ಎನ್ಕೌಂಟರ್ ಮಾತು ಹಾಗಿರಲಿ, ಮೊದಲು ನಿಮ್ಮ ಕರ್ಮಕಾಂಡಗಳನ್ನು ಮುಚ್ಚಿಕೊಂಡು ಆಡಳಿತ ಬಿಗಿಗೊಳಿಸಿ: ಕುಮಾರಸ್ವಾಮಿ
ಎನ್ ಕೌಂಟರ್ ಅದೇಶ ನೀಡುವಷ್ಟು ಕ್ಷಮತೆ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದರು. ಇಂಥ ಸಲ್ಲದ ಯೋಚನೆಗಳನ್ನು ಕೈಬಿಟ್ಟು ಆಡಳಿತ ಬಿಗಿಗೊಳಿಸುವ ಕಡೆ ಸರ್ಕಾರ ಗಮನ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಬೀದರ್: ರಾಜ್ಯದಲ್ಲಿ ಕೊಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪರಾಧಿ ಮನೋಭಾವದ ಜನರ ಹುಟ್ಟಡಗಿಸಲು ಎನ್ ಕೌಂಟರ್ ಗಳನ್ನು ಮಾಡಬೇಕೆಂದು ಹೇಳಿರುವ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ( Dr. CN Ashwath Narayan) ಹೇಳಿಕೆಗೆ ಶನಿವಾರ ಬೀದರ್ ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಎನ್ ಕೌಂಟರ್ ಅದೇಶ ನೀಡುವಷ್ಟು ಕ್ಷಮತೆ ಈ ಸರ್ಕಾರ ಉಳಿಸಿಕೊಂಡಿಲ್ಲ ಎಂದರು. ಇಂಥ ಸಲ್ಲದ ಯೋಚನೆಗಳನ್ನು ಕೈಬಿಟ್ಟು ಆಡಳಿತ ಬಿಗಿಗೊಳಿಸುವ ಕಡೆ ಸರ್ಕಾರ ಗಮನ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.