ಕೂ ರಾಕ್ಷಸರಂತೆ ವರ್ತಿಸಿದ್ದಾರೆ. ಗರ್ಭಿಣಿಯರು, ಪುಟ್ಟ ಮಕ್ಕಳೆನ್ನದೇ ಕೊಂದಿದ್ದಾರೆ. ಇಸ್ರೇಲ್​ ಹಾಗೂ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಇದುವರೆಗೆ 4 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಎಲ್ಲರೂ ಸೇರಿದ್ದಾರೆ. ಮಕ್ಕಳ ತಲೆ ಕತ್ತರಿಸಿ, ಅವರ ಕತ್ತು ಸೀಳಿ ಕೊಲೆ ಮಾಡಿರುವ ಭಯಾನಕ ಫೋಟೊಗಳು ವೈರಲ್​ ಆಗಿವೆ. ಇಸ್ರೇಲ್​ನ ಮೃತಪಟ್ಟಿರುವ ಶವಗಳನ್ನು ಒಂದೆಡೆ ಸಂಗ್ರಹಿಸಲು ತೆರಳಿದ್ದ ಯೋಸ್ಸಿ ಲ್ಯಾಂಡೌ ಎಂಬುವವರು ಕೆಲವು ಭಯಾನಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಗರ್ಭಿಣಿಯ ಹೊಟ್ಟೆ ಸೀಳಿತ್ತು, ಭ್ರೂಣಕ್ಕೆ ಚೂರಿಯಿಂದ ಇರಿಯಲಾಗಿತ್ತು, ಇದು ಇಸ್ರೇಲ್​ನ ಈಗಿನ ಭಯಾನಕ ಸ್ಥಿತಿ
ಇಸ್ರೇಲ್Image Credit source: NDTV
Follow us
ನಯನಾ ರಾಜೀವ್
|

Updated on: Oct 13, 2023 | 10:09 AM

ಹಮಾಸ್(Hamas) ಉಗ್ರರು ನಿಜಕ್ಕೂ ರಾಕ್ಷಸರಂತೆ ವರ್ತಿಸಿದ್ದಾರೆ. ಗರ್ಭಿಣಿಯರು, ಪುಟ್ಟ ಮಕ್ಕಳೆನ್ನದೇ ಕೊಂದಿದ್ದಾರೆ. ಇಸ್ರೇಲ್​ ಹಾಗೂ ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದೆ. ಇದುವರೆಗೆ 4 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಎಲ್ಲರೂ ಸೇರಿದ್ದಾರೆ. ಮಕ್ಕಳ ತಲೆ ಕತ್ತರಿಸಿ, ಅವರ ಕತ್ತು ಸೀಳಿ ಕೊಲೆ ಮಾಡಿರುವ ಭಯಾನಕ ಫೋಟೊಗಳು ವೈರಲ್​ ಆಗಿವೆ. ಇಸ್ರೇಲ್​ನ ಮೃತಪಟ್ಟಿರುವ ಶವಗಳನ್ನು ಒಂದೆಡೆ ಸಂಗ್ರಹಿಸಲು ತೆರಳಿದ್ದ ಯೋಸ್ಸಿ ಲ್ಯಾಂಡೌ ಎಂಬುವವರು ಕೆಲವು ಭಯಾನಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

15 ನಿಮಿಷಗಳ ದೂರದ ಪ್ರಯಾಣ ಬರೋಬ್ಬರಿ 11 ಗಂಟೆಗಳನ್ನು ತೆಗೆದುಕೊಂಡಿತು, ಈ ಸಂಘರ್ಷದ ತೀವ್ರತೆ ಎಷ್ಟಿದೆ ಎಂಬುದನ್ನು ಅವರ ಮಾತಿನಿಂದಲೇ ಅರಿಯಬಹುದಾಗಿದೆ. ನಾವು ಹೋಗಿ ಎಲ್ಲಾ ಶವಗಳನ್ನು ಚೀಲದಲ್ಲಿ ತುಂಬಿಸಿದ್ದೇವೆ ಎಂದಿದ್ದಾರೆ.

ಎಲ್ಲೆಲ್ಲೂ ಸುಟ್ಟ ಕಾರುಗಳು, ಸುಟ್ಟ ಸ್ಥಿತಿಯಲ್ಲಿ ಶವಗಳು, ಕಟ್ಟಡದ ಅವಶೇಷಗಳು ಇವೇ ಗೋಚರಿಸುತ್ತವೆ, ಟ್ರಕ್​ಗಳಲ್ಲಿ ಶವಗಳನ್ನು ಹಾಕಿ ಲೋಡ್ ಮಾಡಿ ಬಳಿಕ ಗಾಜಾದಿಂದ ಐದು ಕಿ.ಮೀ ದೂರದಲ್ಲಿರುವ 1200 ನಿವಾಸಿಗಳಿರುವ ಕಿಬ್ಬುಟ್ಜ್​ ಬೀರಿಯನ್ನು ತಲುಪಿದೆವು.

ಮತ್ತಷ್ಟು ಓದಿ: ಹಮಾಸ್ ಕೇವಲ ಉಗ್ರರಲ್ಲ, ರಾಕ್ಷಸರು: ಶತ್ರುಗಳು ಯಾರೆಂದು ಅರಿಯದ ಮುದ್ದು ಮಕ್ಕಳನ್ನು ಕೊಂದು ಸುಟ್ಟು ಹಾಕಿದ ಹಂತಕರು

ಮೊದಲ ಮನೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ದೃಶ್ಯವನ್ನು ನೋಡಿ ನಾನು ಕುಸಿದುಬಿದ್ದೆ, ಗರ್ಭಿಣಿಯ ಹೊಟ್ಟೆಯನ್ನು ಸೀಳಲಾಗಿತ್ತು, ಮಗು ಕಾಣಿಸುತ್ತಿತ್ತು, ಮಗುವಿಗೆ ಚೂರಿಯಿಂದ ಇರಿಯಲಾಗಿತ್ತು, ಹೊಕ್ಕುಳ ಬಳ್ಳಿಯೊಂದಿಗೆ ಇನ್ನೂ ಸಂಪರ್ಕವಿತ್ತು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ 20 ಮಕ್ಕಳು ಸತ್ತಿರುವುದು ಕಂಡುಬಂದಿತ್ತು, ಎಲ್ಲರ ಕೈಗಳನ್ನು ಹಿಂದೆ ಕಟ್ಟಲಾಗಿತ್ತು. ಕೆಲವರಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು.

ಕಿಬ್ಬುಟ್ಜ್​ನಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ, ಹತ್ತಿರದಲ್ಲೇ ನಡೆದ ಸೂಪರ್ನೋವಾ ಸಂಗೀತ ಉತ್ಸವದಲ್ಲಿ ಸುಮಾರು 270 ಮಂದಿ ಸಾವನ್ನಪ್ಪಿದ್ದರು. ಹಮಾಸ್​ ದಾಳಿಗೆ ಪ್ರತಿಯಾಗಿ ಗಾಜಾದ ಮೇಲೆ ಇಸ್ರೇಲ್ 6 ಸಾವಿರ ಬಾಂಬ್​ಗಳನ್ನು ಹಾಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?