AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ಲಾಕ್ 4ನಲ್ಲಿ ಮೆಟ್ರೋ ರೈಲು ಸಂಚಾರ, ಕೇಂದ್ರ ಸರ್ಕಾರದಿಂದ ಶೀಘ್ರ ಗೈಡ್ಲೈನ್ಸ್

ದೆಹಲಿ: ದೇಶದಲ್ಲಿ ಈಗಾಗಲೇ ಅನ್​ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ಮೂರನೇ ಹಂತದ ಅನ್​ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. 3ನೇ ಹಂತದ ಅನ್​ಲಾಕ್ ಪ್ರಕ್ರಿಯೆ ಇದೇ ತಿಂಗಳ 31ನೇ ತಾರೀಖಿಗೆ ಅಂತ್ಯವಾಗಲಿದೆ. ಸೆಪ್ಟೆಂಬರ್ 1ರಿಂದ 4ನೇ ಹಂತದ ಅನ್​ಲಾಕ್ ಪ್ರಕ್ರಿಯೆ ಜಾರಿಗೆ ಬರಲಿದೆ. ಇದರಲ್ಲಿ ಇನ್ನಷ್ಟು ವಿನಾಯ್ತಿಗಳನ್ನ ನೀಡಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಅನ್​ಲಾಕ್ 4.0 ಹೇಗಿರುತ್ತೆ ಅಂತಾ ನೋಡೋದಾದ್ರೆ. ಮೆಟ್ರೋ ಪ್ರಯಾಣಕ್ಕೆ ರೂಲ್ಸ್ ರೆಡಿ ಮಾಡ್ತಿದೆ ಕೇಂದ್ರ! ಸೆಪ್ಟೆಂಬರ್ 1ರಿಂದ ದೇಶಾದ್ಯಂತ 4ನೇ ಹಂತದ ಅನ್‌ಲಾಕ್‌ […]

ಅನ್ಲಾಕ್ 4ನಲ್ಲಿ ಮೆಟ್ರೋ ರೈಲು ಸಂಚಾರ, ಕೇಂದ್ರ ಸರ್ಕಾರದಿಂದ ಶೀಘ್ರ ಗೈಡ್ಲೈನ್ಸ್
ಆಯೇಷಾ ಬಾನು
|

Updated on: Aug 26, 2020 | 7:23 AM

Share

ದೆಹಲಿ: ದೇಶದಲ್ಲಿ ಈಗಾಗಲೇ ಅನ್​ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ಮೂರನೇ ಹಂತದ ಅನ್​ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. 3ನೇ ಹಂತದ ಅನ್​ಲಾಕ್ ಪ್ರಕ್ರಿಯೆ ಇದೇ ತಿಂಗಳ 31ನೇ ತಾರೀಖಿಗೆ ಅಂತ್ಯವಾಗಲಿದೆ. ಸೆಪ್ಟೆಂಬರ್ 1ರಿಂದ 4ನೇ ಹಂತದ ಅನ್​ಲಾಕ್ ಪ್ರಕ್ರಿಯೆ ಜಾರಿಗೆ ಬರಲಿದೆ. ಇದರಲ್ಲಿ ಇನ್ನಷ್ಟು ವಿನಾಯ್ತಿಗಳನ್ನ ನೀಡಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಅನ್​ಲಾಕ್ 4.0 ಹೇಗಿರುತ್ತೆ ಅಂತಾ ನೋಡೋದಾದ್ರೆ.

ಮೆಟ್ರೋ ಪ್ರಯಾಣಕ್ಕೆ ರೂಲ್ಸ್ ರೆಡಿ ಮಾಡ್ತಿದೆ ಕೇಂದ್ರ! ಸೆಪ್ಟೆಂಬರ್ 1ರಿಂದ ದೇಶಾದ್ಯಂತ 4ನೇ ಹಂತದ ಅನ್‌ಲಾಕ್‌ ರೂಲ್ಸ್ ಜಾರಿಯಾಗಲಿದೆ. ನಾಲ್ಕು ದಿನಗಳಲ್ಲಿ ಗೃಹ ಇಲಾಖೆ ಅನ್‌ಲಾಕ್‌ ಮಾರ್ಗಸೂಚಿ ಪ್ರಕಟಿಸಲಿದ್ದು, ಮೆಟ್ರೋ ರೈಲು ಸಂಚಾರಕ್ಕೆ ಬಹುತೇಕ ಅನುಮತಿ ನೀಡಲಿದೆ. ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದ್ರೂ ಹಲವು ನಿಯಮಗಳನ್ನ ಜಾರಿಗೊಳಿಸುವ ಸಾಧ್ಯತೆಯಿದೆ.

ಮೆಟ್ರೋ ಸಂಚಾರಕ್ಕೆ ರೂಲ್ಸ್! ಮೆಟ್ರೋ ಸಂಚಾರಕ್ಕೆ ಸೆಪ್ಟೆಂಬರ್ 1ರಿಂದ ಅನುಮತಿ ಸಿಗೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಮೆಟ್ರೋ ರೈಲು ಪ್ರಯಾಣಿಕರಿಗೆ ಈಗಿರುಂತೆ ಟೋಕನ್‌ ವಿತರಿಸದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಟಿಕೆಟ್‌ಲೆಸ್‌ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿಯಮ ರೂಪಿಸುತ್ತಿದ್ದು, ಟೋಕನ್‌ಗಳ ಬದಲಿಗೆ ಕಾರ್ಡ್‌ಗಳ ವ್ಯವಸ್ಥೆ ಮಾಡಲು ಮುಂದಾಗಿದೆ.

ಮೆಟ್ರೋ ರೈಲು ಸಂಚಾರಕ್ಕೆ ಹೇಗೆ ಅನುಮತಿ ನೀಡಬಹುದು ಎಂಬುದರ ಬಗ್ಗೆ ನಗರಾಭಿವೃದ್ಧಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು, ಮೆಟ್ರೋ ನಿಗಮಗಳು ಸೇರಿದಂತೆ ಭದ್ರತಾ ಏಜೆನ್ಸಿಗಳ ಜೊತೆಗೂ ನಿಯಮಗಳ ಬಗ್ಗೆ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳ ಬಂದ್ ಮುಂದುವರಿಕೆ ಮೆಟ್ರೋ ರೈಲು ಆರಂಭವಾದ್ರೂ ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳ ಬಂದ್ ಮುಂದುವರಿಸುವುದು ಬಹುತೇಕ ಖಚಿತವಾಗಿದೆ. ಯಾಕಂದ್ರೆ, ಶೇಕಡಾ 25ರಿಂದ 30ರಷ್ಟು ಸೀಟ್‌ಗಳನ್ನ ಮಾತ್ರ ತುಂಬಿಸಿ ಸಿನಿಮಾ ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಕೊವಿಡ್ ನಿಯಮ ಉಲ್ಲಂಘಿಸಲು ಕೂಡ ಆಗೋದಿಲ್ಲ. ಹೀಗಾಗಿ, ನಷ್ಟದಲ್ಲಿ ಸಿನಿಮಾ ಹಾಲ್‌ಗಳನ್ನ ನಡೆಸುವುದಕ್ಕಿಂತ ಇನ್ನೊಂದು ತಿಂಗಳು ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಕೇಂದ್ರ ಸರ್ಕಾರದಲ್ಲಿದೆ.

ಇನ್ನು, ಶಾಲಾ-ಕಾಲೇಜುಗಳನ್ನೂ ಇನ್ನೊಂದು ತಿಂಗಳ ಮಟ್ಟಿಗೆ ತೆರೆಯದೇ ಇರುವುದು ಒಳ್ಳೆಯದು ಅನ್ಕೊಂಡಿರೋ ಕೇಂದ್ರ, ಆ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತಿದೆ. ಆದ್ರೆ, ಐಐಟಿ ಮತ್ತು ಐಐಎಂಗಳಂತಹ ಕಾಲೇಜುಗಳನ್ನ ತೆರೆಯಲು ಅನುಮತಿ ನೀಡೋ ಸಾಧ್ಯತೆಯಿದೆ.

ಅಂದಹಾಗೆ ದೇಶದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸವೇನು ಕಡಿಮೆಯಾಗಿಲ್ಲ. ದಿನದಿನವೂ ಏರಿಕೆಯಾಗುತ್ತಲೇ ಇದೆ. ಆದ್ರೆ, ಕೊರೊನಾ ಜೊತೆಗೆ ಬದುಕಲು ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಕೆಲ ನಿಯಮಗಳೊಂದಿಗೆ ಅನ್‌ಲಾಕ್ 4 ಮಾರ್ಗಸೂಚಿಗಳನ್ನ ರಿಲೀಸ್ ಮಾಡಲಿದೆ.ಈಗಾಗಲೇ ಅನ್‌ಲಾಕ್ 4ನ ಬಹುತೇಕ ಮಾರ್ಗಸೂಚಿಗಳು ಸಿದ್ದವಾಗಿವೆ. ಪ್ರಧಾನಿ ಮೋದಿ ಒಪ್ಪಿಗೆ ಬಳಿಕ ಪ್ರಕಟವಾಗುವ ನಿರೀಕ್ಷೆಗಳಿವೆ.