Mysuru Dasara 2023: ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ, ಭೀಮನಿಗೆ ಸ್ನಾನ ಮಾಡಿಸಿದ ಮುದ್ದು ಕಂದ

Mysuru Dasara 2023: ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ, ಭೀಮನಿಗೆ ಸ್ನಾನ ಮಾಡಿಸಿದ ಮುದ್ದು ಕಂದ

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Sep 14, 2023 | 9:01 AM

ಮೈಸೂರು ಅರಮನೆಯಲ್ಲಿ ಗಜಪಡೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದೃಶ್ಯಗಳು ಕಂಡು ಬಂದಿವೆ. ಅರಮನೆಯಲ್ಲಿ ಆನೆಗಳ ಸ್ನಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಅರಮನೆ ಆವರಣದಲ್ಲಿನ ನೀರಿನ ಹೊಂಡದಲ್ಲಿ ದಸರಾ ಗಜಪಡೆಗಳು ಜಳಕ ಮಾಡಿದವು. ಪುಟಾಣಿ ಪಾಪುವೊಂದು ಭೀಮ ಆನೆಗೆ ಸ್ನಾನ ಮಾಡಿಸಿದ ದೃಶ್ಯ ಮುದ್ದಾಗಿತ್ತು.

ಮೈಸೂರು, ಸೆ.14: ವಿಶ್ವ ವಿಖ್ಯಾತ ಮೈಸೂರು ದಸರಾ 2023 ಮಹೋತ್ಸವದ ಸಿದ್ದತೆ ಭರ್ಜರಿಯಾಗಿ ನಡೆಯುತ್ತಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ತಯಾರಿ ಜೋರಾಗಿ ನಡೆದಿದೆ. ದಸರಾ ಗಜಪಡೆಗಳು ಮೈಸೂರು ರಾಜಬೀದಿಗೆ ಎಂಟ್ರಿ ಕೊಟ್ಟು ತಾಲೀಮು ಆರಂಭಿಸಿವೆ. ಸದ್ಯ ಇಂದು ಮೈಸೂರು ಅರಮನೆಯಲ್ಲಿ ಗಜಪಡೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದೃಶ್ಯಗಳು ಕಂಡು ಬಂದಿವೆ. ಅರಮನೆಯಲ್ಲಿ ಆನೆಗಳ ಸ್ನಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಅರಮನೆ ಆವರಣದಲ್ಲಿನ ನೀರಿನ ಹೊಂಡದಲ್ಲಿ ದಸರಾ ಗಜಪಡೆಗಳು ಜಳಕ ಮಾಡಿದವು. ಪುಟಾಣಿ ಪಾಪುವೊಂದು ಭೀಮ ಆನೆಗೆ ಸ್ನಾನ ಮಾಡಿಸಿದ ದೃಶ್ಯ ಮುದ್ದಾಗಿತ್ತು.

ಅಕ್ಟೋಬರ್ 15ರಂದು ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಆಗುತ್ತೆ. ವಸ್ತು ಪ್ರದರ್ಶನ ಕೂಡ ಅಂದೇ ಆರಂಭವಾಗಲಿದೆ.