ಹಮಾಸ್​​ನ್ನು ಇಸ್ಲಾಮಿಕ್ ಸ್ಟೇಟ್​​ಗೆ ಹೋಲಿಸಿದ ನೆತನ್ಯಾಹು, ಶೀಘ್ರದಲ್ಲೇ ಅದನ್ನು ನಿರ್ನಾಮ ಮಾಡುತ್ತೇವೆ ಎಂದು ಎಚ್ಚರಿಕೆ

ಹಮಾಸ್ ತನ್ನನ್ನು ನಾಗರಿಕತೆಯ ಶತ್ರು ಎಂದು ತೋರಿಸಿದೆ. ಆದರೆ ನಾಗರಿಕತೆಯ ಶಕ್ತಿಗಳು ಸಂಪೂರ್ಣ ದುಷ್ಟತನವನ್ನು ಗೆಲ್ಲುತ್ತವೆ ಎಂದು ಅವರು ಹೇಳಿದರು. "ಆಂಟೋನಿ, ನನ್ನ ಸ್ನೇಹಿತ, ನಾನು ನಿಮಗೆ ಹೇಳುತ್ತೇನೆ, ನಾನು ನಮ್ಮೆಲ್ಲರಿಗೂ ಹೇಳುತ್ತೇನೆ. ಮುಂದೆ ಅನೇಕ ಕಷ್ಟದ ದಿನಗಳು ಬರುತ್ತವೆ. ಆದರೆ ನಾಗರಿಕತೆಯ ಶಕ್ತಿಗಳು ಗೆಲ್ಲುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ

ಹಮಾಸ್​​ನ್ನು ಇಸ್ಲಾಮಿಕ್ ಸ್ಟೇಟ್​​ಗೆ ಹೋಲಿಸಿದ ನೆತನ್ಯಾಹು, ಶೀಘ್ರದಲ್ಲೇ ಅದನ್ನು ನಿರ್ನಾಮ ಮಾಡುತ್ತೇವೆ ಎಂದು ಎಚ್ಚರಿಕೆ
ಬೆಂಜಮಿನ್ ನೆತನ್ಯಾಹು
Follow us
ರಶ್ಮಿ ಕಲ್ಲಕಟ್ಟ
|

Updated on:Oct 12, 2023 | 8:32 PM

ಟೆಲ್ ಅವಿವ್‌ ಅಕ್ಟೋಬರ್ 12: ಭಯೋತ್ಪಾದಕ ಗುಂಪು ಹಮಾಸ್ (Hamas) ವಿರುದ್ಧದ ಯುದ್ಧದಲ್ಲಿ ದೇಶಕ್ಕೆ ಯುನೈಟೆಡ್ ಸ್ಟೇಟ್ಸ್ ನೀಡಿದ ಬೆಂಬಲಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (Antony Blinken) ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಸಮಯದಲ್ಲಿ ಅವರ ಭೇಟಿಯು ಅಮೆರಿಕದ ನಿಸ್ಸಂದಿಗ್ಧವಾದ ಬೆಂಬಲದ ಸ್ಪಷ್ಟ ಉದಾಹರಣೆಯಾಗಿದೆ ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.

ಹಮಾಸ್‌ನ ಅನಾಗರಿಕರ ವಿರುದ್ಧದ ನಮ್ಮ ಯುದ್ಧದಲ್ಲಿ ಇಸ್ರೇಲ್‌ಗೆ ನೀವು ನೀಡಿದ ಬೆಂಬಲಕ್ಕಾಗಿ ಅಮೆರಿಕದ ಜನರಿಗೆ ಧನ್ಯವಾದಗಳು. ಮಿಸ್ಟರ್ ಸೆಕ್ರೆಟರಿ, ನಿಮ್ಮ ಭೇಟಿಯು ಇಸ್ರೇಲ್‌ಗೆ ಅಮೆರಿಕದ ನಿಸ್ಸಂದಿಗ್ಧವಾದ ಬೆಂಬಲಕ್ಕೆ ಮತ್ತೊಂದು ಸ್ಪಷ್ಟವಾದ ಉದಾಹರಣೆಯಾಗಿದೆ ಎಂದು ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಕಿರಿಯಾ ಪ್ರಧಾನ ಕಚೇರಿಯಲ್ಲಿ ಬ್ಲಿಂಕನ್ ಅವರೊಂದಿಗಿನ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ ನೆತನ್ಯಾಹು ಹೇಳಿದ್ದಾರೆ.

ಹಮಾಸ್ ತನ್ನನ್ನು ನಾಗರಿಕತೆಯ ಶತ್ರು ಎಂದು ತೋರಿಸಿದೆ. ಆದರೆ ನಾಗರಿಕತೆಯ ಶಕ್ತಿಗಳು ಸಂಪೂರ್ಣ ದುಷ್ಟತನವನ್ನು ಗೆಲ್ಲುತ್ತವೆ ಎಂದು ಅವರು ಹೇಳಿದರು. “ಆಂಟೋನಿ, ನನ್ನ ಸ್ನೇಹಿತ, ನಾನು ನಿಮಗೆ ಹೇಳುತ್ತೇನೆ, ನಾನು ನಮ್ಮೆಲ್ಲರಿಗೂ ಹೇಳುತ್ತೇನೆ. ಮುಂದೆ ಅನೇಕ ಕಷ್ಟದ ದಿನಗಳು ಬರುತ್ತವೆ. ಆದರೆ ನಾಗರಿಕತೆಯ ಶಕ್ತಿಗಳು ಗೆಲ್ಲುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ.ಅದು ನಿಜವಾಗಲು ಕಾರಣವೆಂದರೆ ವಿಜಯದ ಮೊದಲ ಪೂರ್ವಾಪೇಕ್ಷಿತ  ನೈತಿಕ ಸ್ಪಷ್ಟತೆ ಏನೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ದುಷ್ಟರ ವಿರುದ್ಧ ನಾವು ಗಟ್ಟಿಯಾಗಿ, ಹೆಮ್ಮೆಯಿಂದ ಮತ್ತು ಒಗ್ಗಟ್ಟಿನಿಂದ ನಿಲ್ಲಬೇಕಾದ ಸಮಯ ಇದು ಎಂದು ಅವರು ಹೇಳಿದ್ದಾರೆ.

ನೆತನ್ಯಾಹು ಹಮಾಸ್ ಅನ್ನು ಐಸಿಸ್ ಜೊತೆ ಹೋಲಿಸಿದ್ದು, ಭಯೋತ್ಪಾದಕ ಗುಂಪನ್ನು ಇಸ್ಲಾಮಿಕ್ ಸ್ಟೇಟ್‌ನಂತೆ ಹತ್ತಿಕ್ಕಲಾಗುವುದು ಎಂದು ಪ್ರತಿಜ್ಞೆ ಮಾಡಿದರು. ಹಮಾಸ್ ಐಸಿಸ್ ಮತ್ತು ಐಸಿಸ್ ಅನ್ನು ನಿರ್ನಾಮ ಮಾಡಿದಂತೆಯೇ ಹಮಾಸ್ ಅನ್ನು ಕೂಡ ನಿರ್ನಾಮ ಮಾಡಲಾಗುವುದು,. ಹಮಾಸ್ ಅನ್ನು ಐಸಿಸ್ ನಡೆಸಿಕೊಂಡ ರೀತಿಯಲ್ಲಿಯೇ ನಡೆಸಬೇಕು. ಅವರನ್ನು ರಾಷ್ಟ್ರಗಳ ಸಮುದಾಯದಿಂದ ಹೊರದಬ್ಬಬೇಕು. ಯಾವುದೇ ನಾಯಕ ಅವರನ್ನು ಭೇಟಿಯಾಗಬಾರದು, ಯಾವುದೇ ದೇಶವು ಅವರಿಗೆ ಬೆಂಬಲ ನೀಡಬಾರದು ಎಂದು ಇಸ್ರೇಲ್ ಪಿಎಂ ಹೇಳಿದ್ದಾರೆ.

ಇದನ್ನೂ ಓದಿ: Israel-Palestine conflict: ಭಾರತ ನಮ್ಮ ಜನರ ಎರಡನೇ ಮನೆ.. ಹಮಾಸ್ ಉಗ್ರರನ್ನು ಹಿಮ್ಮಟ್ಟಿಸುವವರೆಗೆ ಇಸ್ರೇಲ್ ಅನ್ನು ಯಾರಿಂದಲೂ ತಡೆಯುವುದು ಸಾಧ್ಯವಿಲ್ಲ!’ ನ್ಯೂಸ್9 ಜೊತೆ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಸಂದರ್ಶನ..

ಅಮೆರಿಕ “ಯಾವಾಗಲೂ” ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಎಂದು ಬ್ಲಿಂಕನ್ ಹೇಳಿದ್ದು, ಪ್ಯಾಲೆಸ್ತೀನಿಯಾದವರು ಹಮಾಸ್ ಪ್ರತಿನಿಧಿಸದ “ಕಾನೂನುಬದ್ಧ ಆಕಾಂಕ್ಷೆಗಳನ್ನು” ಹೊಂದಿದ್ದಾರೆ ಎಂದು ಹೇಳಿದರು. “ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಸಾಕಷ್ಟು ಬಲಶಾಲಿಯಾಗಿರಬಹುದು. ಆದರೆ ಅಮೆರಿಕಾ ಇರುವವರೆಗೂ ನೀವು ಎಂದಿಗೂ ಚಿಂತಿಸಬೇಕಾಗಿಲ್ಲ. ನಾವು ಯಾವಾಗಲೂ ನಿಮ್ಮ  ಜತೆಯಲ್ಲಿರುತ್ತೇವೆ ಎಂದು ಜಂಟಿ ಹೇಳಿಕೆಯಲ್ಲಿ ಬ್ಲಿಂಕನ್ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ 1,200 ಜನರನ್ನು ಕೊಂದ ವಾರಾಂತ್ಯದ ದಾಳಿಯ ಮೇಲೆ ಇಸ್ರೇಲ್‌ನ ಸೇನೆಯು ಹಮಾಸ್‌ನ ಮೇಲೆ ದಾಳಿ ನಡೆಸುತ್ತಿದ್ದಂತೆ ಬೆಂಬಲದ  ಭೇಟಿಗಾಗಿ ಅಧಿಕಾರಿಗಳ ತಂಡದೊಂದಿಗೆ ಟೆಲ್ ಅವಿವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬ್ಲಿಂಕನ್ ಇಂದು ಬೆಳಗ್ಗೆ ಬಂದು ತಲುಪಿದ್ದಾರೆ. ದಾಳಿಯಲ್ಲಿ ಕನಿಷ್ಠ 25 ಯುಎಸ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಬ್ಲಿಂಕನ್ ಮಾಹಿತಿ ನೀಡಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Thu, 12 October 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?