Karnataka SSLC 2023 Results; ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫೇಲಾದವರು ಎದೆಗುಂದುವ ಅವಶ್ಯಕತೆಯಿಲ್ಲ: ರಾಮಚಂದ್ರ, ಅಧ್ಯಕ್ಷ ಕೆಎಸ್​ಈಈಬಿ

| Updated By: Digi Tech Desk

Updated on: May 08, 2023 | 2:20 PM

ಮೇ 15 ರೊಳಗೆ ಪೂರಕ ಪರೀಕ್ಷೆ ಫೀಸು ಪಾವತಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕು, ಪರೀಕ್ಷಾ ವೇಳಾಪಟ್ಟಿಯನ್ನು ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ರಾಮಚಂದ್ರ ಹೇಳಿದರು.

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಕಟಿಸಿದ ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEEB) ಅಧ್ಯಕ್ಷ ರಾಮಚಂದ್ರ (Ramachandra), ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ (Gopalakrishna) ಸುದ್ದಿಗೋಷ್ಟಿ ನಡೆಸಿದರು. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಎದೆಗುಂದಬಾರದು. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದವರೆಲ್ಲರೂ ಯಾವುದೋ ಒಂದು ಹಂತದಲ್ಲಿ ವೈಫಲ್ಯ ಅನುಭವಿಸಿರುತ್ತಾರೆ. ಫೇಲಾದವರಿಗೆ ನೆರವಾಗಲು ತಮ್ಮ ಶಿಕ್ಷಕವೃಂದ ಸದಾ ಸಿದ್ಧವಿದೆ. ಮೇ 15 ರೊಳಗೆ ಪೂರಕ ಪರೀಕ್ಷೆ ಫೀಸು ಪಾವತಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕು, ಪರೀಕ್ಷಾ ವೇಳಾಪಟ್ಟಿಯನ್ನು ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ರಾಮಚಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 08, 2023 12:22 PM