ಶಾಲಾ ಪ್ರವಾಸಕ್ಕೆ ತೆರಳಿದ್ದ ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್, ಚಾಲಕನ ಚಾಣಕ್ಷತನದಿಂದ ತಪ್ಪಿದ ಭಾರಿ ಅನಾಹುತ
ಮಹಾಬಲೇಶ್ವರ ಬಳಿಯ ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿದೆ.
ಬೆಳಗಾವಿ: ಮಹಾರಾಷ್ಟ್ರದ ಮಹಾಬಲೇಶ್ವರ ಬಳಿ ತಪ್ಪಿದ ಭಾರಿ ಅನಾಹುತವೊಂದು ತಪ್ಪಿದೆ. ಮಹಾಬಲೇಶ್ವರ ಬಳಿಯ ಸತಾರಾ ರಸ್ತೆಯ ಘಾಟ್‌ನಲ್ಲಿ ಶಾಲಾ ಪ್ರವಾಸಕ್ಕೆಂದು ಹೋಗಿದ್ದ ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿದೆ. ಅದೃಷ್ಟವಶಾತ್ ಚಾಲಕನ ಚಾಣಕ್ಷತನದಿಂದ ಭಾರಿ ಅನಾಹುತ ತಪ್ಪಿದ್ದಾರೆ. ಬಸ್ನಲ್ಲಿದ್ದ 50 ಶಾಲಾ ಮಕ್ಕಳು ಸೇರಿ ನಾಲ್ವರು ಶಿಕ್ಷಕರು ಪಾರಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್.ಡಿ.ಹೈಸ್ಕೂಲ್‌ನ ಮಕ್ಕಳು, ಸಿಬ್ಬಂದಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರವಾಸಕ್ಕೆ ಹೋಗಿದ್ದ ವೇಳೆ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿ ಬಸ್ ಪ್ರಪಾತಕ್ಕೆ ಉರುಳುತ್ತಿತ್ತು. ಈ ವೇಳೆ ಚಾಲಕ ಚಾಣಕ್ಷತನದಿಂದ ಕಂದಕಕ್ಕೆ ಉರುಳ್ತಿದ್ದ ಬಸ್‌ನ್ನು ಗುಡ್ಡಕ್ಕೆ ತಾಗಿಸಿ ನಿಲ್ಲಿಸಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
Loading...
Unable to load recommendations.
Follow Us
