ಮೈಸೂರಲ್ಲಿ ಫ್ಯಾನ್ಸ್ ಕ್ರೇಜ್ ಕಂಡು ಕಾರು ನಿಲ್ಲಿಸಿದ ಸುದೀಪ್​; ಮುಂದೇನಾಯ್ತು?

ಮೈಸೂರಲ್ಲಿ ಫ್ಯಾನ್ಸ್ ಕ್ರೇಜ್ ಕಂಡು ಕಾರು ನಿಲ್ಲಿಸಿದ ಸುದೀಪ್​; ಮುಂದೇನಾಯ್ತು?

TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 04, 2022 | 8:55 PM

‘ವಿಕ್ರಾಂತ್ ರೋಣ’ ಸಿ‌ನಿಮಾ ದೊಡ್ಡ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಸುದೀಪ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi Hill) ಕಿಚ್ಚ ಸುದೀಪ್ ಅವರು ಇಂದು (ಆಗಸ್ಟ್ 4) ಭೇಟಿ ನೀಡಿದ್ದಾರೆ. ಈ ವೇಳೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ‘ವಿಕ್ರಾಂತ್ ರೋಣ’ ಸಿ‌ನಿಮಾ (Vikrant Rona Movie) ದೊಡ್ಡ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಸುದೀಪ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಅಭಿಮಾನಿಗಳ ಕ್ರೇಜ್ ಕಂಡು ಸುದೀಪ್ ಕಾರು ನಿಲ್ಲಿಸಿ ಅಭಿಮಾನಿಗಳತ್ತ ಕೈಬೀಸಿದರು.