ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನು ಗೊತ್ತಾ? ವಿವರಿಸಿದ ನಟ ರಮೇಶ್​​ ಅರವಿಂದ್​

|

Updated on: Apr 02, 2024 | 9:04 PM

‘ಚಿತ್ರರಂಗದಲ್ಲಿ ವೃತ್ತಿಪರತೆ ಬೇಕು. ಅರ್ಧ ಗಂಟೆ ಎನ್ನುವುದು ಕೂಡ ತುಂಬಾ ಮುಖ್ಯ. ಇದು ಬದಲಾದ ಸಮಯ. ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಒಟಿಟಿಯಲ್ಲಿ ಕಂಟೆಂಟ್​ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದ್ದರಿಂದ ನಾವು ಅವರ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್​ ಸಿಗುತ್ತದೆ’ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್​ ಹೇಳಿದ್ದಾರೆ.

ನಟ ರಮೇಶ್ ಅರವಿಂದ್​ (Ramesh Aravind) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ (Kannada Film Industry) ಆ್ಯಕ್ಟೀವ್​ ಆಗಿದ್ದಾರೆ. ಅವರ ಅನುಭವ ಅಪಾರ. ಪತ್ರಕರ್ತರ ಜೊತೆ ಅವರಿಗೆ ಬಹಳ ಕಾಲದಿಂದ ಒಡನಾಟ ಇದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ-ಮಾಧ್ಯಮ ಸ್ಥಿತಿಗತಿ’ ಸಂವಾದ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ರಮೇಶ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ‘ಇಂದು ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನೆಂದರೆ ಪ್ರೊಫೆಷನಲಿಸಂ ಇಲ್ಲ. ಎಷ್ಟು ಗಂಟೆಗೆ ಬರಬೇಕು ಅಂತ ಕೇಳಿದರೆ, 10-10.30ಕ್ಕೆ ಬನ್ನಿ ಅಂತ ಪ್ರೊಡಕ್ಷನ್​ ಮ್ಯಾನೇಜರ್​ ಹೇಳುತ್ತಾನೆ. 10 ಎನ್ನಬೇಕು ಅಥವಾ 10.30 ಎನ್ನಬೇಕು. ಅವೆರಡೂ ಬೇರೆ ಬೇರೆ ಸಮಯ. 10-10.30 ಎಂದರೆ ಏನು ಅರ್ಥ? ಅರ್ಧ ಗಂಟೆ ಎನ್ನುವುದು ಬಹಳ ಮುಖ್ಯ. ಈಗ ಬದಲಾದ ಸಮಯ. ಒಟಿಟಿಯಲ್ಲಿ (OTT) ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಕಂಟೆಂಟ್​ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ನಾವು ಆ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್​ ಸಿಗುತ್ತದೆ’ ಎಂದು ರಮೇಶ್ ಅರವಿಂದ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on