ಪಾರ್ಶ್ವ ಸೂರ್ಯ ಗ್ರಹಣ ಗೋಚರ: ಕೃಷ್ಣ ನದಿ ಪಾತ್ರದಲ್ಲಿ ಹೋಮ-ಹವನ
ಪಾರ್ಶ್ವ ಸೂರ್ಯ ಗ್ರಹಣ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಸಮೀಪ ಕೃಷ್ಣ ನದಿ ಪಾತ್ರದಲ್ಲಿ ಹೋಮ-ಹವನ ಆಯೋಜಸಿಲಾಗಿತ್ತು.
ಬಾಗಲಕೋಟೆ: ಇಂದು (ಅ. 25) ಕರ್ನಾಟಕದ ಹಲವು ನಗರಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚವಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಸಮೀಪ ಕೃಷ್ಣ ನದಿ ಪಾತ್ರದಲ್ಲಿ ಹೋಮ-ಹವನ ಆಯೋಜಸಿಲಾಗಿತ್ತು. ಸಂಗಮೇಶ್ವರ ದೇವಸ್ಥಾನದ ಬಳಿ ಶ್ರದ್ಧಾ ಭಕ್ತಿಯಿಂದ ಜನರು ನದಿಯಲ್ಲಿ ಕುಳಿತು ಜಪತಪ ಮಾಡಿದರು. ಇನ್ನು ಸೂರ್ಯಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನು ಬಂದ ಮಾಡಲಾಗಿದ್ದು, ಗ್ರಹಣ ಮುಗಿದ ನಂತರ ಪುನಃ ತೆರೆಯಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.