ಕರ್ನೂಲ್ ಬಸ್ ದುರಂತ: ಪವಾಡಸದೃಶ ಬದುಕುಳಿದ ಬೆಂಗಳೂರಿನ ನಾಲ್ವರು ಪ್ರಯಾಣಿಕರು
ಕರ್ನೂಲ್ ಬಸ್ ಅಗ್ನಿ ದುರಂತದಲ್ಲಿ ಬೆಂಗಳೂರಿನ ನಾಲ್ವರು ಬದುಕುಳಿದಿದ್ದಾರೆ. ಹೈದರಾಬಾದ್‌ನಿಂದ ಮರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಇವರು ಎಮರ್ಜೆನ್ಸಿ ಎಕ್ಸಿಟ್ ಡೋರ್ ಗ್ಲಾಸ್ ಒಡೆದು ಹೊರಬಂದಿದ್ದಾರೆ. ಜಾಮ್ ಆಗಿದ್ದ ಡೋರ್ ತೆರೆಯಲು ಸಾಧ್ಯವಾಗದಿದ್ದಾಗ, ಧೈರ್ಯದಿಂದ ಗ್ಲಾಸ್ ಒಡೆದು ಅಪಾಯದಿಂದ ಸ್ವತಃ ಪಾರಾಗಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಅಕ್ಟೋಬರ್ 24: ಬೆಳಕಿನ ಹಬ್ಬ ಆಚರಿಸಿಕೊಂಡು ಮನೆಯಿಂದ ಹೊರಟಿದ್ದವರು ನಡುರಸ್ತೆಯಲ್ಲಿ ಧಗಧಗಿಸಿ ಸುಟ್ಟು ಕರಕಲಾಗಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ (Bus) 20 ಮಂದಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಇದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ನಾಲ್ವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಶಿವ, ಗ್ಲೋರಿಯಾ ಈಸ್ಟಾ, ಸ್ಯಾಮ್, ಚರಿತ್ ಮತ್ತು ಮೊಹಮ್ಮದ್ ಖಾಜಿರ್ ಬದುಕುಳಿದ ಬೆಂಗಳೂರಿನವರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 24, 2025 04:52 PM

