ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿಗಾಗಿ ಕುಮಾರಸ್ವಾಮಿ ಕೈಚಾಚಿದ್ದಾರೆ: ಪ್ರೀತಂ ಗೌಡ, ಮಾಜಿ ಶಾಸಕ

|

Updated on: Sep 14, 2023 | 11:36 AM

ಹಾಗೊಮ್ಮೆ ಜೆಡಿಎಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿ ಆಗಬೇಕು, ಪ್ರಸ್ತುತ ಸ್ಥಿತಿಯಲ್ಲಿ ದೇಶಕ್ಕೆ ಅವರೇ ಸೂಕ್ತ ನಾಯಕ ಅಂತ ಮೈತ್ರಿಗಾಗಿ ಬಂದರೆ, ತಮ್ಮ ಪಕ್ಷದ ಹಿರಿಯ ನಾಯಕರು ಪರಾಮರ್ಶೆ ನಡೆಸಬಹುದು ಎಂದು ಪ್ರೀತಂ ಗೌಡ ಹೇಳಿದರು.

ಹಾಸನ: ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಜೆಡಿಎಸ್ ಪಕ್ಷದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿ ಜೊತೆ ಮೈತ್ರಿ ಬೆಳೆಸಲು ಹಾತೊರೆಯುತ್ತಿದ್ದಾರೆ ಎಂದು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಇಂದು ಹಾಸನದಲ್ಲಿ ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ವಿಧಾನ ಸಭಾ ಚುನಾವಣೆ (Assembly Polls) ಸಂದರ್ಭದಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ, ಹಾಲಿ ವಿಧಾನ ಪರಿಷತ್ ಸದಸ್ಯ ಮೊದಲಾದವರೆಲ್ಲ ಹಾಸನದಲ್ಲಿ ಓಡಾಡಿ ಪ್ರೀತಂ ಗೌಡನ ಸೋಲಿಸಬೇಕು, ರಾಜಕೀಯವಾಗಿ ಅವರನ್ನು ಮುಗಿಸಬೇಕು ಅಂತ ಹೇಳಿರುವಾಗ ಅಂಥವರೊಂದಿಗೆ ತನ್ನ ಪಕ್ಷದ ಕಾರ್ಯಕರ್ತರು ಹೇಗೆ ಕೆಲಸ ಮಾಡುತ್ತಾರೆ? ಜನರ ಬಳಿ ಯಾವ ಮುಖವಿಟ್ಟುಕೊಂಡು ವೋಟು ಕೇಳುತ್ತಾರೆ? ರಾಜಕಾರಣದಲ್ಲಿ ಮ್ಯಾಥ್ಸ್ ನಡೆಯಲ್ಲ ಕೆಮಿಸ್ಟ್ರಿ ನಡೆಯುತ್ತೆ ಅಂತ ತನಗಿಂತ ಚೆನ್ನಾಗಿ ಅವರಿಗೆ ಗೊತ್ತು ಎಂದು ಪ್ರೀತಂ ಗೌಡ ಹೇಳಿದರು. ಮೈತ್ರಿಯ ಅವಶ್ಯಕತೆ ಅವರಿಗದೆ, ಬಿಜೆಪಿಗಲ್ಲ, ಹಾಗೊಮ್ಮೆ ಜೆಡಿಎಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿ ಆಗಬೇಕು, ಪ್ರಸ್ತುತ ಸ್ಥಿತಿಯಲ್ಲಿ ದೇಶಕ್ಕೆ ಅವರೇ ಸೂಕ್ತ ನಾಯಕ ಅಂತ ಮೈತ್ರಿಗಾಗಿ ಬಂದರೆ, ತಮ್ಮ ಪಕ್ಷದ ಹಿರಿಯ ನಾಯಕರು ಪರಾಮರ್ಶೆ ನಡೆಸಬಹುದು ಎಂದು ಪ್ರೀತಂ ಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ