Mysuru: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಸರ್ಕಾರೀ ಆಸ್ಪತ್ರೆಯನ್ನು ಖಾಸಗಿಯಾಗಿಸಿ ಮಹಿಳಾ ವೈದ್ಯಾಧಿಕಾರಿ ಡಾ ಕೋಮಲ ಹಗಲು ದರೋಡೆ!
ಮೊನ್ನೆಯಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೈಸೂರು ಜಿಲಾಸ್ಪತ್ರೆಗೆ ಭೇಟಿ ನೀಡಿದ್ದರು.
ಮೈಸೂರು: ಗ್ಯಾರಂಟಿಗಳ ಜೊತೆಗೆ ದಕ್ಷ, ಲಂಚಮುಕ್ತ ಆಡಳಿತ ನೀಡುವ ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ (Siddaramaiah) ಕಾಂಗ್ರೆಸ್ ಸರ್ಕಾರ ಸರ್ಕಾರಿ ಕಚೇರಿ ಮತ್ತು ಆಸ್ಪತ್ರೆಗಳಲ್ಲಿ ಏನೇನು ನಡೆಯುತ್ತಿದೆ ಅನ್ನೋದನ್ನು ಕೂಡಲೇ ಗಮನಿಸಬೇಕಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲೇ ಅವ್ಯವಹಾರದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರದ ಉದಯಗಿರಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ (public health centre) ಮಹಿಳಾ ವೈದ್ಯಾಧಿಕಾರಿ ಡಾ ಕೋಮಲ (Dr Komala) ಚಿಕಿತ್ಸೆಗೆ ಬರುವ ರೋಗಿಗಳಿಂದ ಹಣ ವಸೂಲು ಮಾಡಲು ಸಿಬ್ಬಂದಿಗೆ ಟಾರ್ಗೆಟ್ ನೀಡಿದ್ದಾರೆ ಮತ್ತು ಯಾವ್ಯಾವ ಸೇವೆಗೆ ಎಷ್ಟೆಷ್ಟು ಹಣ ಪಡೆಯಬೇಕು ಅಂತ ದರ ಸಹ ಫಿಕ್ಸ್ ಮಾಡಿದ್ದಾರೆ. ದಿನವೊಂದರಲ್ಲಿ ವಸೂಲಾದ ಹಣದಲ್ಲಿ ಡಾ ಕೋಮಲ ತಮ್ಮ ಪಾಲು ತೆಗೆದುಕೊಂಡು ಉಳಿದಿದ್ದನ್ನು ಸಿಬ್ಬಂದಿಗೆ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊನ್ನೆಯಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮೈಸೂರು ಜಿಲಾಸ್ಪತ್ರೆಗೆ ಭೇಟಿ ನೀಡಿದ್ದರು. ಸಚಿವರೇ, ಈಗ ಮತ್ತೊಮ್ಮೆ ಬಂದು ಈ ಡಾಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ