ಜಮೀನು ವಿವಾದ ಆಸ್ಪತ್ರೆಯೊಳಗೂ ವಿಸ್ತರಿಸಿ ಅಣ್ಣತಮ್ಮಂದಿರು ಅಲ್ಲೇ ಹೊಡೆದಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 14, 2022 | 2:30 PM

ಮಹಿಳೆಯರು ಅಸಹಾಯಕತೆಯಿಂದ ಕಿರುಚಾಡುತ್ತಿರುವುದು ನಿಮಗೆ ಕೇಳಿಸುತ್ತದೆ. ಬೇರೆ ಕೆಲವರು ಜಗಳ ಬಿಡಿಸದೆ ಹೋಗಿದ್ದರೆ ಅವರನ್ನೂ ಆಸ್ಪತ್ರೆಗೆ ಸೇರಿಸಬೇಕಾಗುತಿತ್ತು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (Srirangapatna) ಜಗಳ ಯಾವ ಸ್ಥಳದಲ್ಲಿ ಬೇಕಾದರೂ ಅಗಬಹುದು ಮಾರಾಯ್ರೇ. ಇಲ್ಲಿ ನೋಡಿ, ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ (Taluk hospital) ಮಾರಾಮಾರಿ ಆಗುತ್ತಿದೆ. ಇದು ಜಮೀನಿಗೆ ಸಂಬಂಧಿಸಿದಂತೆ ದಾಯಾದಿಗಳ ಕಾದಾಟ. ಈ ಮೊದಲೇ ಅಣ್ಣ ತಮ್ಮಂದಿರು ಕಿತ್ತಾಡಿ ಹೊಡೆದಾಡಿ (fight) ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಮಕ್ಕಳು ಆಸ್ಪತ್ರೆಗೆ ದಾಯಾದಿಗಳ ಮಕ್ಕಳ ಹೊಡೆದಾಟ ಶುರುವಾಗಿದೆ. ಮಹಿಳೆಯರು ಅಸಹಾಯಕತೆಯಿಂದ ಕಿರುಚಾಡುತ್ತಿರುವುದು ನಿಮಗೆ ಕೇಳಿಸುತ್ತದೆ. ಬೇರೆ ಕೆಲವರು ಜಗಳ ಬಿಡಿಸದೆ ಹೋಗಿದ್ದರೆ ಅವರನ್ನೂ ಆಸ್ಪತ್ರೆಗೆ ಸೇರಿಸಬೇಕಾಗುತಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.