Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾಮಲೈ ಬಿಜೆಪಿ ಸೇರಿದ ಬೆನ್ನಲ್ಲೆ ಈಗ ಸೌರವ್ ಗಂಗೂಲಿನೂ ಬಿಜೆಪಿ ಸೇರ್ತಾರ!

[lazy-load-videos-and-sticky-control id=”WvruOHKbOE4″] ದೆಹಲಿ:ಕರ್ನಾಟಕದ ಸಿಂಗಂ ಅಂತಾನೆ ಪ್ರಸಿದ್ದಿಯಾಗಿದ್ದ ಅಣ್ಣಾಮಲೈ ಬಿಜೆಪಿ ಸೇರಿದ್ದಾರೆ. ಈಗ ಖ್ಯಾತ ಕ್ರಿಕೆಟ್ ತಾರೆಯೊಬ್ರು ಬಿಜೆಪಿ ಸೇರುತ್ತಾರೆಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅಷ್ಟೇ ಅಲ್ಲ ಆ ಕ್ರಿಕೆಟ್ ಸ್ಟಾರ್ ಸಿಎಂ ಅಭ್ಯರ್ಥಿಯಾಗ್ತಾರೆ ಅನ್ನೋ ಮಾತುಗಳು ಸಹ ಕೇಳಿಬರ್ತಿರೋದು ಹೊಸ ಸಂಚಲನ ಸೃಷ್ಟಿಸಿದೆ. ರಾಜಕೀಯದಲ್ಲಿ ಸಿಕ್ಸರ್ ಬಾರಿಸಲು ಮುಂದಾದ್ರಾ ದಾದಾ? ನಿನ್ನೆಯಷ್ಟೇ ಟಫ್ ಕಾಪ್ ಅಂತಾ ಹೆಸರುವಾಸಿಯಾಗಿದ್ದ ಸಿಂಗಂ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದ್ರು. ಅಣ್ಣಾಮಲೈ ಬಿಜೆಪಿ ಸೇರಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಬಿಜೆಪಿ […]

ಅಣ್ಣಾಮಲೈ ಬಿಜೆಪಿ ಸೇರಿದ ಬೆನ್ನಲ್ಲೆ ಈಗ ಸೌರವ್ ಗಂಗೂಲಿನೂ ಬಿಜೆಪಿ ಸೇರ್ತಾರ!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Aug 26, 2020 | 9:48 AM

[lazy-load-videos-and-sticky-control id=”WvruOHKbOE4″]

ದೆಹಲಿ:ಕರ್ನಾಟಕದ ಸಿಂಗಂ ಅಂತಾನೆ ಪ್ರಸಿದ್ದಿಯಾಗಿದ್ದ ಅಣ್ಣಾಮಲೈ ಬಿಜೆಪಿ ಸೇರಿದ್ದಾರೆ. ಈಗ ಖ್ಯಾತ ಕ್ರಿಕೆಟ್ ತಾರೆಯೊಬ್ರು ಬಿಜೆಪಿ ಸೇರುತ್ತಾರೆಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅಷ್ಟೇ ಅಲ್ಲ ಆ ಕ್ರಿಕೆಟ್ ಸ್ಟಾರ್ ಸಿಎಂ ಅಭ್ಯರ್ಥಿಯಾಗ್ತಾರೆ ಅನ್ನೋ ಮಾತುಗಳು ಸಹ ಕೇಳಿಬರ್ತಿರೋದು ಹೊಸ ಸಂಚಲನ ಸೃಷ್ಟಿಸಿದೆ.

ರಾಜಕೀಯದಲ್ಲಿ ಸಿಕ್ಸರ್ ಬಾರಿಸಲು ಮುಂದಾದ್ರಾ ದಾದಾ? ನಿನ್ನೆಯಷ್ಟೇ ಟಫ್ ಕಾಪ್ ಅಂತಾ ಹೆಸರುವಾಸಿಯಾಗಿದ್ದ ಸಿಂಗಂ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದ್ರು. ಅಣ್ಣಾಮಲೈ ಬಿಜೆಪಿ ಸೇರಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಬಿಜೆಪಿ ಸೇರುವ ಬಗ್ಗೆ ಮಾತು ಕೇಳಿಬರ್ತಿವೆ. ಅಷ್ಟೇ ಅಲ್ಲ, ಮುಂಬರುವ ಪಶ್ಟಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವವನ್ನ ಗಂಗೂಲಿ ವಹಿಸುತ್ತಾರೆಂಬ ಚರ್ಚೆ ಜೋರಾಗಿದೆ.

ಅಂದ್ಹಾಗೆ, ಈ ಚರ್ಚೆ ಹುಟ್ಟಲು ಕಾರಣ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಘಟನೆ.. ಗಂಗೂಲಿ ಒಡೆತನದ ಎಜುಕೇಷನಲ್‌ ಆ್ಯಂಡ್‌ ವೆಲ್‌ಫೇರ್‌ ಸೊಸೈಟಿಗೆ ಪಶ್ಚಿಮ ಬಂಗಾಳದ ಗೃಹ ಮಂಡಳಿ ಕೋಲ್ಕತ್ತಾದಲ್ಲಿ 2 ಎಕರೆ ಜಾಗ ನೀಡಿತ್ತು. ಇಲ್ಲಿ, 12ನೇ ತರಗತಿವರೆಗಿನ ಶಾಲೆಯನ್ನು ತೆರೆಯಲು ಗಂಗೂಲಿ ಕೂಡಾ ರೆಡಿಯಾಗಿದ್ರು. ಆದ್ರೆ, ದಿಢೀರ್‌ ಎಂಬಂತೆ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಪತ್ರ ಬರೆದಿರುವ ಗಂಗೂಲಿ ಅವರ ಎಜುಕೇಷನಲ್‌ ಸೊಸೈಟಿ ಜಮೀನು ಹಿಂಪಡೆಯುವಂತೆ ಮನವಿ ಮಾಡಿದೆ. ಸರ್ಕಾರ ಕೂಡ ಮನವಿಯನ್ನ ಅಂಗೀಕರಿಸಿದೆ. ಕಾನೂನು ತೊಂದರೆಯಿಂದ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ರೂ ಇದೇ ವಿಷಯ, ಗಂಗೂಲಿ ಬಿಜೆಪಿ ಸೇರುವ ಸಾಧ್ಯತೆ ಸುದ್ದಿಯನ್ನ ಹರಡಿದೆ.

ಪಶ್ಚಿಮ ಬಂಗಾಳದಲ್ಲಿ ಗಂಗೂಲಿ ಸಿಎಂ ಅಭ್ಯರ್ಥಿಯಾಗ್ತಾರಾ? ಪಶ್ಚಿಮ ಬಂಗಾಳದ ಪಾಲಿಗೆ ಸೌರವ್‌ ಗಂಗೂಲಿ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಸರಿಸಮನಾಗಿ ನಿಲ್ಲುವ ನಾಯಕನ ಸ್ಥಾನದಲ್ಲಿ ಗಂಗೂಲಿ ಇರ್ತಾರೆ ಎಂಬ ಮಾತು ಕೇಳಿಬರ್ತಿದೆ. ಕುತೂಹಲಕಾರಿ ವಿಚಾರ ಅಂದ್ರೆ ಗಂಗೂಲಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಇನ್ನು ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಅಮಿತ್ ಶಾ ಹಾಗೂ ಮತ್ತಿಬ್ಬರು ಬಿಜೆಪಿ ಸಚಿವರು ನೆರವು ನೀಡಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಆ ವೇಳೆ ಗಂಗೂಲಿ ತಾನು ಉತ್ತಮ ಕ್ರಿಕೆಟಿಗ ಎಂದು ಹೆಸರು ಪಡೆದಿದ್ದೇನೆ. ರಾಜಕೀಯ ಪ್ರವೇಶ ಮಾಡುವ ಆಲೋಚನೆ ಇಲ್ಲ ಎಂದಿದ್ದರು. ಆದ್ರೆ, ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನ ನೋಡಿದ್ರೆ ರಾಜಕೀಯದಲ್ಲಿ ದಾದಾಗಿರಿ ಶುರುವಾಗೋದು ನಿಶ್ಚಿತ ಎನ್ನಿಸುತ್ತಿದೆ.

Published On - 6:57 am, Wed, 26 August 20