‘ನನ್ನ ಸಿನಿಮಾಗೂ ಇಷ್ಟು ನರ್ವಸ್ ಆಗಿಲ್ಲ’; ರಿಷಬ್ ಎದುರು ಹೇಳಿಕೊಂಡ ಹರಿಪ್ರಿಯಾ

‘ನನ್ನ ಸಿನಿಮಾಗೂ ಇಷ್ಟು ನರ್ವಸ್ ಆಗಿಲ್ಲ’; ರಿಷಬ್ ಎದುರು ಹೇಳಿಕೊಂಡ ಹರಿಪ್ರಿಯಾ

ರಾಜೇಶ್ ದುಗ್ಗುಮನೆ
|

Updated on:Jun 03, 2024 | 11:37 AM

ರಿಷಬ್ ಹಾಗೂ ಹರಿಪ್ರಾಯ ಮಧ್ಯೆ ಒಳ್ಳೆಯ ಪರಿಚಯ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. ಈಗ ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ರಿಷಬ್ ಆಗಮಿಸಿ ಶುಭ ಕೋರಿದ್ದಾರೆ. ಈ ವೇಳೆ ವಸಿಷ್ಠ ಪತ್ನಿ ಹರಿಪ್ರಿಯಾ ಮಾತನಾಡಿದ್ದಾರೆ.

ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ‘ರಿಕ್ಕಿ’ ಸಿನಿಮಾದಲ್ಲಿ (Rikky Movie) ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಮಧ್ಯೆ ಒಳ್ಳೆಯ ಪರಿಚಯ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. ಈಗ ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ರಿಷಬ್ ಆಗಮಿಸಿ ಶುಭ ಕೋರಿದ್ದಾರೆ. ಈ ವೇಳೆ ವಸಿಷ್ಠ ಪತ್ನಿ ಹರಿಪ್ರಿಯಾ ಮಾತನಾಡಿದ್ದಾರೆ. ‘ನನ್ನ ಸಿನಿಮಾಗೂ ನಾನು ಇಷ್ಟು ನರ್ವಸ್ ಆಗಿರಲಿಲ್ಲ. ನನ್ನ ಗಂಡನ ಸಿನಿಮಾಗೆ ನರ್ವಸ್ ಆಗ್ತಿದೆ’ ಎಂದರು ಹರಿಪ್ರಿಯಾ. ಆ ಬಳಿಕ ‘ಥ್ಯಾಂಕ್​ ಯೂ ಗುರು’ ಎಂದು ರಿಷಬ್​ಗೆ ಪ್ರೀತಿಯಿಂದ ಹೇಳಿದರು ಹರಿಪ್ರಿಯಾ. ಆ ಬಳಿಕ ರಿಷಬ್ ಅವರನ್ನು ಹರಿಪ್ರಿಯಾ ಬಾಯ್ತುಂಬ ಹೊಗಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 03, 2024 11:37 AM