ಸಿರಗುಪ್ಪ ಬಳಿ ಕೆಎಸ್ ಆರ್ ಟಿಸಿ ಬಸ್ ಫೇಲಾಗಿ ಬಸ್ ಪಲ್ಟಿ, 8 ಜನರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ
ಸಿಂಧನೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ಸು ಸಿರಗುಪ್ಪ ತಾಲ್ಲೂಕಿನ ಬೈರಾಪುರ ಕ್ರಾಸ್ ಬಳಿ ದುರ್ಘಟನೆಕ್ಕೀಡಾಗಿದೆ.
ಬಳ್ಳಾರಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಬಸ್ಸೊಂದು ಬ್ರೇಕ್ ಫೇಲಾಗಿ ಪಲ್ಟಿ ಹೊಡೆದ ಕಾರಣ ಎಂಟು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ಬಳ್ಳಾರಿ (Ballari) ಜಿಲ್ಲೆಯಲ್ಲಿ ಸಂಭವಿಸಿದೆ. ಗಾಯಗೊಂಡವರ ಪೈಕಿ ಒಬ್ಬರ ಸ್ಥಿತಿ ಚಿಂತಾನಕವಾಗಿದೆ (critical) ಎಂದು ಮೂಲಗಳು ತಿಳಿಸಿವೆ. ಸಿಂಧನೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ಸು ಸಿರಗುಪ್ಪ ತಾಲ್ಲೂಕಿನ ಬೈರಾಪುರ ಕ್ರಾಸ್ ಬಳಿ ದುರ್ಘಟನೆಕ್ಕೀಡಾಗಿದೆ.