ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಹಲ್ಲೆ ಆರೋಪ; ನ್ಯಾಯ ಕೊಡಿಸಿ ಎಂದ ಸಂತ್ರಸ್ತೆ

|

Updated on: Mar 08, 2024 | 12:37 PM

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಜ್ನಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಕಳೆದ ಡಿಸೆಂಬರ್ 6ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾಧುರಿ ಎಂಬುವವರು ತಮ್ಮ ಸೋದರಿ ಐಶ್ವರ್ಯ ಜೊತೆ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಐ20 ಕಾರಿನಲ್ಲಿ ಬಂದ ಮಾಧುರಿ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ (Lakshmi Siddaiah) ವಿರುದ್ಧ ಆರೋಪ ಒಂದು ಎದುರಾಗಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದಿದ್ದು ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಜ್ನಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಕಳೆದ ಡಿಸೆಂಬರ್ 6ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾಧುರಿ ಎಂಬುವವರು ತಮ್ಮ ಸೋದರಿ ಐಶ್ವರ್ಯ ಜೊತೆ ಸ್ಕೂಟರ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಐ20 ಕಾರಿನಲ್ಲಿ ಬಂದ ಮಾಧುರಿ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ ಕಿರಿಕ್ ಮಾಡಿ ಮಾಧುರಿ ಹಾಗೂ ಐಶ್ವರ್ಯಗೆ ಹಲ್ಲೆ ಮಾಡಿದ ಆರೋಪ ಎದುರಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ