Video: ಇಡುಕ್ಕಿಯಲ್ಲಿ ಭೂಕುಸಿತ, ಅವಶೇಷಗಳಡಿ ಸಿಲುಕಿರುವ ದಂಪತಿ
ಅಡಿಮಾಲಿಯ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಭೂಕುಸಿತ ಸಂಭವಿಸಿದ್ದು, ಒಂದು ಕುಟುಂಬ ಈ ಅವಶೇಷಗಳಡಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಬಿಜು ಮತ್ತು ಅವರ ಪತ್ನಿ ಸಂಧ್ಯಾ ಎಂದು ಗುರುತಿಸಲಾದ ಇಬ್ಬರು ಮನೆಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದಂಪತಿ ರಕ್ಷಣಾ ಸಿಬ್ಬಂದಿಗೆ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇಡುಕ್ಕಿಯ ಕೂಂಪನ್‌ಪಾರ ಬಳಿ ಭೂಕುಸಿತ ಸಂಭವಿಸಿದೆ.ಭೂ ಕುಸಿತದ ಎಚ್ಚರಿಕೆ ನೀಡಲಾಗಿದ್ದ ಕಾರಣ ಈ ಪ್ರದೇಶದ ಹಲವಾರು ಕುಟುಂಬಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ಮಣ್ಣು ನೇರವಾಗಿ ಮನೆಯ ಮೇಲೆ ಬಿದ್ದಿದ್ದು, ನಿವಾಸಿಗಳು ಒಳಗೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ಅಡಿಮಾಲಿ, ಅಕ್ಟೋಬರ್ 26: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಅಡಿಮಾಲಿಯ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಭೂಕುಸಿತ ಸಂಭವಿಸಿದ್ದು, ಒಂದು ಕುಟುಂಬ ಈ ಅವಶೇಷಗಳಡಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಬಿಜು ಮತ್ತು ಅವರ ಪತ್ನಿ ಸಂಧ್ಯಾ ಎಂದು ಗುರುತಿಸಲಾದ ಇಬ್ಬರು ಮನೆಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದಂಪತಿ ರಕ್ಷಣಾ ಸಿಬ್ಬಂದಿಗೆ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇಡುಕ್ಕಿಯ ಕೂಂಪನ್‌ಪಾರ ಬಳಿ ಭೂಕುಸಿತ ಸಂಭವಿಸಿದೆ.ಭೂ ಕುಸಿತದ ಎಚ್ಚರಿಕೆ ನೀಡಲಾಗಿದ್ದ ಕಾರಣ ಈ ಪ್ರದೇಶದ ಹಲವಾರು ಕುಟುಂಬಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ಮಣ್ಣು ನೇರವಾಗಿ ಮನೆಯ ಮೇಲೆ ಬಿದ್ದಿದ್ದು, ನಿವಾಸಿಗಳು ಒಳಗೆ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 26, 2025 07:48 AM
Latest Videos
ನಗರಸಭೆ ಪೌರಾಯುಕ್ತೆಗೆ ನಿಂದನೆ: ರಾಜೀವ್ ಗೌಡ ಪರ ಮುನಿಯಪ್ಪ ಬ್ಯಾಟಿಂಗ್
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದ ಪ್ರತಾಪ್

