ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ, ಪ್ರಯಾಣಿಕರಿಗೆ ಮತ್ತೊಂದು ಹೊರೆ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜ್ ಸಾಗಣೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಮೊದಲ ಐದು ಸ್ಟೇಜ್‌ಗಳಿಗೆ ₹6 ರಿಂದ ₹10ಕ್ಕೆ, 6-10ನೇ ಸ್ಟೇಜ್‌ಗಳಿಗೆ ₹10 ರಿಂದ ₹15ಕ್ಕೆ ಹಾಗೂ 11-15ನೇ ಸ್ಟೇಜ್‌ಗಳಿಗೆ ₹20 ರಿಂದ ₹25ಕ್ಕೆ ಏರಿಕೆಯಾಗಿದೆ. 10 ಕೆಜಿ ಲಗೇಜ್ ಉಚಿತವಾಗಿದ್ದು, ಹೆಚ್ಚಿನ ತೂಕಕ್ಕೆ ಶುಲ್ಕ ಅನ್ವಯ. ಇದು ಬಸ್ ಟಿಕೆಟ್ ದರ ಏರಿಕೆ ಬಳಿಕ ಪ್ರಯಾಣಿಕರ ಮೇಲಿನ ಮತ್ತೊಂದು ಹೊರೆಯಾಗಿದೆ.
ಬೆಂಗಳೂರು, ನವೆಂಬರ್ 10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಪ್ರಯಾಣಿಕರ ಮೇಲೆ ಮತ್ತೊಂದು ಹೊರೆ ಇಳಿಸಿದೆ. ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳದಿಂದ ಕಂಗಾಲಾಗಿದ್ದ ಪ್ರಯಾಣಿಕರಿಗೆ, ಇಂದಿನಿಂದ ಲಗೇಜ್ ಸಾಗಣೆ ಶುಲ್ಕವನ್ನೂ ಏರಿಕೆ ಮಾಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆಯು ಲಗೇಜ್ ದರಗಳನ್ನು ಪರಿಷ್ಕರಿಸಿದ್ದು, ಹೆಚ್ಚಳವಾದ ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ಪರಿಷ್ಕೃತ ದರಗಳ ಪ್ರಕಾರ, ಮೊದಲ ಐದು ಸ್ಟೇಜ್‌ಗಳಿಗೆ ಲಗೇಜ್ ಶುಲ್ಕ 6 ರೂ.ನಿಂದ 10 ರೂ.ಗೆ ಏರಿಕೆಯಾಗಿದೆ. 6 ರಿಂದ 10ನೇ ಸ್ಟೇಜ್‌ಗಳಿಗೆ 10 ರೂ. ಇದ್ದ ಶುಲ್ಕ 15 ರೂ.ಗೆ ಹೆಚ್ಚಳವಾಗಿದ್ದರೆ, 11 ರಿಂದ 15ನೇ ಸ್ಟೇಜ್‌ಗಳಿಗೆ 20 ರೂ. ಇದ್ದ ದರ 25 ರೂ.ಗೆ ಏರಿದೆ. ಪ್ರಯಾಣಿಕರು 10 ಕೆಜಿವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅವಕಾಶವಿದೆ. ಹಾಗೆಯೇ, 20 ಕೆಜಿವರೆಗಿನ ಭಾರವಾದ ವಸ್ತುಗಳಿಗೂ ಉಚಿತ ಸಾಗಣೆ ಲಭ್ಯವಿದೆ. ಆದರೆ, ನಿಗದಿತ ಮಿತಿಗಿಂತ ಹೆಚ್ಚಿನ ತೂಕದ ಲಗೇಜ್‌ಗೆ ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.
ಈ ದರ ಹೆಚ್ಚಳವು ದೈನಂದಿನ ಪ್ರಯಾಣಿಕರು, ವಿಶೇಷವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಚರಿಸುವ ವ್ಯಾಪಾರಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಹಲವು ಬೆಲೆ ಏರಿಕೆಗಳಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ಕ್ರಮ ಮತ್ತಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
