ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ ಪೊಲೀಸರ ಬಂಧನ ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು

ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ ಪೊಲೀಸರ ಬಂಧನ ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jun 14, 2022 | 3:22 PM

ಪೋಲಿಸರಿಂದ ತಪ್ಪಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳು ನೋಡುತ್ತಿದ್ದರೆ ಇದೆಲ್ಲ ಬೇಕಿತ್ತಾ ಅನಿಸದಿರದು. ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿ ಸಾಯಂಕಾಲ ಬಿಡುಗಡೆ ಮಾಡುತ್ತಾರೆ.

New Delhi: ಪ್ರಾಯಶಃ ಹೈ ಡ್ರಾಮಾಗೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದು ಸಿಗಲಾರದು ಮಾರಾಯ್ರೇ. ವಿಡಿಯೋನಲ್ಲಿ ಪೊಲೀಸರ ನಡುವೆ ಕಾಣುತ್ತಿರುವವರು ಯುವ ಕಾಂಗ್ರೆಸ್ (Congress) ನೇತಾರ ಶ್ರೀನಿವಾಸ (Srinivas). ದೆಹಲಿಯಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಈಡಿ (ED) ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಲಿಸರಿಂದ ತಪ್ಪಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳು ನೋಡುತ್ತಿದ್ದರೆ ಇದೆಲ್ಲ ಬೇಕಿತ್ತಾ ಅನಿಸದಿರದು. ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿ ಸಾಯಂಕಾಲ ಬಿಡುಗಡೆ ಮಾಡುತ್ತಾರೆ. ಅದರೆ ಶ್ರೀನಿವಾಸ ತನಗೆ ಜೀವಾವಧಿ ಶಿಕ್ಷೆ ಅಗುತ್ತದೆ ಅಂತ ಭಾವಿಸಿರುವಂತಿದೆ. ಅವರಂತೆ ಪ್ರತಿಭಟನೆ ಮಾಡುತ್ತಿದ್ದ ನೂರಾರು ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ಬಸ್ಸಲ್ಲಿ ಕೂರಿಸಿರುವುದನ್ನು ನೋಡಬಹುದು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 14, 2022 03:19 PM