ಮೂರು ಲಕ್ಷ ಬೆಲೆ ಬಾಳುವ ಒಡವೆಗಳಿದ್ದ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ KSRTC ಬಸ್ ಚಾಲಕ, ನಿರ್ವಾಹಕ
ಮಹಿಳೆಯೊಬ್ಬರು ಕರ್ನೂಲ್ ಜಿಲ್ಲೆಯ ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಮಾಡ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ನಲ್ಲೇ ಮೂರು ಲಕ್ಷ ಬೆಲೆ ಬಾಳುವ ಒಡವೆಗಳ ಬ್ಯಾಗನ್ನು ಮರೆತು ಹೋಗಿದ್ದರು. ಸದ್ಯ ಚಾಲಕ ಹಾಘೂ ನಿರ್ವಾಹಕ ಬ್ಯಾಗನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ತುಮಕೂರು, ಜೂನ್.03: ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಹಿಂದಿರುಗಿಸಿ ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. ಕರ್ನೂಲ್ ಜಿಲ್ಲೆಯ ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಮಾಡ್ತಿದ್ದ ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್ನಲ್ಲಿ ಮೂರು ಲಕ್ಷ ಬೆಲೆಬಾಳುವ ಒಡವೆಗಳಿದ್ದ ಬ್ಯಾಗನ್ನು ಮರೆತು ಹೋಗಿದ್ದರು. ಇದನ್ನು ಗಮನಿಸಿದ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಅವರು ಒಡವೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆ ಪತ್ತೆ ಮಾಡಿ ಶಿರಾ ಘಟಕದಲ್ಲಿದ್ದ ಒಡವೆ ವಾಪಸ್ ನೀಡಲಾಗಿದೆ. ಚಾಲಕ ಹಾಗೂ ನಿರ್ವಾಹಕರ ಮಾನವೀಯತೆಗೆ ಸಾರ್ವಜನಿಕರ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ