Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್ ಅಧಿಕಾರಿ
ಉತ್ತರ ಪ್ರದೇಶದ ಕುಶಿನಗರದಲ್ಲಿ ಪೊಲೀಸರು ಮಹಿಳೆಯೊಬ್ಬಳ ಕೂದಲು ಹಿಡಿದು ಎಳೆದಿರುವ ಆರೋಪ ಕೇಳಿಬಂದಿದೆ. ಮಹಿಳಾ ಪೊಲೀಸ್ ಅಧಿಕಾರಿ ಅಲ್ಲಿದ್ದರೂ ಕೂಡ ಪುರುಷ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಕೂದಲನ್ನು ಹಿಡಿದು ಮೆಟ್ಟಿಲುಗಳ ಕೆಳಗೆ ಎಳೆದೊಯ್ದಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಕುಶಿನಗರದಲ್ಲಿ ಪೊಲೀಸರು ಮಹಿಳೆಯೊಬ್ಬಳ ಕೂದಲು ಹಿಡಿದು ಎಳೆದಿರುವ ಆರೋಪ ಕೇಳಿಬಂದಿದೆ. ಮಹಿಳಾ ಪೊಲೀಸ್ ಅಧಿಕಾರಿ ಅಲ್ಲಿದ್ದರೂ ಕೂಡ ಪುರುಷ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಕೂದಲನ್ನು ಹಿಡಿದು ಮೆಟ್ಟಿಲುಗಳ ಕೆಳಗೆ ಎಳೆದೊಯ್ದಿರುವ ವಿಡಿಯೋ ವೈರಲ್ ಆಗಿದೆ.
ತಮ್ಕುಹಿರಾಜ್ ತಹಸಿಲ್‌ನ ತಾರ್ಯಾಸುಜನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಡುಪರ್ ಮುಸ್ತಕಿಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಷಯ ಭೂ ವಿವಾದಕ್ಕೆ ಸಂಬಂಧಿಸಿದ್ದಾಗಿದೆ, ಈ ಸಂಬಂಧ ಕುಶಿನಗರ ಪೊಲೀಸರು ಹೇಳಿಕೆ ನೀಡಿದ್ದಾರೆ.
ಸತೀಶ್ ನಿಶಾದ್ ಎಂಬ ವ್ಯಕ್ತಿ ತನ್ನ ನೆರೆಯ ಅಮರ್ ನಿಶಾದ್ ಕುಟುಂಬದೊಂದಿಗೆ ಜಮೀನು ವಿವಾದವನ್ನು ಹೊಂದಿದ್ದಾನೆ.
ಈ ನಿಟ್ಟಿನಲ್ಲಿ ಎಸ್‌ಡಿಎಂ ಕಂದಾಯ ಮತ್ತು ಪೊಲೀಸರ ಜಂಟಿ ತಂಡವನ್ನು ರಚಿಸಿತ್ತು. ಸೆಕ್ಷನ್ 24ರ ಅಡಿಯಲ್ಲಿ ಕಂದಾಯ ತಂಡಕ್ಕೆ ಗಡಿ ಗುರುತಿಸಿ ಕಲ್ಲು ಹಾಕುವಂತೆ ಆದೇಶ ನೀಡಲಾಗಿತ್ತು. ಜಂಟಿ ತಂಡದ ಕ್ರಮದಿಂದ ಎರಡೂ ಕಡೆಯವರು ತೃಪ್ತರಾಗಿರಲಿಲ್ಲ. ಅಲ್ಲಿ ನಿರ್ಮಾಣ ಕಾರ್ಯವನ್ನು ಶುರು ಮಾಡಿದ್ದರು, ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯರು ಸೇರಿದಂತೆ 7 ಮಂದಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಠಾಣೆಯಲ್ಲೇ ಥಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 28, 2024 12:32 PM
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು

