Karnataka Transport Strike; ಕೋರ್ಟ್ ಆದೇಶದ ಹೊರತಾಗಿಯೂ ಮುಷ್ಕರ ಮಾಡಿದ್ದು ನ್ಯಾಯಾಂಗ ನಿಂದನೆ: ವಕೀಲೆ

ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2025 | 7:29 PM

ಕೋರ್ಟ್ ಆದೇಶ ಕೈಸೇರುವ ಹೊತ್ತಿಗೆ ಮುಷ್ಕರ ಆರಂಭಿಸಿಯಾಗಿತ್ತು ಅಂತ ಟೆಕ್ನಿಕಲ್ ಅಂಶವನ್ನು ಮುಂದೆ ಮಾಡೋದು ಒಂದು ನೆಪವಷ್ಟೇ, ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರು ಹೆಚ್​ವಿ ಸುಬ್ಬರಾವ್, ಸಮಿತಿಯ ಅಧೀನದಲ್ಲಿ 5 ಸಂಘಟನೆಗಳಿವೆ, ನಾವು ಸುಬ್ಬಾರಾವ್ ಅವರಿಗೆ ನಿನ್ನೆ ಸಾಯಂಕಾಲ 7 ಗಂಟೆಯಷ್ಟೊತ್ತಿಗೆ ನ್ಯಾಯಾಲಯದ ಅದೇಶವನ್ನು ತಲುಪಿಸಿದ್ದೇವೆ, ಅಷ್ಟೊತ್ತಿಗಾಗಲೇ ವಿಷಯ ಹಬ್ಬಿತ್ತು ಎಂದು ದೀಕ್ಷಾ ಹೇಳಿದರು.

ಬೆಂಗಳೂರು, ಆಗಸ್ಟ್ 5: ಕೆಎಸ್ಅರ್​ಟಿಸಿ ನೌಕರರ ಸಂಘ ನಿನ್ನೆ ಮಧ್ಯರಾತ್ರಿಯಿಂದ ಮುಷ್ಕರ ಶುರುಮಾಡಿದರೂ ಅದು ಹೆಚ್ಚಿನ ಸ್ಥಳಗಳಲ್ಲಿ ಪ್ರಭಾವ ಮತ್ತು ಪರಿಣಾಮ ಬೀರದೆ ಹೋಗಿದ್ದಕ್ಕೆ ಈ ಯುವ ವಕೀಲೆ ದೀಕ್ಷಾ ಅಮೃತೇಶ್ ಕಾರಣ. ಸಾರಿಗೆ ನೌಕರರು ಮುಷ್ಕರಕ್ಕಿಳಿಯುವ ವಿಷಯ ಗೊತ್ತಾಗುತ್ತಿದ್ದಂತೆಯೇ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿ ಸಾಯಂಕಾಲದ ಹೊತ್ತಿಗೆ ನ್ಯಾಯಾಲಯದಿಂದ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸುವಂತೆ ಆದೇಶ ಪಡೆದಿದ್ದು ಚಿಕ್ಕ ಸಂಗತಿಯೇನಲ್ಲ. ಕೋರ್ಟ್ ತನ್ನ ಆದೇಶದಲ್ಲಿ ಮುಷ್ಕರವನ್ನು ಒಂದು ದಿನ ಮುಂದೂಡಬೇಕು, ಆರಂಭಿಸಿದ್ದರೆ ಸ್ಥಗಿತಗೊಳಿಸಬೇಕೆಂದು ಸ್ಪಷ್ಟವಾಗಿ ಹೇಳಿತ್ತು. ಸಾರಿಗೆ ವ್ಯವಸ್ಥೆಯು ಎಸ್ಮಾ ವ್ಯಾಪ್ತಿಯಲ್ಲಿ ಬರೋದ್ರಿಂದ ಕೆಎಸ್ಆರ್​ಟಿಸಿ ನೌಕರರು ಮುಷ್ಕರ ಮಾಡಿದ್ದು ತಪ್ಪು ಮತ್ತು ನ್ಯಾಯಾಲಯದ ಆದೇಶದ ಹೊರತಾಗಿಯೂ ಮುಷ್ಕರ ಮಾಡಿದ್ದು ನ್ಯಾಯಾಂಗ ನಿಂದನೆಯಾಗಿದೆ ಅಂತ ಕೋರ್ಟ್ ಯೂನಿಯನ್ ಅನ್ನು ತರಾಟೆಗೆ ತೆಗೆದುಕೊಂಡಿತು ಎಂದು ದೀಕ್ಷಾ ಹೇಳಿದರು.

ಇದನ್ನೂ ಓದಿ:    Karnataka Transport Strike; ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು: ಅನಂತ್ ಸುಬ್ಬಾರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.