AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದಿದ್ದೇಕೆ ಡಿಕೆ ಶಿವಕುಮಾರ್?

ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗ್ತಾರೆಂಬ ಹೇಳಿಕೆ ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, 6 ತಿಂಗಳು, ವರ್ಷದೊಳಗೆ ತಿಹಾರ್ ಜೈಲಿಗೆ ಕಳಿಸ್ತೇವೆ ಅಂತಾ ಹೇಳಿದ್ದಾರೆ. ಅವರದ್ದು ಪ್ರಿಪ್ಲ್ಯಾನ್​ ಅಥವಾ ಇನ್ನೇನೋ ಇರಬಹುದು ಎಂದಿದ್ದಾರೆ.

ಕುಮಾರಸ್ವಾಮಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದಿದ್ದೇಕೆ ಡಿಕೆ ಶಿವಕುಮಾರ್?
ಡಿಕೆ ಶಿವಕುಮಾರ್
TV9 Web
| Updated By: Ganapathi Sharma|

Updated on: Oct 19, 2023 | 2:43 PM

Share

ಬೆಂಗಳೂರು, ಅಕ್ಟೋಬರ್ 19: ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಗಂಟೆಗೊಂದು, ಗಳಿಗೆಗೊಂದು ಮಾತನಾಡಬಹುದು, ಅವರಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಅವರು ಹಾಗೆಲ್ಲ ಮಾತನಾಡುತ್ತಿರಬಹುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಕೊಚ್ಚಿಗೆ ತೆರಳುವ ಮುನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕುಮಾರಸ್ವಾಮಿಯನ್ನು ಹಾಸನಕ್ಕೆ‌ ಕಳಿಸ್ತೀನಿ ಅಂತಾ ಎಲ್ಲೂ ಹೇಳಿಲ್ಲ. ನಾನು ಆ ಮಾತು ಮಾತನಾಡಲು ಮೂರ್ಖನಲ್ಲ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗ್ತಾರೆಂಬ ಹೇಳಿಕೆ ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, 6 ತಿಂಗಳು, ವರ್ಷದೊಳಗೆ ತಿಹಾರ್ ಜೈಲಿಗೆ ಕಳಿಸ್ತೇವೆ ಅಂತಾ ಹೇಳಿದ್ದಾರೆ. ಅವರದ್ದು ಪ್ರಿಪ್ಲ್ಯಾನ್​ ಅಥವಾ ಇನ್ನೇನೋ ಇರಬಹುದು. ನಾನು ಓಡಿ ಹೋಗಲ್ಲ, ಕಾನೂನು ಚೌಕಟ್ಟಿನಲ್ಲಿ ಉತ್ತರ ಕೊಡುತ್ತೇನೆ. ಮೂರು ತಿ‌ಂಗಳಲ್ಲಿ ತನಿಖೆ ಮುಗಿಸ್ತೇವೆ ಅಂತಾ ಹೇಳಿದ್ದಾರೆ ಮಾಡಲಿ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಅವರ ತಂದೆ 25 – 30 ವರ್ಷಗಳ ಹಿಂದೆ ರಾಮನಗರಕ್ಕೆ ಬಂದು ಎಂಎಲ್ಎ, ಪಿಎಂ‌ ಸಹ ಆದ್ರು. ನನ್ನ ವಿರುದ್ಧ ಎಂಪಿಗೂ ಅವರ ತಂದೆ ನಿಂತಿದ್ರು. ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿ ಸಹ ನನ್ನ ವಿರುದ್ಧ ನಿಂತಿದ್ರು. ನಾವೇ ಇಬ್ಬರು ನಿಂತು ಸರ್ಕಾರನೂ ಮಾಡಿದ್ವಿ. ಅವರನ್ನ ಹಾಸನಕ್ಕೆ ಕಳಿಸ್ತೀನಿ ಅಂತ ಹೇಳುವಷ್ಟು ಮೂರ್ಖನು ನಾನಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಿಬಿಐ ತನಿಖೆಗೆ ಹೈಕೋರ್ಟ್​ ಅಸ್ತು: ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

ತಮ್ಮ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್​ ಅನುಮತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಎಫ್​​ಐಆರ್ ಹಾಕಿರುವುದು ಸರಿಯಲ್ಲ ಅಂತಾ ಕೋರ್ಟ್​ ಮೊರೆ ಹೋಗಿದ್ದೆ. ರಾಜಕೀಯ ಉದ್ದೇಶದಿಂದ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದರು. ಶೇ 90ರಷ್ಟು ತನಿಖೆ ಮಾಡಿದ್ದೇವೆ ಅಂತಾ ಸಿಬಿಐನವರು ಹೇಳಿದ್ದಾರೆ. ಇನ್ನೂ ಒಂದು ದಿನ ಕೂಡ ನನ್ನನ್ನು ಕರೆಸಿ ವಿಚಾರಣೆ ಮಾಡಿಲ್ಲ. ನನ್ನ ಕುಟುಂಬ, ನಾನು, ನನ್ನ ಹೆಂಡತಿ ನನ್ನನ್ನೇ ವಿಚಾರಣೆಗೆ ಕೇಳಿಲ್ಲ. ಅದು ಹೇಗೆ ಶೇ 90ರಷ್ಟು ತನಿಖೆ ಮಾಡಿದ್ದಾರೆ ಗೊತ್ತಿಲ್ಲ. ನ್ಯಾಯಾಲಯದ ಮೇಲೆ ನಂಬಿಕೆ ಇದೆ, ನಾನು ಹೋರಾಟ ಮಾಡ್ತೇನೆ. ಅವರದ್ದು ಏನೇ ಪ್ರೇರಿತ ಇದ್ದರೂ ಕೂಡ ನನಗೆ ಭರವಸೆ ಇದೆ. ನಾನು ಚೌಕಟ್ಟಿನಲ್ಲಿದ್ದೇನೆ, ಉತ್ತರ ಕೊಡ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಪ್ಪು ಮಾಡಿರದಿದ್ದರೆ ಡಿಕೆ ಶಿವಕುಮಾರ್​ರನ್ನು ಟಾರ್ಗೆಟ್ ಯಾಕೆ ಮಾಡುತ್ತಾರೆ? ಹೆಚ್ ಡಿ ಕುಮಾರಸ್ವಾಮಿ

ಈಶ್ವರಪ್ಪಗೆ ತಿರುಗೇಟು

ಡಿಕೆಶಿ ಮತ್ತೆ ಜೈಲಿಗೆ ಹೋಗ್ತಾರೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ, ಬೇಗ ಆ ಕೆಲಸ ಮಾಡಲಿ ತಡ ಮಾಡುವುದು ಬೇಡ. ಈಶ್ವರಪ್ಪ ಒಬ್ಬ ಜಡ್ಜ್ ಆಗಲಿ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರೆಲ್ಲರೂ ಐಟಿ ತಂಡಕ್ಕೆ ಸ್ಪೋಕ್ಸ್​​ ಪರ್ಸನ್​ಗಳಾಗಲಿ. ಐಟಿ ಅಧಿಕಾರಿಗಳು ನಿನ್ನೆ ಒಂದು ಬುಲೆಟಿನ್ ಕಳಿಸಿಕೊಟ್ಟಿದ್ದಾರೆ. ಯಾರದ್ದು ಯಾರು ಏ‌ನು ಅಂತೆಲ್ಲಾ ಕೇಳಿದ್ದಾರೆ. ನಾನು ಒಬ್ಬ ಗುತ್ತಿಗೆದಾರರನಿಗೂ ಕೆಲಸ ಕೊಟ್ಟಿಲ್ಲ. ಏನಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಟ್ರ್ಯಾಕ್ಟ್​ ಕೊಟ್ಟಿರುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ