ವರ್ಷ ಕಳೆದರೂ ಕೈ ಸೇರದ ನೆರೆ ಪರಿಹಾರ, ಪ್ರತಿಭಟನೆ ನಿರತರಲ್ಲಿ ಮಹಿಳೆ ಅಸ್ವಸ್ಥ

|

Updated on: Aug 26, 2020 | 1:14 PM

[lazy-load-videos-and-sticky-control id=”0r1S_tNNGTY”] ಬೆಳಗಾವಿ: ಕಳೆದ ವರ್ಷದ ನೆರೆ ಪರಿಹಾರ ಇನ್ನೂ ಸಂಬಂಧಪಟ್ಟವರಿಗೆ ಸಿಗದ ಹಿನ್ನೆಲೆ, ನೆರೆ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನಾನಿರತರ ಪೈಕಿ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಬಾರಿ ಬೆಳಗಾವಿ ಜಿಲ್ಲೆ, ಮಳೆಯ ಅಬ್ಬರದಿಂದಾಗಿ ಭಾರಿ ಹಾನಿಗೊಳಗಾಗಿತ್ತು. ಇದರಿಂದಾಗಿ ರೈತರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ರಾಜ್ಯ ಸರ್ಕಾರವೂ ಸಹ ಸಂಕಷ್ಟದಲ್ಲಿದ್ದ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ ವರ್ಷಗಳು ಕಳೆದರೂ ನೆರೆ ಪರಿಹಾರ ಸಂತ್ರಸ್ತರಿಗೆ ತಲುಪಿಲ್ಲ. […]

ವರ್ಷ ಕಳೆದರೂ ಕೈ ಸೇರದ ನೆರೆ ಪರಿಹಾರ, ಪ್ರತಿಭಟನೆ ನಿರತರಲ್ಲಿ ಮಹಿಳೆ ಅಸ್ವಸ್ಥ
Follow us on

[lazy-load-videos-and-sticky-control id=”0r1S_tNNGTY”]

ಬೆಳಗಾವಿ: ಕಳೆದ ವರ್ಷದ ನೆರೆ ಪರಿಹಾರ ಇನ್ನೂ ಸಂಬಂಧಪಟ್ಟವರಿಗೆ ಸಿಗದ ಹಿನ್ನೆಲೆ, ನೆರೆ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನಾನಿರತರ ಪೈಕಿ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಬಾರಿ ಬೆಳಗಾವಿ ಜಿಲ್ಲೆ, ಮಳೆಯ ಅಬ್ಬರದಿಂದಾಗಿ ಭಾರಿ ಹಾನಿಗೊಳಗಾಗಿತ್ತು. ಇದರಿಂದಾಗಿ ರೈತರು ತಮ್ಮ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ರಾಜ್ಯ ಸರ್ಕಾರವೂ ಸಹ ಸಂಕಷ್ಟದಲ್ಲಿದ್ದ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿತ್ತು. ಆದರೆ ವರ್ಷಗಳು ಕಳೆದರೂ ನೆರೆ ಪರಿಹಾರ ಸಂತ್ರಸ್ತರಿಗೆ ತಲುಪಿಲ್ಲ. ಇದರಿಂದಾಗಿ ನೆರೆ ಸಂತ್ರಸ್ತರು ಬೆಳಗಾವಿ ಜಿಲ್ಲೆ ರಾಮದುರ್ಗದ ತಹಶೀಲ್ದಾರ್ ಕಚೇರಿ ಎದುರು ಮೂರು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ನಿರತರಾಗಿರುವ ಸಂತ್ರಸ್ತರು ಅನ್ನಾಹಾರಗಳನ್ನು ತ್ಯಜಿಸಿದ್ದಾರೆ. ಹೀಗಾಗಿ ಪ್ರತಿಭಟನೆ ನಿರತರಲ್ಲಿ ಮಹಿಳೆಯೊಬ್ಬರು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಕುಸಿದುಬಿದ್ದ ಮಹಿಳೆಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಂತ್ರಸ್ತರೇ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಅಸ್ವಸ್ಥಗೊಂಡು ಕುಸಿದುಬಿದ್ದರೂ, ಮಹಿಳೆ ಪ್ರತಿಭಟನೆಯಲ್ಲಿ ನಿರತರಾಗಿದ್ದು, ಪ್ರತಿಭಟನಾ ಸ್ಥಳದಲ್ಲಿ ಮಲಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Published On - 10:32 am, Wed, 26 August 20