AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshya Sen: ಆಸ್ಟ್ರೇಲಿಯನ್ ಓಪನ್ ಗೆದ್ದ ಲಕ್ಷ್ಯ ಸೇನ್

Lakshya Sen: ಆಸ್ಟ್ರೇಲಿಯನ್ ಓಪನ್ ಗೆದ್ದ ಲಕ್ಷ್ಯ ಸೇನ್

ಝಾಹಿರ್ ಯೂಸುಫ್
|

Updated on:Nov 23, 2025 | 1:27 PM

Share

Lakshya Sen Australian Open 2025: ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ ಎರಡನೇ ಭಾರತೀಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಯನ್ನು ಲಕ್ಷ್ಯ ಸೇನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2017 ರಲ್ಲಿ  ಕಿದಂಬಿ ಶ್ರೀಕಾಂತ್ ನಂತರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದಿದ್ದರು.

ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಆಸ್ಟ್ರೇಲಿಯನ್ ಓಪನ್​ 2025 ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನವೆಂಬರ್ 23 ರಂದು ಸಿಡ್ನಿಯ ಸಿಡ್ನಿಯ ಸ್ಟೇಟ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಸೂಪರ್ 500 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಯುಶಿ ತನಕಾ ಅವರನ್ನು 21–15, 21–11 ನೇರ ಸೆಟ್‌ಗಳಿಂದ ಸೋಲಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿಎರಡನೇ ಶ್ರೇಯಾಂಕದ ತೈವಾನ್​ನ ಚೌ ಟಿಯೆನ್ ಚೆನ್ ವಿರುದ್ಧ ಗೆಲ್ಲಲು ಲಕ್ಷ್ಯ ಸೇನ್ ಬರೋಬ್ಬರಿ 86 ನಿಮಿಷಗಳನ್ನು ತೆಗೆದುಕೊಂಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಉತ್ತಮ ಲಯ ಪ್ರದರ್ಶಿಸಿದ ಲಕ್ಷ್ಯ , ಯುಶಿ ತನಕಾ ಅವರನ್ನು ಕೇವಲ 38 ನಿಮಿಷಗಳಲ್ಲಿ ಮಣಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಗೆದ್ದ ಎರಡನೇ ಭಾರತೀಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಯನ್ನು ಲಕ್ಷ್ಯ ಸೇನ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ 2017 ರಲ್ಲಿ  ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದಿದ್ದರು. ಇದೀಗ 24ನೇ ವಯಸ್ಸಿನಲ್ಲೇ ಆಸ್ಟ್ರೇಲಿಯನ್ ಓಪನ್​ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡುವ ಮೂಲಕ ಲಕ್ಷ್ಯ ಸೇನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

 

 

Published on: Nov 23, 2025 01:24 PM