ಲಕ್ಕುಂಡಿ: ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸಂಗ್ರಹಿಸಿದ ವಸ್ತುಗಳನ್ನ ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ 91 ವರ್ಷದ ತೋಟಕಾಯ ಕಾಶಯ್ಯ ಪತ್ರಿಮಠ ಅವರು ಚಿನ್ನ, ವಜ್ರ, ಪಂಚ ನೀಲ ಸೇರಿ ಅಪರೂಪದ ಪುರಾತನ ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಈ ಹೊಸ ಆವಿಷ್ಕಾರ ಸಂಭವಿಸಿದೆ. ತೋಟಕಾಯರು ತಮ್ಮ ಜೀವನೋಪಾಯಕ್ಕಾಗಿ ಕೆಲವು ವಸ್ತುಗಳನ್ನು ಮಾರಾಟ ಮಾಡಿದ್ದು, ಸಂಗ್ರಹಿಸಿದ ನಿಧಿಯನ್ನು ಸರ್ಕಾರಕ್ಕೆ ನೀಡಲು ನಿರಾಕರಿಸಿದ್ದಾರೆ.
ಗದಗ, ಜನವರಿ 15: ಗದಗ ತಾಲೂಕಿನ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಮತ್ತೆ ಪುರಾತನ ವಸ್ತುಗಳು ಪತ್ತೆ ಆಗಿವೆ. 91 ವರ್ಷದ ತೋಟಯ್ಯ ಕಾಶಯ್ಯ ಪತ್ರಿಮಠ ಅವರಿಗೆ ಪುರಾತನ ವಸ್ತುಗಳು ಸಿಕ್ಕಿವೆ. ಪಂಚ ನೀಲ, ಗಾಣಿಗ ನೀಲ, ಇಂದ್ರನೀಲ, ನೀಲದ ಹರಳುಗಳು, ಜಂಬನೀಲ, ಹುಳುಗಳು, ಚಿನ್ನ, ವಜ್ರ ಪಚ್ಚ, ಸ್ಫಟಿಕ ನಾಣ್ಯಗಳು ಪತ್ತೆ ಆಗಿವೆ. ನಿಧಿ ಸಂಗ್ರಹಣೆ ಮಾಡುವುದೇ ತೋಟಯ್ಯ ಅವರ ಕಾಯಕವಂತೆ. ಮಳೆಯಾದರೆ ಸಾಕು ನಿಧಿಯನ್ನು ಸಂಗ್ರಹಣೆ ಮಾಡಲು ಮಾಡುತ್ತಿದ್ದರು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಅನ್ವೇಷಣೆ ಮಾಡಿದ್ದಾರೆ. ತಮಗೆ ಸಿಕ್ಕ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಲಕ್ಕುಂಡಿ ಗ್ರಾಮದ ದೇವಸ್ಥಾನಗಳ ಬಳಿ ಸಾಕಷ್ಟು ನಿಧಿಯಿದೆ. ನಾನು ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.